ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nfo ಶ್ರೀಮದ್ಭಾಗವತವು [ಅಧ್ಯಾ. ಕೆ. ಲತುಂಟ ಕೃಷ್ಣಾ? ಮಣ್ಣನ್ನೇಕೆ ತಿಂದೆ ! ನಿನ್ನ ಸ್ನೇಹಿತರೆಲ್ಲರೂ ಹೇಳುವರು ನೋಡು! ನಿನ್ನಣ್ಣನಾದ ಬಲರಾಮನೂ ಇದಕ್ಕೆ ಸಾಕ್ಷಿ.”ಎಂ ದು ಗದರಿಸಿದಳು. ಅದಕ್ಕಾಕೃಷ್ಣನು ಅಮ್ಮಾ! ಇವರೊಬ್ಬರ ಮಾತ ನ್ಯೂ ಸೀನು ನಂಬಬೇಡ ! ಇವರೆಲ್ಲರೂ ನನ್ನ ಮೇಲೆ ಹೊಟ್ಟೆಕಿಚ್ಚಿನಿಂದ ಇಲ್ಲದ ದೂರನ್ನು ಹೇಳುವರು ! ಹಾಗೆ ನಿನಗೆ ನನ್ನ ಮಾತಿನಲ್ಲಿ ನಂಬಿಕೆಯಿಲ್ಲ ಒಬ್ಬರೆ, ಬಾಯನ್ನು ತೆರೆಯುವೆನು. ನನ್ನ ಮುಖದ ವಾಸನೆಯನ್ನು ನೋಡಿ ನೀನೇ ತಿಳಿಯಬಹುದು ” ಎಂದನು. ಅದಕ್ಕಾ ಯಶೋದೆಯು 'ಎಲ್ಲಿ! ಬಾಯಿಬಿಡು! ನೋಡುವೆನು”ಎಂದು ಹೇಳಲು,ರ್ಪಿತ್ಮಕನಾದ ಆ ಕೃಷ್ಣ ನು ತನ್ನ ಪ್ರಟ್ಟಬಾಯನ್ನು ತೆರೆದು ತೋರಿಸಿದನು. ಆಗಿನ ಆಶ್ಚದ್ಯವನ್ನು ಕೇ ಳಬೇಕೆ? ಆಗ ಯಶೋದೆಗೆ ಆ ಮುದ್ದು ಬಾಲಕನ ಪಟ್ಟಬಾಯಿಯಸ್ಲಿಯೇ ಸ್ಥಾವರಜಂಗಮ ತ್ಮಕವಾದ ಸಮಸ್ಯಬ್ರಹ್ಮಾಂಡವೂ ಏಕಕಾಲದಲ್ಲಿ ಗೋ ಚರಿಸಿತು. ಆ ಕಾಶ, ದಿಕ್ಕುಗಳು, ಸಮುದ್ರ,_ಪ ನನದ ಪಪ್ಪತಗುಡ ಗೂಡಿದ ಭೂಮಂಡಲ, ವಾಯುಮಂಡಲ, ಹೂ-ಚಂದ್ರ ನಕ್ಷತ್ರಗಳಿo ದ ತುಂಬಿದ ಜ್ಯೋತಿರ್ಮಂಡಲ, ಆವರಣ ಜಲ, ಸ್ವರ್ಗದ್ರೋರ್ಧ್ವಲೋಕ ಗಳು, ಆತಲಾದ್ಯಧೋಲೋಕಗಳು, ಸಿ-ಕಾಹಂಕಾರಕ ರಂಗದ ದಶೇಂ ಟ್ರಯಗಳು, ಮನಸ್ಸು, ತಮಸಾ ಹಂಕಾರಜನ್ಯಗಳಾದ ಶಾಂತನ್ಮಾತ್ರ ಗಳು, ಸತ್ವರಜಸ್ತಮೋಗುಣಗಳು, ಇವೆಲ್ಲವೂ ಆ ಕೃಷ್ಣನ ಬಾಯಲ್ಲಿ ಕಾಣಿ ಸಿರುವ ಸಮಸ್ತ ಜೀವರಾತಿಗಳೊಡನೆ, ಕಾಲ, ಗುಣ,ಕರ್ಮವಾಸನೆಗಳಿಂದ ನಾನಾರೂಪಭೇದವನ್ನು ಹೊಂದಿ ವಿಚಿತ್ರವಾಗಿರುವ ಜಗತ್ತೆಲ್ಲವೂ ಆ ಕೃ ವ್ಯನ ಬಾಯಲ್ಲಿ ಕಾಣಿಸುತ್ತಿದ್ದುವು. ಹೆಚ್ಚೇಕೆ? ಆಗ ಯಶೋದೆಯು ತನ್ನ ಮಗನ ಆ ಪಟ್ಟಬಾಯಲ್ಲಿಯೇ, ತನಗೆ ನಿವಾಸಸ್ಥಾನವಾದ ಗೋಕುಲವ ನ್ಯೂ , ಅದರಲ್ಲಿ ತನ್ನನ್ನೂ, ತನ್ನ ಸಮೀಪದಲ್ಲಿ ಬಾಯನ್ನು ತೆರೆದು ನಿಂತಿರುವ ತನ್ನ ಮುದ್ದು ಮಗನನ್ನೂ ಕಂಡಳು. ಆಗ ಅವಳ ಮನಸ್ಸಿ ನ ಆಶ್ಚದ್ಯವನ್ನು ಕೇಳಬೇಕೆ ? ಅವಳಿಗೆ ಒಗೃಮೆಹಿಡಿದಂತಾಯಿತು. ಏನೊಂದೂ ತೋರದೆ ಸ್ತಬ್ಬಳಾಗಿ ನಿಂತು ಯೋಚಿಸುವಳು, “ಆಹಾ! ಏನಿ ದು! ಈ ಸಣ್ಣ ಬಾಲಕನ ಬಾಯಲ್ಲಿ ಸಮಸ್ತಪ್ರಪಂಚವೂ ಕಾಣುತ್ತಿರುವು