ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೫೦ ಶ್ರೀಮದ್ಭಾಗವತವು - [ಅಧ್ಯಾ. 4, ವಸುದೇವನೂ, ಆಗ ಸುತನೆಂಬ ಪ್ರಜಾಧಿಪತಿಯಾಗಿ, ನಿನ್ನ ಭರ್ತನಾಗಿದ್ದ ನು. ಆಗ ಬ್ರಹ್ಮನು, ದಂಪತಿಗಳಾದ ಸಿಬ್ಬರನ್ನೂ ಪ್ರವಾಸೃಷ್ಟಿಕಾರಕ್ಕಾಗಿ ನಿಯಮಿಸಿದನು. ಆ ಕಾರೈಸಿರಾಹಕ್ಕಾಗಿ ನೀವಿಬ್ಬರೂ ಇಂದ್ರಿಯಗಳನ್ನು ನಿಗ್ರಹಿಸಿ, ದೃಢತಪಸ್ಸನ್ನು ಮಾಡತೊಡಗಿದಿರಿ ! ಆ ತಪಸ್ಸಿನಲ್ಲಿದ್ದಾಗ ನೀವು, ಮಳೆ, ಗಾಳಿ, ಚಳಿ, ಮುಂತಾದ ಋತುಧರ್ಮಗಳೊಂದನ್ನೂ ಲಕ್ಷ ಮಾಡದೆ, ಶೀತೋಷ್ಟಾದ್ವಂದ್ವದುಃಖಗಳೆಲ್ಲವನ್ನೂ ಸಹಿಸಿಕೊಂಡು, ರಜ ಮೋಗುಣಗಳಿಗೆ ಅವಕಾಶಕೊಡದಂತೆ, ಪ್ರಾಣವಾಯುವನ್ನು ನಿರೋ ಧಿಸಿ, ಆಗಾಗ ಮರದಂದುದಿಂದ ಹಣ್ಣೆಲೆಗಳನ್ನೂ, ಗಾಳಿಯನ್ನೂ ಆಹಾರ ವಾಗಿ ತೆಗೆದುಕೊಳ್ಳುತ್ತ, ನನ್ನನ್ನು ಕುರಿತು ದೃಢತಪಸ್ಸನ್ನು ಮಾಡುತಿದ್ದಿ ರಿ! ಹೀಗೆ ನೀವಿಬ್ಬರೂ ಹನ್ನೆರಡು ಸಾವಿರದಿವ್ಯವರ್ಷಗಳವರೆಗೆ ನನ್ನ ಕ್ಲಿಯೇ ನಟ್ಟ ಮನಸ್ಸುಳ್ಳವರಾಗಿ, ದೃಢಭಕ್ತಿಯಿಂದ ಧ್ಯಾನಿಸುತ್ತಿದ್ದಾಗ, ನಾನು ನಿಮ್ಮ ಭಕ್ತಿಗೂ, ಶ್ರದ್ಧೆಗೂ, ಸಂತುಷ್ಟನಾಗಿ, ನಿಮ್ಮ ಕೋರಿಕೆಯನ್ನು ಸಲ್ಲಿಸಬೇಕೆಂಬ ಉದ್ದೇಶದಿಂದ, ಇದೇ ಸವ್ಯಸ್ವರೂಪದೊಡನೆ ನಿಮಗೆ ಪ್ರತ್ಯಕ್ಷನಾಗಿ, ನಿಮಗೆ ಬೇಕಾದ ವರವನ್ನು ಕೇಳಿಕೊಳ್ಳುವಂತೆ ನಿಮ್ಮನ್ನು ಪ್ರೇರಿಸಿದನು. ಆಗ ನೀವಿಬ್ಬರೂ ನನಗೆ ಸಮಾನನಾದ,ಪುತ್ರನನ್ನೇ ಪಡೆಯ ಬೇಕೆಂದು ಪ್ರಾರ್ಥಿಸಿರಿ ! ಅಮ್ಮ ದೇವಕಿ: ನೀವಿಬ್ಬರೂ ಬಹುಕಾಲದಿಂದ ತಪಸ್ಸಿನಲ್ಲಿದ್ದು, ಗ್ರಾಮ್ಯಸುಖಗಳ ಆಸೆಯನ್ನೇ ತೊರೆದವರಾಗಿದ್ದರೂ ನನ್ನ ಮಾಯೆಯಿಂದ ಮೋಹಿತರಾಗಿ, ಮೋಕ್ಷಪ್ರದನಾದ ನಾನು ಪ್ರತ ಕ್ಷವಾಗಿರುವಾಗಲೂ, ನೀವು ನನ್ನಲ್ಲಿ ಉತ್ತಮಪುರುಷಾರವಾದ ಮಕಿ. ಯನ್ನು ಕೇಳಿಕೊಳ್ಳದ, ಅತ್ಯಲ್ಪವಾದ ಸಂತಾನಸುಖವನ್ನಪೇಕ್ಷಿಸಿರಿ ! ಸಿಮ್ಮ ಇಷ್ಟದಂತೆಯೇ ನಾನು ವರವನ್ನು ಕೊಟ್ಟು ಹೊರಟುಬಂದೆನು. ನಿಮ್ಮ ಕೋರಿಕಯು ಕೈಗೂಡಿದುದರಿಂದ, ನೀವು ಸಂತುಷ್ಟರಾಗಿ, ತಿರುಗಿ ಗ್ರಾಮ್ಯಭೋಗಗಳಲ್ಲಿ ಬಿದ್ದು, ಯಥೇಷ್ಟವಾದ ವಿಷಯಸುಖಗಳನ್ನನು ಭವಿಸುತ್ತಿದ್ದಿರಿ ! ಹಿಂದೆ ನಾನು ನಿಮಗೆ ಕೊಟ್ಟು ಬಂದ ವರವನ್ನು ಈಡೇರಿಸು ವ ಕಾಲವು ಬಂದಾಗ, ತೀಲ್ದಾರಾದಿಗುಣಗಳಲ್ಲಿ ನನಗೆ ಸಮಾನನಾದಬೇ ರೊಬ್ಬನನ್ನೂ ಕಾಣದೆ, ನಾನೇ ನಿಮ್ಮ ಗರ್ಭದಲ್ಲಿ ಜನಿಸಿ, ಪತ್ನಿಗರ್ಭನೆಂಬ