ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೧ ಅಧ್ಯಾ, ೩.] ದಶಮಸ್ಕಂಧವು, ಹೆಸರಿನಿಂದ ಪ್ರಸಿದ್ಧನಾಗಿದ್ದೆನು. ಆಮೇಲೆ ನೀವಿಬ್ಬರೇ ಮುಂದಿನ ಜನ್ಮ ದಲ್ಲಿ ಅತಿಕಶ್ಯಪರಾಗಿ ಹುಟ್ಟಿಸಿರಿ ! ಆಗಲೂ ನಾನು ನಿಮ್ಮ ಗರ್ಭದಲ್ಲಿ ಉಪೇಂದ್ರನೆಂಬ ಹೆಸರಿನಿಂದ ಹುಟ್ಟಿದನು. ನಾನು ನಿಮ್ಮ ಗರ್ಭದಲ್ಲಿ ಹು ೬ ವಾಗ, ಬಹಳ ಚಿಕ್ಕವನಾಗಿದ್ದುದರಿಂದ, ನನ್ನ ನ್ನು ವಾಮನನೆಂದೂ ಕರೆ ಯುತಿದ್ದರು ಹೀಗೆ ಎರಡುಜನ್ಮಗಳನ್ನು ಕಳೆದಮೇಲೆ, ನೀವೇ ತಿರುಗಿ ಈ ಮೂರನೆಯ ಜನ್ಮದಲ್ಲಿ ದೇವಕೀವಸುದೇವರೆಂಬ ಹೆಸರಿನಿಂದ ಹುಟ್ಟಿರುವಿರಿ! ಈ ಜನ್ಮದಲ್ಲಿಯೂ ನಾನು ನಿಮಗೆ ಮಗನಾಗಿ ಹುಟ್ಟಿದನು. ಹೀಗೆ ಹಿಂದಿನ ಜನ್ಮಗಳಲ್ಲಿ ನಮಗಿದ ಪರಸ್ಪರ ಸಂಬಂಧವನ್ನು ನಿಮ್ಮ ಸ್ಮರಣೆಗೆ ತರುವುದ ಕಾಗಿಯೇ, ನಾನು ಈಗ ನಿಮಗೆ ನನ್ನ ನಿಜಸ್ವರೂಪವನ್ನು ತೋರಿಸಬೇಕಾ ಯಿತು. ಅಮ್ಮಾ : ನನ್ನ ಮಾತು ಎಂದಿಗೂ ತಪ್ಪಲಾರದೆಂದು ಇದರಿಂದ ನೀವು ಚೆನ್ನಾಗಿ ತಿಳಿಯಬಹುದು. ಈಗ ನಾನು ಕೇವಲಪ್ರಾಕೃತ ಶುವಿನಂತಯೋ ಹುಟ್ಟಿದ್ದ ಪಕ್ಷದಲ್ಲಿ, ಮನುಷ್ಯರಾದ ನಿಮಗೆ ನನ್ನ ನಿಜಸ್ಥಿತಿ ಯು ತಿಳಿಯುವುದಕ್ಕೆ ಅವಕಾಶವಿಲ್ಲದಂತಾಗುತಿತ್ತು! ಈಗ ನೀವು ಪುತ್ರಭಾ ವದಿಂದ ನನ್ನ ಮೋಹವನ್ನಾಗಲಿ, ಪರಬ್ರಹ್ಮವೆಂಬ ಭಾವದಿಂದ ಒಮ್ಮೆ ಮೈ ಭಕ್ತಿಯನ್ನಾಗಲಿ ತೋರಿಸುವುದರಿಂದ, ನಿಮಗೆ ಉತ್ತಮಪುರುಷಾರ ವಾದ ನನ್ನ ಸಾ ಯಜ್ಯವು ಲಭಿಸುವುದರಲ್ಲಿ ಸಂದೇಹವಿಲ್ಲ ” ಎಂದು ಹೇಳಿ ಭಗವಂತನು, ಆ ದೇವಕೀವಸುದೇವರಿಬ್ಬರ ೧ ನೋಡುತ್ತಿರುವಾಗಲೇ ಮಾಯೆಯಿಂದ ತನ್ನ ಪರಸ್ವರೂಪವನ್ನು ಮರೆಸಿಕೊಂಡು, ಸಾಮಾನ್ಯವಾದ ಸಣ್ಣ ಮಗುವಿನಂತೆ ಕಾಣಿಸಿಕೊಂಡನು. ಈ ಸಮಯಕ್ಕೆ ಸರಿಯಾಗಿ ಒತ್ತಿ ಲಾಗಿ ಗೋಕುಲದಲ್ಲಿ ನಂದಸಿಂ ಗೊಲ್ಲನ ಭಾ*ಯಾದ ಯಶೋದೆಂಬ ವಳಲ್ಲಿ ಒಂದು ಹೆಣ್ಣು ಮಗು ಜನಿಸಿತು ಓ ರಾಜಾ! ಆ ಭಗವಂತನ ಮಾ ಯಾಶಕ್ತಿಯೇ ಆ ರೂಪದಿಂದ ಹುಟ್ಟಿತೆಂದತಿಳಿ! ಆಮೇಲೆ ಇತ್ತಲಾಗಿ ವಸು ದೇವನು, ಶಿರೂಪದಲ್ಲಿದ್ದ ಭಗವಂತನು ತನಗೆ ಸೂಚಿಸಿದ...ಮುಂದ, ಆ ತಿಕವನ್ನು ಗೋಕುಲದಾದ ನಂದನೆಂಬ ಗೊಲ್ಲನ ಮನೆಗೆ ಸಾಗಿಸುವುದ ಕಾಗಿ ಯತ್ನಿಸಿದನು. ಆಗ ಭಗವಂತನ ಸಂಕಲ್ಪಶಕ್ತಿಯನ್ನು ಕೇಳಬೇಕೆ? ವಸುದೇವನು ಆ ಶಿಶುವನ್ನೆತ್ತಿಕೊಂಡು ಪ್ರಸವಗೃಹದಿಂದ ಹೊರಗೆ ಹೋ