ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ಶ್ರೀಮದ್ಭಾಗವತವು ಅಧ್ಯಾ, & ರಡುದಕ್ಕೆ ಯತ್ರಿ ಸಿದೊಡನೆ, ಅಲ್ಲಿ ದೃಢವಾದ ಕದಗಳಿಂದಲೂ, ದೊಡ್ಡ ದೊಡ್ಡ ಆಗಳಿಗಳಿಂದಲೂ, ಉಕ್ಕಿನ ಸರಪಣಿಗಳಿಂದಲೂ ಬಿಗಿಯಲ್ಪಟ್ಟಿದ ಆ ಸೆರೆಮನೆಯ ಬಾಗಿಲುಗಳೆಲ್ಲವೂ ತಾನಾಗಿಯೇ ತೆರೆದುಕೊಂಡು ಅಲ್ಲಿ ರಾತ್ರಿ ಹಗಲೆನ್ನದೆ ಎಚ್ಚರಂದ ಕಾಯುತಿದ್ದ ಕಾವಲಿನವರೆಲ್ಲರೂ, ಗಾಢ ನಿದ್ರೆಯಿಂದ ಮೈಮರೆತು, ಹವಾಯಾಗಿ ಒಬ್ಬ ದ್ಯರು ಪುರಜನರೆಲ್ಲ ರೂ ಮೈ ಮೇಲೆ ಪ್ರಜ್ಞೆಯಿಲ್ಲದೆ ನಿದ್ರಿಸುತಿದ್ದರು. ವಸುದೇವನು ಆ ತಿರುವ ನ್ನು ಕೈಗೆತ್ತಿಕೊಂಡು ನಿಂತೊಡನೆ, ಸೂದಯವಾಗ ಅ೦ಧಕಾರ ವು ಹೇಗೋ ಹಾಗೆ ಅಲ್ಲಅಡಚಣೆಗಳೆಲ್ಲವೂ ತಪ್ಪಿ ಹೋದುವು. ಬೀದಿ ಯಲ್ಲಿ ಜನಸಂಚಾರಕ್ಕೆ ಅವಕಾಶವಿಲ್ಲದಂತೆ, ಹಿಂCಡುಗುಡುಗುಗಳೊಡನೆ ಮೇ ಫುಗಳು ದೊಡ್ಡ ಮಳೆಯನ್ನು ಕರೆಯಲಾರಂಭಿಸಿದುವ್ರ ಹಿಗೆ ಗಾ ಫಾಲಧ ಕಾರದಲ್ಲಿ, ದೊಡ್ಡಮಳೆಯು ಸುರಿಯುತ್ತಿರುವಾಗ, ವಸುದೇವನು ತಿರು ವನ್ನೆತ್ತಿಕೊಂಡು ಹೊರಗೆ ಬರುವಷ್ಟರಲ್ಲಿ, ೧೩ ಬ೨ಷನು, ಆ ಕಿವಿನಯೇ ಲೆ ಮಳೆಯ ಹನಿಗಳು ಬೀಳದಂತೆ,ಕೊರಯಾಗೆ, ತನ್ನ ಹೆಡೆಗಳನ್ನು ಬಿಚ್ಚಿ ಕಂಡು ವಸುದೇವನನ್ನು ಹಿಂಬಾಲಿಸಿಬರುತಿದನು. ಹೀಗೆ ವಸುದೇವನು ಶಿಶುವನ್ನೆತ್ತಿಕೊಂಡು ಬರುವ ದಾರಿಯಲ್ಲಿ ಯಮುನಾದಯು ಅಡ್ಡಲಾಗಿ ಪ್ರವಹಿಸುತಿತ್ತು. ಆಗ ಎಡೆಬಿಡದೆ ಮಳೆ ಯು ಸವಿಯುತ್ತಿದ್ದುದರಿಂದ, ಅವ ರಲ್ಲಿ ಪ್ರವಾಹವು ಉಕ್ಕಿಬರುತಿತ್ತು ಅಲೆಗಳಿಂದಲೂ, ಸುಳಗಳಿಂದಲೂ ಆ ನದೀಪ್ರವಾಹವು ನೋಡುವಾಗಲೆ ಬಹಳಭಯವನ್ನು ಹುಟ್ಟುವಂತಿ ಒರೂ, ವಸುದೇವನು ಆ ಶಿಶುವನ್ನೆತ್ತಿಕೊಂಡು, ಅದರ ತೀರಪ್ರದೇಶಕ್ಕೆ ಬಂದೊಡನೆ, ಪೂರದಲ್ಲಿ ಶ್ರೀರಾಮನಿಗೆ ಸಮುದ್ರವು ಹೇಗೋಹಾಗೆ ಯ ಮುನಾನಯು ತನ್ನ ಪ್ರವಾಹವನ್ನು ಡಗಿಸಿಕೊಂಡು, ನಡುವೆ ದಾರಿಯನ್ನು ಕೊಟ್ಟಿತು. ವಸುದೇವನು ಆ ನದಿಯನ್ನೂ ಸುಲಭವಾಗಿ ದಾಟಿ, ನಂದನ ಮನೆಗೆ ಬರುವಷ್ಟರಲ್ಲಿ, ಅಲ್ಲಿ ಗೋಪಾಲಕರೆಲ್ಲರಿಗೂ, ಮೈಮರೆಯು ವಂತೆ ಗಾಢನಿದ್ರೆಯುಂಟಾಯಿತುಹೀಗೆ ಯಶೋದೆ ಮುಂತಾಗಿ ಅಲ್ಲಿದ್ದ ವರೆಲ್ಲರೂ ಮೈ ಮೇಲೆ ಪ್ರಜ್ಞೆಯಿಲ್ಲದೆ ನಿದ್ರಿಸುತ್ತಿರುವಾಗ, ವಸುದೇವನು ತನ್ನ ಕೈಯಲ್ಲಿದ್ದ ತಿಶುವನ್ನು ಆ ಯಶೋದೆಯ ಮಗ್ಗುಲಲ್ಲಿ ಮೆಲ್ಲಗೆ ಮಲ