ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•೧೫೪ 8 ಶ್ರೀಮದ್ಭಾಗವತವು [ಅಧ್ಯಾ. ೪ ಇದೇ ದೇವಕಿಯ ಎಂಟನೆಯ ಗರ್ಭಶಿಶುವಾದುದರಿಂದ, ಈಗಲೇ ಅದನ್ನು ತೀರಿಸಿಬಿಡಬೇಕು” ಎಂದು ನಿಶ್ಚಯಿಸಿ, ಬಿಚ್ಚಿದ ತಲೆಯೊಡನೆ ತತ್ತರಿಸಿ ಬಿಳು, ಪ್ರಸವಗೃಹಕ್ಕೆ ಓಡಿಬಂದನು. ಕಂಸನು ಬಂದುದನ್ನು ಕಂ ರೂಡನೆ ದೇವಕಿಯು ಭಯದಿಂದ ನಡುಗುತ್ತ, ಬಹಳದೈನ್ಯದಿಂದ ಅವ ಸಿಗೆ ಕೈಮುಗಿದುನಿಂತು ಹೀಗೆಂದು ಪ್ರಾರ್ಥಿಸಿದಳು 14 ಅಣ್ಣ! ನೀನು ನನಗೆ ಕ್ಷೇಮಚಿಂತಕನಲ್ಲವೆ ? ಇದು ಹೆಣ್ಣು ಕೂಸು : ಇದರಮೇಲೆ ನಿನಗೆ ಸೋದರಸೊಸೆ ! ಇದು ನಿನ್ನನ್ನೇನು ಮಾಡಬಲ್ಲುದು?ಇದನ್ನು ಕೊಲ್ಲಬೇಡ? ಅಣ್ಣಾ ! ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲಿ ಇದುವರೆಗೆ ನೀನು ಕೊಂ ದುದು ಒಂದಲ್ಲ ! ಎರಡಲ್ಲ ! ಅಗ್ನಿ ಜ್ವಾಲೆಗಳಂತಿದ್ದ ಆರೇಳುಮಕ್ಕಳನ್ನೂ ನಿನ್ನ ಕೈಯಿಂದಲೇ ಕೊಂದಲ್ಲಾ ! ಅಯ್ಯೋ ! ಹಾಳುವವು ನನ್ನ ಮ ಕ್ಕಳಿಗೆ ನಿನ್ನನ್ನೆ ಮೃತ್ಯುವನ್ನಾಗಿ ಏರ್ಪಡಿಸಿತೆ ! ನಿನಗೆ ಮನಸ್ಸಿನಲ್ಲಿ ಸ್ವಲ್ಪ ವಾದರೂ ಮರುಕವೇ ಬೇಡವೆ ? ಅಣ್ಣಾ ! ಇದುವರೆಗೆ ನನಗೆ ಹುಟ್ಟಿದ ಗಂಡು ಮಕ್ಕಳೆಲ್ಲರನ್ನೂ ಕೊಂದೆಯಲ್ಲವೆ? ಹೋದುದುಹೋಗಲಿ? ಇದೊಂ ದು ಮಗುವನ್ನಾದರೂ ಬಿಟ್ಟುಕೊಡು ! ಈ ಕೊನೆಯ ತಿಕವನ್ನಾದರೂ ನೋಡಿ ಮನಸ್ಸಮಾಧಾನ ಮಾಡಿಕೊಳ್ಳುವೆನು! ಕೈ ಮುಗಿದು ಬೇಡುವೆನು.” ಎಂದು ದೀವಧ್ವಸಿಯಿಂದ ಮೊರೆಯಿಟ್ಟಳು ಹೀಗೆ ದೇವಕಿಯು ಆ ಕೂಸನ್ನು ಬಿಡಲಾರದೆ ಎದೆಯಮೇಲಿಟ್ಟು, ಎರಡು ತೋಳುಗಳಿಂದಲೂ ಬಿಗಿಯಾಗಿ ಅಪ್ಪಿ ಹಿಡಿದುಕೊಂಡು, ಬಹಳ ದೈನ್ಯಬಲದ ಗ್ರಾರ್ಧಿಸುತಿದ್ದ, ಆ ಾರಾ ತ್ಮನಾದ ಕಂಸನು, ಅವಳ ಮಾತಿಗೆ ಲಕ್ಷಕೊಡದೆ, ಮನಸ್ಸಿಸ್ವಲ್ಪ ಮಾ ತ್ರವೂ ಮಂಕವಿಲ್ಲದೆ, ಆ ದೇವಕಿಯನ್ನು ಹುಂಕಾರದಿಂದ ಹೆದರಿಸಿ, ಇನ್ನೂ ಕಣ್ಣು ತೆರೆಯದೆ ಆ ಸಣ್ಣ ಕೂಸನ್ನು, ಬಲಾತ್ಕಾರಪೂರೈಕವಾಗಿ ಅವಳ ಕೈ ಯಿಂದ ಕಿತ್ತುಕೊಂಡನು. ಹೀಗೆ ನೀಚನಾದ ಕಂಸನು ಸ್ವಪ್ರಯೋಜ ನಾಪೇಕ್ಷೆಯಿಂದ ಸಹೋದರಿತಿಯನ್ನೂ ತೊರೆದು, ಆ ಕೂಸನ್ನು ಕಿ ತುಕೊಂಡಮೇಲೆ, ಹಿಂದಿನ ಶಿಶುಗಳನ್ನು ಕೊಂದಂತೆಯೇ, ಅದನ್ನೂ ಕೂ ಲ್ಲುವುದಕ್ಕಾಗಿ, ಆ ಕೂಸಿನ ಕಾಲುಗಳೆರಡನ್ನೂ ಜೋಡಿಸಿ ತಲೆಕೆಳಗಾಗಿ ಹಿಡಿದು, (ಆಗಸರು ಬಟ್ಟೆಯನ್ನೊಗೆಯುವಂತೆ ಅದನ್ನು ಒಂದು ಕಲ್ಲುಬಂ 0