ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ws ಕೈ ಓ ಆಧ್ಯಾ, ೪.] ದಶಮಸ್ಕಂಧವ. ಡೆಯ ಮೇಲೆ ಅಪ್ಪಳಿಸಿಬಡಿದನು. ಇಷ್ಟರಲ್ಲಿಯೇ ಭಗವಂತನ ಮಾಯೆ ಯಾದ ಆ ಶಿಶುವು. ಕಂಸ ಕೈಯಿಂದ ಮೇಲಕ್ಕೆ ಪಟಾರಿ, ಆಕಾಶದಲ್ಲಿ ತನ್ನ ನಿಜಸ್ವರೂಪದಿಂದ ಕಾಣಿಸಿಕೊಂಡಿತು. ಆ ಅದ್ಭುತಾಕೃತಿಯನ್ನು ಕೇಳಬೇಕೆ? ಪ್ರತದಂತೆ ದೊಡ್ಡ ಆಕೃತಿ! ಆ ಆಕೃತಿಗೆ ತಕ್ಕಂತೆ ಆಯುಧಸಹಿತವಾದ ಆತ್ಮಭುಜಗಳು ! ಕಂಠದಲ್ಲಿ ಹವ್ಯಪುಷ್ಪಮಾಲಿಕೆ ! ದಿವ್ಯವಸಾನುಲೇಪನಗಳು! ಸಾಂಗಗಳಲ್ಲಿಯೂ ಬವರತ್ರಾಭರಣಗಳು! ಎಂದುಭುಜಗಳಲ್ಲಿಯೂ ಕ್ರಮವಾಗಿ, ಬಿಲ್ಲು, ಬಾಣ, ಶೂಲ, ಕತ್ತಿ! ಗುರಾ ಣ, ಶಂಖ, ಚಕ್ರ, ಗದೆಗಳೆಂಬ ಎಂಟು ದಿವಾ ಯುಧಗಳು. ! ಇಂತಹ ಅದ್ಭುತಾಕೃತಿಯಿಂದ ಕಾಣಿಸಿಕೊಂಡ ಆ ಮಾಯಾದೇಪಿಯಸುತ್ತಲೂ, ದಚಾರಣ, ಗಂಧ, ಕಿನ್ನರ.ಅಪ್ಪರಸ್ಸುಗಳೇ ಮೊದಲಾದ ದೇವಜಾತಿಯ ವರೆಲ್ಲರೂ, ನಾನಾವಿಧವಾದ ಕೈ ಕಾಣಿಕೆಗಳನ್ನು ತಂದೊಪ್ಪಿಸಿ, ಸ್ತುತಿ ಸುತಿದ್ದರು.ಇಂತಹ ಮಹಾವೈಭವದೊಡನೆ, ಆ ದೇವಿಯು ಆಕಾಶದಲ್ಲಿ ಈ ಣಿಸಿಕೊಂಡು, ಕಂಸನನ್ನು ಕುರಿತು? (ಎಲೆಮಘಾ ನನ್ನನ್ನು ನೀನು ಕೊಲ್ಲ ಬಲ್ಲೆಯಾ? ಅಥವಾ ನನ್ನನ್ನು ಕೊಂದರೂ ನಿನಗೆ ಪ್ರಯೋಜನವೇನು? ಮೊ ದಲು ಅಶರೀರವಾಣಿಯು ನಿನಗೆ ಸೂಚಿಸಿದಂತೆ, ನಿನ್ನನ್ನು ಕೊನೆಗಾಣಿಸ ತಕ್ಕ ಶತ್ರುವು ಬೇರೊಂದುಕಡೆಯಲ್ಲಿ ಬೆಳೆಯುತ್ತಿರುವನು. ಆದುದರಿಂದ ಈ ನಿನ್ನ ಹಣೆಯಬರಹವನ್ನು ತಪ್ಪಿಸಿಕೊಳ್ಳುವುದಕ್ಕೆ ಸಿಕ್ಕಿಂದ ಸಾಧ್ಯವೆ ?ಇನ್ನು ಮೇಲಾದರೂ ವ್ಯರ್ಥವಾಗಿ ನೀವು ಇಂತಹ ಹಿಂಸಾ ಕಾದ್ಯವನ್ನು ಮಾಡ ಬೇಡ !” ಎಂದಳು, ಹೀಗೆಂದು ಹೇಳಿ, ಭಗವತಿಯಾದ ಯೋಗಮಾಯೆಯು ಆಸ್ಥಳವನ್ನು ಬಿಟ್ಟು, ಕಣ್ಮರೆಯಾಗಿ, ದರ್ಗಿ, ಕಾಳಿ, ಮುಂತಾದ ಬೇರೆಬೇರೆ ನಾ ಮಾಂತರಗಳಿಂದ ಬೇರೆಬೇರೆ ಸ್ಥಳಗಳಲ್ಲಿ ನೆಲೆಗೊಂಡಳು. ರಾಜೇಂದ್ರಾ! ಆ ಪಿಷ್ಟು ಶಕ್ತಿಯೇ ಈಗಲೂ ಜನರಿಂದ ಗ್ರಾಮದೇವತೆಗಳ ರೂಪದಿಂದ ಪೂಜಿಸಲ್ಪಡುವಳು. ಇತ್ತಲಾಗಿ ಕಂಸನಿಗೆ ನಡೆದ ಸಂಗತಿಗಳೆಲ್ಲವನ್ನೂ ನೋ a ಅತ್ಯಾಕ್ಷರವುಂಟಾಯಿತು. ಇನ್ನು ಮೇಲೆ ಆತ್ಮರಕ್ಷಣಾರವಾಗಿ ತಾನು ಯಾವ ಉಪಾಯವನ್ನು ನಡೆಸಿದರೂ ಪ್ರಯೋಜನವಿಲ್ಲವೆಂದು ತೋರಿತು. ಶಿಶುಹತ್ಯೆ ಮೊದಲಾಗಿ ಅದುವರೆಗೆ ತಾನು ನಡೆಸಿದ ಘೋರಕೃತ್ಯಗಳ ವಿಷ