ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧.೭೫೮ ಶ್ರೀಮದ್ಭಾಗವತವು [ಅಧ್ಯಾ, ೪: ಹಿಂಸಸಬೇಡವೆಂದು ಹೇಳಿದ ಮಾತನ್ನೂ ಸ್ಮರಿಸಿಕೊಂಡು, ಅವರಲ್ಲಿ ವೈ ರಬುದ್ಧಿಯನ್ನು ಬಿಟ್ಟು, ಅವರ ಸಂಕೊಲೆಗಳನ್ನು ತಾನೇ ಕೈಯಿಂದ ಬಿಚ್ಚಿ, ಹಿಂದೆ ಯಾವಾಗಲೂ ಇಲ್ಲದ ಬಂಧುಪ್ರೀತಿಯನ್ನೂ ತೋರಿಸುತ್ತಿದ್ದನು. ಹೀ ಗೆ ಕಂಸನು ಹಿಂದೆ ತನು ಮಾಡಿದ ಆಕೃತ್ಯಗಳಿಗಾಗಿ ಪಶ್ಚಾತಾಪಗೊಂ ಡು, ಕಾಲಮೇಲೆ ಬಿದ್ದು ಕ್ಷಮೆಯನ್ನು ಬೇಡುತ್ತಿರುವುದನ್ನು ನೋಡಿ.ದೇವಕಿ ಗೂ ಅವನಲ್ಲಿ ಕನಿಕರವು ತಟ್ಟಿತು. ಅವಳ ಮನಸ್ಸಿನಲ್ಲಿ ಕೋಪವನ್ನು ಮತ ಅವನನ್ನು ಮನ್ನಿಸಿ ಸುಮ್ಮನಾದಳು ವಸುದೇವನೂ ಆ ಕಂಸನ ದುರ್ಬುದ್ಧಿಗಾಗಿ ಪಶ್ಚಾತ್ತಾಪಪಡುತ್ತ, ಹಾಸ್ಯಪೂರ್ವಕವಾಗಿ ಅವನನ್ನು ಕುರಿತು ಓ ಮಹಾರಾಜ! ನೀನು ಹೇಳಿದುದೇ ವಾಸ್ತವವು ! ಪ್ರಾಣಿ ಗಳಿಗೆ ಅಹಂಭಾವವೆಂಬುದು ಅಜ್ಞಾನದಿಂದಲೇ ಉಂಟಾಗುವುದು. ಈ ಅಹಂ ಭಾವವಿದ್ದಾಗಲೇ ತಾ ನೆಂದೂ, ಇತರನೆಂದೂ ಭೇದಬುಕ್ಕಿಯು ಹುಟ್ಟುವು ದು ಆತ್ಮಕ್ಕಿಂತಲೂ, ಬೇರೆಯಾದ ಶರೀರವನ್ನೇ ಅತ್ಯವೆಂದು ತಿಳಿದಿರುವವ ನಿಗೆ, ದುಃಖ, ಹರ್ಷ, ಭಯ, ದ್ವೇಷ, ಲೋಭ, ಮೋಹ, ಮದ, ಮೊ ದಲಾದ ವಿಕಾರಗಳೆಲ್ಲವೂ ಹುಟ್ಟುತ್ತಿರುವುವು. ಈ ದೇಹ ಭಿಮಾನವುಳ್ಳವನಿಗೆ ತಾನೆಂದೂ, ಇತರರೆಂದೂ ಭೇದಬುಯೋಂದುಮಾತ್ರ ಇರುವುದೇ ಹೊರತು, ತಮ್ಮೆಲ್ಲರಿಗೂ ಸಿಯಾಮಕನಾದ ಈಶ್ವರನೊಬ್ಬರುಂಟಿಂಬ ಭಾ ವವೇ ಮರೆತುಹೋಗುವುದು ಇದಕ್ಕೆ ನೀನೇ ನಿದರ್ಶನವಾಗಿರುವೆ” ಎಂದ ನು ಹೀಗೆ ದೇವಕೀವಸುದೇವರಿಬ್ಬರೂ ಕೆ ಪವನ್ನು ಮರೆತು, ತನ್ನ ಪ್ರಸನ್ನರಾಗಿ ಸಲಿಗೆಯಿಂದ ಮಾತಾಡಿದಮೇಲೆ,ಕಂಸನು ಅವರ ಅನುಮತಿ ಯನ್ನು ಪಡೆದು, ಅಲ್ಲಿಂದ ಹಿಂತಿರುಗಿ ತನ್ನ ನಿವಾಸಕ್ಕೆ ಬಂದು ಸೇರಿದನು. ಆ ರಾತ್ರಿಯು ಕಳೆದು ಬೆಳಗಾದಕೂಡಲೆ, ಕಂಸನು ತನ್ನ ಮಂತ್ರಿ ಗಳನ್ನು ಕರೆದು, ರಾತ್ರಿಯಲ್ಲಿ ನಡೆದ ಸಂಗತಿಗಳನ್ನೂ , ಯೋಗಮಾಯೆಯ ತನಗೆ ಸೂಚಿಸಿದ ವಿಷಯವನ್ನೂ ಅವರಿಗೆ ತಿಳಿಸಿದನು. ಈತನಂತೆಯೇ ಅವನ ಸಹವಾಸಿಗಳೆಲ್ಲರೂ, ದೇವಶತ್ರುಗಳಾಗಿ, ರಾಕ್ಷಸಾಂತದಿಂದಲೇ ಹುಟ್ಟಿದವ ರಾದುದರಿಂದ, ಯುಕಾಯುಕ್ತ ವಿವೇಚನೆಯಿಲ್ಲದೆ, ಕಂಸನಿಗೆ ದುರ್ಬೋ ಧನೆಯನ್ನು ಮಾಡತೊಡಗಿ ಹೀಗಂದು ಹೇಳುವರು 14 ಓ ಕಂಸರಾಜಾ ?