ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೫.] ದಶಮಸ್ಕಂಧವು. ೧೬೬೩ ಸ್ನ ವಶೌಚಾದಿಗಳಿಂದಲೂ, ಜಾತಕಾಲಸಂಸ್ಕಾರಗಳಿಂದಲೂ, ಮಂತ್ರ ಪದಿಂದಲೂ, ಯಾಗದಿಂದಲೂ, ಪಾನಧರ್ಮಗಳಿಂದಲೂ, ಮನಸ್ಸಂತುಷಿ. ಯಿಂದಲೂ, ಅವನ ದೇಹಕ್ಕೂ, ಮನೆಗೂ, ಗೃಹದೇವತೆಗೂ, ಪಶು ಹಿರ ಣ್ಯ, ಮೊದಲಾದ ಇತರದ್ರವ್ಯಗಳಿಗೂ ಆತಶುದ್ಧಿಯಾಗುವುದು. ನಂದ ನ ಈ ನಿಯಮವನ್ನು ಬಲ್ಲವನಾದುದರಿಂದ, ಅದೇಕ್ರಮದಿಂದ ಶು ಕಾವ್ಯಗಳೆಲ್ಲವನ್ನೂ ನಡೆಸಿದನು ಬ್ರಾಹ್ಮಣರು ಸ್ವಸ್ತಿವಾಚನಗಳನ್ನು ನಡೆ ಸಿದರು. * ಸೂತ ಮಾಗಧ, ವಂತ, ಗಾಯಕರು ಗಾನಮಾಡುತಿದ್ದರು. ಭೇರಿ, ದುಂದುಭಿ, ಮೊದಲಾದ ಮಂಗಳವಾದ್ಯಗಳು ಮೊಳಗುತ್ತಿದ್ದುವು. ನಂದಸಿಗೆ ಪತ್ರೋತ್ಸವವಾಯಿತೆಂಬ ಸಂತೋಷದಿಂದ, ಆ ಗೋಕುಲ ದಲ್ಲಿದ್ದವರೂ, ಮನೆಮನೆಯ ಬಾಗಿಲುಗಳನ್ನೂ ,ಅಂಗಳಗಳನ್ನೂ ಸಾರಿಸಿ, ಸುಗಂಧಜಲವನ್ನು ಸೇಚನಮಾಡಿ,ರಂಗೋಲೆಗಳಿಂದ ಅಲಂಕರಿಸಿಟ್ಟರು.ಎಲ್ಲಿ ನೋಡಿದರೂ, ಚಿತ್ರವಿಚಿತ್ರಗಳಾದ ಧ್ವಜಪತಾಕೆಗಳೂ, ಪ್ರಷ್ಟಹಾರಗ ಳೂ, ಚಿಗುರಿನ ತೋರಣಗಳೂ, ಪಟ್ಟಮಯ ಜಾಲರಿಗಳೂ ಕಂಗೊಳಿ ಸುತಿದ್ದುವ, ಗೋಕುಲದಲ್ಲದ ಹಸುಗಳನ್ನೂ, ಎತ್ತುಗಳನ್ನೂ, ಕರು ಗಳನ್ನೂ, ಅರಿಸಿನ ಕುಂಕುಮಗಳಿಂದಲೂ, ಆರಿದಳೆ ಮುಂತಾದ ಬಣ್ಣಗ ಳಿಂದಲೂ, ನವಿಲುಗರಿಗಳಂದ, ವಸ್ತ್ರಗಳಿಂದಲೂ, ಸುವರ್ಣ ಮಾ ಲಿಕೆಗಳಿಂದಲೂ ಅಲಂಕರಿಸಿದರು. ಆ ಹಳ್ಳಿಯಲ್ಲಿದ್ದ ಗೋಪಾಲಕರೆಲ್ಲರೂ, ಅಂಗಿ, ತಲೆಪಾಗು, ಮುಂತಾದ ಬೆಲೆಯುಳ್ಳ ವಸ್ತ್ರಗಳಿಂದಲ, ಆಭರಣಗ ಳಿಂದಲೂ,ತಮ್ಮ ದೇಹವನ್ನ ಲಂಕರಿಸಿಕೊಂಡು,ಬಗೆಬಗೆಯ ಕೈಕಾಣಿಕೆಗಳನ್ನು ತಂದು ನಂದನಿಗೆ ಒಪ್ಪಿಸುತಿದ್ದರು ಗೋಪಸ್ತ್ರೀಯರೂಕೂಡ, ಯಶೋ ದೆಗೆ ಗಂಡುಮಗುವಾದುದನ್ನು ಕೇಳಿ, ಪರಮಸಂತೋಷಗೊಂಡವರಾಗಿ, ವಸ್ತ್ರಾಭರಣಗಳಿಂದಲೂ, ಕಣ್ಣುಕಪ್ಪ ಮೊದಲಾದ ಅನುಲೇಪನಗಳಿಂದ ಲೂ ತಮ್ಮ ದೇಹವನ್ನು ಶೃಂಗರಿಸಿಕೊಂಡು, ಕುಂಕುಮಾನುಲೇಪ + ಶರಾಕ ಹೇಳತಕ್ಕವರಿಗ, ವಂಶಾವಳಿಯನ್ನು ಕೀರ್ತಿಸತಕ್ಕವರಿಗ. ಸ್ತುತಿರಾತಕ (ಹೊಗಳುಭಟ್ಟ)ರಿಗೂ ಕ್ರಮವಾಗಿ, ಸ, ಮಗಧ, ವಂದಿಗಳೆಂದು ಹಸರು.