ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

need ಶ್ರೀಮದ್ಭಾಗವತವು [ಅಧ್ಯಾ. ೬. ತೋಷದಿಂದ ಸ್ತನ್ಯಪಾನಮಾಡುವಂತೆ ಅವಳ ಸ್ತನವನ್ನು ಮರ್ದಿಸಿ ಅದೇ ನೆವದಿಂದ ಪ್ರಾಣಗಳನ್ನೇ ಹೀರುತ್ತ ಬಂದನು. ಆ ರಾಕ್ಷಸಿಗೆ ಜೀವಾಧಾರವಾದ ಮದ್ಯ ಸ್ಥಾನಗಳೆಲ್ಲವೂ ಕದಲಿ, ಅಂಗಾಂಗಗಳಲ್ಲಿ ಯೂ ಸಹಿಸಲಾರದ ಬಾಧೆಯುಂಟಾಯಿತು. ಆ ನೋವನ್ನು ತಡೆಯಲಾ ರದೆ ( ಅಯ್ಯೋ ! ಸಾಕುಸಾಕು ! ಬಿಡು ಬಿಡು ” ಎಂಧು ಆರ್ತಸ್ವರಯಂದ ಆರಚಿಕೊಳ್ಳುತ್ತ, ಆ ಮಗುವಿನ ಬಾಯಿಂದ ತನ್ನ ಸ್ತನವನ್ನು ಬಿಡಿಸಿಕೊ ಳ್ಳುವುದಕ್ಕೆ ಯತ್ನಿಸುವಷ್ಟರಲ್ಲಿ, ಅವಳಿಗೆ ಉತ್ನಮಣಾವಸ್ಥೆಯಿಂ ದ ಕಣಾಲೆಗಳು ಮೇಲೆ ನಾಟಿಕೊಂಡವು. ಮೈಯೆಲ್ಲವೂ ಬೆವತುಹೋ ಯಿತು. ಆರ್ತಧ್ವನಿಯಿಂದ ಕೂಗುತ್ತ ಕೈ ಕಾಲುಗಳನ್ನಗಲಿಸಿ ಕೆಳಗೆ ಬಿದ್ದು ಪ್ರಾಣವನ್ನೂ ಬಿಟ್ಟಳು. ಅವಳು ಮಾಯೆಯಿಂದ ತೋರಿಸು ತಿಮ್ಮ ಸೌಮ್ಯರೂಪವು ಹೋಗಿ, ಸಹಜವಾದ ಘೋರಸ್ವರೂಪವುಂಟಾ ಯಿತು. ಇವಳ ಭಯಂಕರವಾದ ಆಕ್ರಂದನಧ್ವನಿಯಿಂದ ಪ್ರತಸಹಿತ ವಾದ ಸಮಸ್ತಭೂಮಿಯೂ, ಗ್ರಹನಕ್ಷತ್ರಗಳೊಡಗೂಡಿದ ಆಕಾಶವೂ ಕಂಪಿಸುವಂತಾಯಿತು. ನಾನಾದಿಕ್ಕುಗಳೂ ಅದರ ಪ್ರತಿಧ್ವನಿಯಿಂದ ಮೊಳಗತಿದ್ದುವು. ಗೋಕುಲದಲ್ಲಿ ಆಕಸ್ಮಿಕವಾದ ಸಿಡಿಲುಬಿದಂತಾಗಿ ಅನೇಕಜನರು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದರು. ಹೀಗೆ ಆ ಘೋರರಾಕ್ಷಸಿ ಯು, ಪ್ರಾಣವನ್ನು ನೀಗಿ, ಕೆದರಿದ ತಲೆಯೊಡನೆ ಕೈಕಾಲುಗಳನ್ನಗಲಿಸಿ ಕಳಗೆ ಬಿದ್ದಿದ್ದಾಗ, ಹಿಂದೆ ದೇವೆಂದ್ರನ ವಜ್ರಾಯುಧದಿಂದ ಹತನಾಗಿ ಬಿದ್ಧ ವೃತ್ರಾಸುರನಂತೆ ಕಾಣುತಿದ್ದಳು. ಓ ಪರೀಕ್ಷಿದ್ರಾಜಾ.! ಮಹಾ ದೇಹವುಳ್ಳ ಆ ಘೋರರಾಕ್ಷಸಿಯು ಸತ್ತು ಕೆಳಗೆ ಬೀಳುವಾಗ, ಆರುಹರಿದಾರಿ ಗಳವರೆಗೆ ಸುತ್ತಲೂ ಇದ್ದ ಮರ ಗಿಡು ಬಳ್ಳಿಗಳೆಲ್ಲವೂ ಮುರಿದು ಪುಡಿಪುಡಿಯಾಗಿ, ನೋಡಿದವರೆಲ್ಲರಿಗೂ ಮಹಾದ್ಭುತವಾಗಿ ತೋರಿತು. ಲೋಕಭಯಂಕರವಾಗಿದ್ದ ಆ ವಿಕೃತಾಕಾರವನ್ನು ಕೇಳಬೇಕ ? ಕಡೆ ಬಾಯಿಗಳಲ್ಲಿ ನೇಗಿಲಿನಂತಿರುವ ಉದ್ದವಾದ ಕೋರೆದಾಡೆಗಳು! ಬೆಟ್ಟದ ಗವಿ ಯಂತಿರುವ ಮೂಗಿನ ಸೊಳ್ಳೆಗಳು : ಗುಂಡುಕಲ್ಲುಗಳಂತಿರುವ ದಪ್ಪ ಮೊಲೆ ಗಳು : ಕದರಿದ ತಲೆ ! ಹಾಳುಬಾವಿಯಂತೆ ಆಳಕ್ಕಿಳಿದ ಕಣ್ಣುಗಳು ! ಮರ