ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೭೪ ಶ್ರೀಮದ್ಭಾಗವತವು [ಅಧಾ ದೃರೂ, ಆ ಶ್ರೀಹರಿಯಲ್ಲಿ ಬದ್ಧವೈರವನ್ನಿಟ್ಟು, ಆ ಕೃಷ್ಣನನ್ನು ಕೊಲ್ಲಬೇ ಕೆಂಬ ಕೊರಬುದ್ಧಿಯಿಂದ, ಅವನಿಗೆ ಮೊಲೆಯೂಡಿಸುವುದಕ್ಕೆ ಬಂದಳಲ್ಲ ವೆ ? ಇಷ್ಟು ಮಾತ್ರದಿಂದಲೇ ಅವಳ ಪ್ರಾರಬ್ಯಪಾಪಗಳೆಲ್ಲವೂ ನೀಗಿ ಮು ಕಿಯುಂಟಾಯಿತು ಇನ್ನು ಭಕ್ತಿಗಳಿಂದ ಆ ಪರಮಾತ್ಮನನ್ನು ಪಾಸ ನೆಮಾಡುತ್ತ, ಅವನಿಗೆ ಪ್ರಿಯವಾದ ಪತ್ರದ್ರಷ್ಟಾಹಿಗಳನ್ನೇ ಅರ್ಪಿಸತಕ್ಕ ಭಕ್ತರಿಗೆ, ಯಾವ ಸದ್ದತಿಯುಂಟಾಗುವುದೆಂಬುದನ್ನು ನೀವೇ ಊಹಿಸಿನೋ ಡು: ಭಗವದ್ಭಕ್ತರಾದ ಯೋಗಿಗಳಿಗೆ ಧ್ಯಾನಗೋಚರಗಳಾಗಿಯೂ, ಯಾ ವಾಗಲೂ ಅವರ ಹೃದಯಲ್ಲಿ ನೆಲೆಗೊಂಡಿರತಕ್ಕವುಗಳಾಗಿಯೂ, ಲೋಕಪೂ ಜ್ಯರಾದ ಬ್ರಹ್ಮ ರುದ್ರಾಟ ದೇವತೆಗಳಿಗೂ ಪೂಜಾರ್ಹಗಳಾಗಿಯೂ ಇರುವ ತನ್ನ ಪಾದಾರವಿಂದಗಳಿಂದ ಶ್ರೀ ಕೃಷ್ಣನು, ಯಾವಳ ಎದೆಯ ತ್ರಿ, ಕ್ಷಣಕಾಲದವರೆಗೆ ಅವಳ ಸ್ತನ್ಯಪಾನವನ್ನೂ ಮಾಡುತಿದ್ದನೋ, ಅಂತ ವಳಿಗೆ ಪದ್ಧತಿಯುಂಟಾಗುವುದೇ ನಶ್ವರವು ? ಪರಮಪಾಸಿಸಿಯಾದ ಈ ರಾಕ್ಷಸಿಯೇ, ಆತನ ಕ್ಷಣಮಾತ್ರಸಂಬಂಧದಿಂದ ಹೀಗೆ, ಆ ಲೋಕನಾಥನ ಸಾನ್ನಿಧ್ಯವನ್ನು ಹೊಂದಿರುವಾಗ, ಯಾವಾಗಲೂ ಆ ಮದ್ದು ಕೃಷ್ಣನ ನ್ನು ತೊಡೆಯಮೇಲೆ ಮಲಗಿಸಿಕೊಂಡು, ಮೊಲೆಯೂಡಿಸುತ್ತಿರುವ ಯ ಶೋದೆ ಮೊದಲಾದ ಜನನಿಯರೂ, ಆ ಕೃಷ್ಣನಿಗಾಗಿ ತನದಿನವೂ ಸಮೃ ದೃವಾದ ಹಾಲನ್ನು ಕರೆಯುತ್ತಿರುವ ಗೋವುಗಳೂ ಎಷ್ಟು ಭಾಗ್ಯ ಶಾಲಿಗಳೆಂಬುದನ್ನು ಕೇಳಬೇಕೆ ? ಕೈವಲ್ಯಾಹಸಕಲಪುರುಷರ ಪ್ರದ ನಾದ ಭಗವಂತನು, ಇತರರಿಂದ ತಾನು ಪಡೆದ ಉಪಕಾರಕ್ಕೆ ಯಾವ ಪ್ರ ತ್ಯುಪಕಾರವನ್ನು ಮಾಡುವನೆಂಬುದನ್ನು ಕೇಳಬೇಕೆ ? ಆ ಸಾಕ್ಷಾದ್ಭಗವಂತ ನನ್ನೇ ತನ್ನ ಮುದ್ದು ಮಗುನೆಂದು ಯಾವಾಗಲೂ ಪ್ರೇಮದಿಂದ ಲಾಲಿ ಸುತ್ತಿರುವ ಗೋಪಸ್ತ್ರೀಯರನ್ನು, ಆಜ್ಞಾನಜನ್ಯವಾದ ಸಂಸಾರವೆಂಬುದು ಇನ್ನೆಂದೆಂದಿಗೂ ಕಟ್ಟಿಡಲಾರದು ಇತ್ತಲಾಗಿ ಗೋಪಾಲಕರೆಲ್ಲರೂ, ಪೂತ ನೆಯ ದಹನಕಾಲದಲ್ಲಿ ಚಿತೆಯಿಂದ ಹೊರಟ ಸುಗಂಧ ವಿಶಿಷ್ಟವಾದ ಹೊ ಗೆಯನ್ನು ನೋಡಿ, ಇದೇನಾಕ್ಷರವೆಂದು ಆ ವಿಷಯವನ್ನೇ ಮಾತಾ ಕೊಳ್ಳುತ್ತ, ಊರಿಗೆ ಬಂದು ಸೇರಿದರು. ಅತ್ತಲಾಗಿ ಮಧುರೆಗೆ ಹೋಗಿ