ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಷ್ಣವ, ವಾಯು ಮೊದಲಾಗಿ ಹದಿನೆಂಟು ಬಗಗಳಗಿರುವುವು, ಈ ಪ್ರಪಂಚದ ಸೃಷ್ಟಿಕರ್ತವೆನಿಸಿದ ಚತುರ್ಮುಖನ ನಾಲ್ಕು ಮುಖಗ ೪ಂದಲ ತಾವಾಗಿಯೇ ಹೊರಟು ಬಂದ ವೇದ ಚತುಷ್ಮಯವನ್ನು ವಿ ಭಾಗಮಾಡುವುದಕ್ಕಿಂತಲೂ ಮುಂಚೆಯೇ ಪ್ರಣೀತಗಳಾದುದರಿಂದ ಇವು ಗಳಿಗೆ ಪುರಾಣಗಳೆಂದು ಹೆಸರಾಯಿತು. ಇಂತಹ ಪುರಾಣಗಳನ್ನು ನಿರ್ಮಿ ಸಿದವರು ವ್ಯಾಸಮಹರ್ಷಿಗಳು; ಸಮಸ್ಮಿ ರೂಪದಿಂದಿದ್ದ ವೇದಸಮುದಾ ಯವನ್ನು ನಾಲ್ಕು ಭಾಗವಾಗಿ ವಿಭಾಗವಾಡಿದ ಕಾರಣ ಅಂತಹ ವಿಭಾಗ ಮಾಡಿದವರಿಗೆ ವ್ಯಾಸರೆಂತಲೂ ವೇದ ವ್ಯಾಸರೆಂತಲೂ ವ್ಯವಹಾರವಿರುವು ದು, ಇಂತಹ ವ್ಯಾಸರಿಗೆ ಬ್ರಹ್ಮ, ಮನು, ಶುಕ, ಬೃಹಸ್ಪತಿ, ಸೂಕ್ಷ್ಯ ಮೊದಲಾಗಿ ಇಪ್ಪತ್ತೆಂಟು ಹೆಸರುಗಳಿರುವುವು. ಆ ಇಪ್ಪತೆಂಟು ಮಂದಿಯಲ್ಲಿ ಪರಾಶರರೆಂಬವರೂ ಒಬ್ಬರು, ಇವರು ವಸಿಷ್ಠವಹರ್ಷಿ ಯ ಮೊಮ್ಮಕ್ಕಳು; ಇದರ ತತ್ವವೇನೆಂದರೆ-ಕಲ್ಪದ ಆದಿಭಾಗ ದಲ್ಲಿ ಮಹಾಮಹಿಮ ನೆನಿಸಿದ ಚತುರುಖನು ವೇದಪ್ರಕಾಶನಕ್ಕಿಂತಲೂ ಮುಂಚೆಯೇ ಆ ವೇದಪ್ರತಿಪಾದಿತಗಳಾದ ಅರ್ಥಗಳನ್ನೇ ಸಂಗ್ರಹಿಸಿ ಸುಲಭವಾಗಿ ತಿಳಿಯುವುದಕ್ಕೋಸ್ಕರ ಶತಕೋಟಿ ಗ್ರಂಥಪರಿಮಿತವಾದ ಒಂದುಗ್ರಂಥವನ್ನು ರಚಿಸಿದನು. ಇದನ್ನೇ ಬ್ರಾಹ್ಮಪುರಾಣವೆನ್ನುವ ರು, ಆ ಬಳಿಕ ಯುಗಕಮಾನುಸಾರ ಜನಗಳಲ್ಲಿ ಬುದ್ಧಿ ಶಕ್ತಿಯು ಕಡಿ ಮೆಯಾದಹಾಗೆಲ್ಲಾ ಅದೇವೇದಾರ್ಥ ಮೊದಲಾದ ಅಂಶಗಳನ್ನೇ ಸಂಗ್ರಹಿ ಸಿ ಈಾಂಡ, ವರ್ಗ, ಅಧ್ಯಾಯ ಮೊದಲಾದ ಸಂಕೇತಗಳಿಂದ ಚಿಕ್ಕ ಚಿಕ್ಕ ಗ್ರಂಥಗಳಾಗಿ ಮನು, ವ್ಯಾಸ ಮೊದಲಾದವರು ವಿರಚಿಸಿದರು ಅವುಗಳ ಲ್ಲಿಯೂ ಈ ವಿಷ್ಣು ಪುರಾಣವು ಅತ್ಯುಪಯುಕ್ತವಾದುದು, ಅನೇಕ ಅಪೂರ್ವ ವಿಷಯಗಳನ್ನೂ ಒಳಗೊಂಡಿರುವುದು, ಆತ್ಮ ತತ್ವವನ್ನೂ