ಪುಟ:ಸಂತಾಪಕ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೩೬

ಕರ್ಣಾಟಕ ಚ೦ದ್ರಿಕೆ.


ಸ್ವಭಾವಕೋಮಲೆಯಾದ ಆ ಯುವತಿಯು ಸಂತಾಪಕನ ತಂತ್ರ
ವನ್ನು ಹೇಗೆತಾನೆ ತಿಳಿದುಕೊಂಡಾಳು. ಅವಳು ಈ ಮಾತುಗಳನ್ನು
ಕೇಳಿ ಅನ್ಯಮನಸ್ಕಳಾಗಿ " ಎಲಾ ದುಷ್ಟನೇ ! ನಿನ್ನೀ ದುರಾಶೆಯನ್ನು ಬಿಡು.
ಇಹಪರಗಳೆರಡರಲ್ಲಿಯೂ ಸೌಖ್ಯವನ್ನು ಕಳೆದುಕೊಳ್ಳುವುದಕ್ಕೆ ಪ್ರಯತ್ನಿಸ
ಬೇಡ___"
ಎಂದ ಅವಳಾಮಾತು ಮುಗಿಯುವುದರೊಳಗಾಗಿ ಸಂತಾಪಕನು
ಅವಳಕೈಯಲ್ಲಿದ್ದ ಖಡ್ಗವನ್ನು ಹಿಡಿದುಕೊಂಡನು. ಯುವತಿಯು ಸ್ತಬ್ಬಳಾಗಿ
ಬಿಟ್ಟಳು. ಸಂತಾಪಕನು " ಎಲೇ ! ಮೂರ್ಖಳೇ ! ನಿನ್ನ ತಾಯ್ತಂದೆಗ
ಳನ್ನೂ ಅವರ ಪರಿವಾರವನ್ನೂ ನಿಮ್ಮ ಮನೆಯಲ್ಲಿ ಸುಟ್ಟು ಇಲ್ಲಿಗೆ ನಿನ್ನನ್ನು
ತಂದಿರುವೆನು. ಈಗ ನಿನಗೆ ನಾನಲ್ಲದೆ ಮತ್ತಾರೂ ಪಾಲಕರಿಲ್ಲ. ಎಂದಾ
ದರೂ ನೀನು ನನಗೇ ಪತ್ನಿಯಾಗಬೇಕು. ಈಗ ನನಗೆ ಕಾರ್ಯಾ೦ತರ
ವಿರುವುದರಿಂದ ಹೊರಟುಹೋಗುವೆನು. ಇನ್ನೆಂಟುದಿನಗಳೊಳಗಾಗಿ ನೀನು
ನನ್ನ ಅಪ್ಪಣೆಯಪ್ರಕಾರ ನಡೆಯದಿದ್ದರೆ ನಿನ್ನನ್ನು ತುಂಡುತುಂಡಾಗಿ
ಕತ್ತರಿಸುವುದೇ ನಿಶ್ಚಯ " ಎಂದು ಹೇಳಿ ಅಲ್ಲಿ ನಿಲ್ಲದೆ ಹೊರಟುಹೋದನು.
ಯುವತಿಯು ಪ್ರಜ್ಞಾಶೂನ್ಯಳಾಗಿ ನೆಲದಮೇಲೆ ಬಿದ್ದುಬಿಟ್ಟಳು.
ಪಾಠಕ ಮಹಾಶಯರೇ ! ಈ ಯುವತಿಯೇ ನಿರುಪಮಕುಮಾರಿ
ಯೆಂದು ನಿಮಗೆ ತಿಳಿಯದ ಅ೦ಶವಲ್ಲವಷ್ಟೆ ! ಆದಿನ ವಿಮಲನಗರದಲ್ಲಿ
ಭಸ್ಮೀಭೂತವಾದ ಮನೆಯಲ್ಲಿ ಇವಳು ನಿದ್ರಿತಳಾಗಿದ್ದಳು. ಸಂತಾಪಕನೇ
ಇವಳಿಗೋಸುಗ ಆ ಮನೆಯನ್ನೂ ಅಲ್ಲಿ ನಿದ್ರಿತರಾಗಿದ್ದವರನ್ನೂ ಸುಟ್ಟು
ಹಾಕಿದನು. ಅವನು ಈ ನಿರುಪಮಕುಮಾರಿಯ ಸೌಂದರ್ಯವನ್ನು
ಕಂಡು ಮೋಹಿಸಿ ಅವಳನ್ನು ತನಗೆ ಕೊಟ್ಟು ಮದುವೆ ಮಾಡಬೇ
ಕೆಂದು ಅವಳ ತಂದೆಯಾದ ಮಂತ್ರಿ ಪಲ್ಲವಕನೊಡನೆ ಪ್ರಸ್ತಾಪಿಸಿದ್ದನು.
ಪಲ್ಲವಕನು ಇವನ ಕುಲಶೀಲಾದಿಗಳನ್ನರಿಯದವನಾದುದರಿಂದಲೂ, ನಿರು
ಪಮಕುಮಾರಿಯನ್ನು ಆವುದಾದರೊಂದು ದೇಶದ ಮಂತ್ರಿಗೇ ಕೊಟ್ಟು
ಮದುವೆಮಾಡಬೇಕೆಂದಿದ್ದನಾದುದರಿಂದಲೂ ಸಂತಾಪಕನ ಪ್ರಾರ್ಥನೆ
ಯನ್ನು ತಿರಸ್ಕರಿಸಿದ್ದನು. ಸಂತಾಪಕನಿಗಾದರೋ ಅವಳಲ್ಲಿ ಅನುರಾ
ಗವು ಸ್ಥಿರವಾಗಿದ್ದುದರಿಂದ ಅವಳನ್ನು ಅಪಹರಿಸಿಕೊಂಡುಹೋಗಿ ತನ್ನ