ಪುಟ:ಸಂತಾಪಕ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ೦ತಾಪಕ.

೫೧


ವಣಿಗನ ತಂದೆಗೆ ಹುಚ್ಚು ಹಿಡಿದಿದೆ " ಎಂದು ನಿಶ್ಚಿತವಾಯಿತು. ವಿನಯ
ಚಂದ್ರನನ್ನು ಎಲ್ಲರೂ ಹುಚ್ಚನೆಂದು ಕರೆಯುವುದಕ್ಕಾರಂಭಿಸಿದರು.
ದೃಷ್ಟರಾದ ಕೆಲವುಮಂದಿ ಹುಡುಗರು ಅವನ ಬಟ್ಟೆಯನ್ನು ಹಿಡಿದೆಳೆಯ
ಲಾರಂಭಿಸಿದರು. ವಿನಯಚಂದ್ರನ ಕಣ್ಣುಗಳು ಕೆಂಪೇರಿದುವು. ಕೋಪವು
ಮಿತಿಮೀರಿತು. ಅವನು ಇನ್ನು ಸೈರಿಸಲಾರದವನಾದನು. ಆ ಸ್ಥಳ
ದಲ್ಲಿ ನಿಲ್ಲುವುದಕ್ಕೆ ಮನಸ್ಸು ಬಾರಲಿಲ್ಲ. ಬೀದಿಯಬಾಗಿಲ ಬಳಿಗೆ
ಬಂದು ತನ್ನ ಕುದುರೆಯನ್ನು ನೋಡಿದನು. ಅಲ್ಲಿ ಕುದುರೆಯಿರಲಿಲ್ಲ.
ತನ್ನ ಕುದುರೆ ಎಲ್ಲಿರುವುದೆಂದು ದ್ವಾರಪಾಲಕನನ್ನು ಕೇಳಿದನು. ದ್ವಾರ
ಪಾಲಕನು " ಸ್ವಾಮೀ ! ತಮ್ಮ ಭೃತ್ಯನು ಕುದುರೆಯನ್ನು ಹಿಡಿದು
ಕೊಂಡು ಹೋದನಲ್ಲಾ " ಎಂದನು. ವಿನಯಚಂದ್ರನಿಗೆ ಮತ್ತಷ್ಟು
ಕೋಪವುಂಟಾಯಿತು. ಅವನು " ಎಲಾ, ನೀಚನೇ ! ಯೋಗ್ಯತಾ
ಯೋಗ್ಯತೆಗಳನ್ನರಿಯದೇ ನನ್ನೊಡನೆ ಸರಸವಾಡುವೆಯಾ ? " ಎಂದು
ಬಲವಾಗಿ ಕಪಾಲಕ್ಕೆ ಹೊಡೆದನು. ಸೇವಕನಿಗೆ ಒಂದೆರಡು ಹಲ್ಲು
ಗಳು ಉದುರಿಹೋದುವೋ ಅಥವಾ ಚಲಿಸಲಾರಂಭಿಸಿದುವೋ ನಾವು
ಚೆನ್ನಾಗಿ ನೋಡಲಿಲ್ಲ. ಬೀದಿಯಲ್ಲಿ ಓಡಾಡುತ್ತಿದ್ದವರೆಲ್ಲರೂ ಮದು
ವೆಯ ಮನೆಯ ಬಳಿಗೆ ಬಂದುಸೇರಿದರು. ಹುಚ್ಚನನ್ನು ವೈದ್ಯಶಾ
ಲೆಗೆ ಕಳುಹಿಸಬೇಕೆಂದು ನಿಷ್ಕರ್ಷೆಯಾಯಿತು. ಬಲಶಾಲಿಗಳಾದ ಇಬ್ಬರು
ಸೇವಕರು ಅವನನ್ನು ಗಟ್ಟಿಯಾಗಿ ಹಿಡಿದುಕೊಂಡು ಕೈಕಾಲುಗಳನ್ನು
ಹಗ್ಗಗಳಿಂದ, ಬಂಧಿಸಿದರು. ವಿನಯಚಂದ್ರನು ಗಟ್ಟಿಯಾಗಿ ಕೂಗ
ಲಾರಂಭಿಸಿದನು. ಗಂಟಲೊಣಗಿ ಹೋಯಿತು. ಕಣ್ಣು ಗುಡ್ಡೆಯು ಸಿಕ್ಕಿ
ಕೊಂಡಿತು. ಅವನು ಮೂರ್ಛಾಕ್ರಾಂತನಾಗಿ ನೆಲದಮೇಲೆ ಬಿದ್ದುಬಿಟ್ಟನು.
ಈ ಸಮಯದಲ್ಲಿ ಒಬ್ಬಯುವಕನು ಇಬ್ಬರು ಯಾಮಿಕರೊಡನೆ ಅಲ್ಲಿಗೆ
ಬಂದನು. ಯಾಮಿಕರಿಬ್ಬರೂ ಅಲ್ಲಿ ಸೇರಿದ್ದ ಜನರನ್ನೆಲ್ಲ ಬಯ್ದು ಹೊರಕ್ಕೆ
ಕಳುಹಿಸಿದರು. ಕಮಲಾಕರದತ್ತನು ಈ ಇಬ್ಬರು ಯಾಮಿಕರನ್ನೂ
ಕಂಡು ವಿಸ್ಮಿತನಾಗಿ ಆಲೋಚಿಸುತ್ತಿರಲು ಯಾಮಿಕರೊಡನೆ ನಿಂತಿದ್ದ
ಯುವಕನು " ಕಮಲಾಕರದತ್ತ ! ಇದೇನು ಸಮಾಚಾರ ? " ಎಂದು
ಕೇಳಿದನು. ಕಮಲಾಕರನು ಆ ಯುವಕನನ್ನು ನೋಡಿ ಆತುರದಿಂದ