ಪುಟ:ಸಂತಾಪಕ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೫೬

ಕರ್ಣಾಟಕ ಚಂದ್ರಿಕೆ.


ಗೊರಕೆಗಳನ್ನು ಹಾಕುತ್ತಿದ್ದರು. ಕೆಲವರು ಉಸ್ಸ್ ಉಸ್ಸ್ ! ಎಂದು
ನಿಟ್ಟುಸಿರನ್ನು ಬಿಡುತ್ತಿದ್ದರು. ಇನ್ನು ಕೆಲವರು ತಾವುತಾವು ಮಾಡಿದ
ದುಷ್ಕಾರ್ಯಗಳನ್ನು ಅಪಲಾಪಿಸಿಕೊಂಡು ನ್ಯಾಯ್ಯಾಧೀಶನು ತಮ್ಮ
ವಿಷಯದಲ್ಲಿ ಅನ್ಯಾಯ ಮಾಡಿದನೆಂದು ಹೇಳಿಕೊಳ್ಳುತ್ತಿದ್ದರು. ಮತ್ತೆ
ಕೆಲವರು ಇನ್ನು ಮುಂದೆ ಇಂತಹ ಕಾರ್ಯವನ್ನು ಮಾಡುವುದಿಲ್ಲವೆಂದು ಹೇಳಿ
ಕೊಳ್ಳುತ್ತಿದರು. ನಿದ್ರಾಂಗನೆಯು ಕಾಲಕ್ರಮವಾಗಿ ಎಲ್ಲರನ್ನು ವಶಮಾಡಿ
ಕೊಂಡಳು. ಎಲ್ಲೆಲ್ಲಿಯೂ ನಿಶ್ಯಬ್ದವಾಯಿತು. ಪ್ರಕೃತಿಯು ವಿರಕ್ತನ
ಮನಸ್ಸಿನಂತೆಯೂ, ಪತಿವ್ರತೆಯ ಮುಖದಂತೆಯೂ, ತರಂಗಹೀನವಾದ
ಸಮುದ್ರದಂತೆಯೂ ಶಾಂತವಾಗಿದ್ದಿತು. ಈ ಸಮಯದಲ್ಲಿ ಒಬ್ಬ ಅಶ್ವಾ
ರೋಹಿಯು ಕಾರಾಗೃಹದ ಪಶ್ಚಿಮದಿಕ್ಕಿನಲ್ಲಿ ಕುದುರೆಯನ್ನು ನಿಲ್ಲಿಸಿ
ಒಳಕ್ಕೆ ಬಂದು ಒಂದುಬಾರಿ ಗಟ್ಟಿಯಾಗಿ ಆಕಳಿಸಿದನು. ಸೆರೆಮನೆಯಲ್ಲಿ
ಯಾರೋ ಆಕಳಿಸಿದಂತೆ ಶಬ್ದವಾಯಿತು. ಆಗಂತುಕನು ಕೆಮ್ಮಿದನು.
ಸೆರೆಮನೆಯಲ್ಲಿಯೂ ಯಾರೋ ಕೆಮ್ಮಿದರು. ಆಗಂತುಕನು ತನ್ನ ಸಮೀಪದ
ಲ್ಲಿದ್ದ ಒಂದು ಗಂಟನ್ನು ಬಿಚ್ಚಿ ಒಂದು ನೂಲೇಣಿಯನ್ನು ತೆಗೆದುಕೊಂಡು ಸೆರೆ
ಮನೆಯ ಗವಾಕ್ಷಕ್ಕೆ ಗುರಿಯಿಟ್ಟು ಎಸೆದನು. ಏಣಿಯು ಗವಾಕ್ಷದ ಸಲಾಕಿ
ಗಳಿಗೆ ತಗುಲಿಕೊಂಡಿತು. ' ಆಗಂತುಕನು ಏಣಿಯಮೇಲೆ ಹತ್ತಿ ಗವಾಕ್ಷದ
ಒಳಿಗೆ ಹೋಗಿ ಬಾಗಿಲನ್ನು ಒ೦ದುಬಾರಿ ಗುದ್ದಿದನು. ಬಾಗಿಲು ಒಡೆದು
ಹೋಯಿತು. ಆಗಂತುಕನು ತನ್ನ ಬಳಿಯಲ್ಲಿದ್ದ ಗಂಟನ್ನು ಒಳಕ್ಕೆ ಹಾಕಿ
ಬೇಗಬೇಗನೆ ಅಲ್ಲಿಂದಿಳಿದು ನೂಲೇಣಿಯನ್ನು ಅಲ್ಲಿಯೇಬಿಟ್ಟು ಹೊರಗೆ
ಬಂದನು. ಇವನು ಬರುವ ವೇಗಕ್ಕೆ ಕುದುರೆಯು ಬೆದರಿ ಓಡಲಾರಂಭಿಸಿತು.
ಆಗಂತುಕನು ಹಿಂದಟ್ಟಿಹೋದನು. ಕುದುರೆಯು ಸಿಕ್ಕಲಿಲ್ಲ. ಆಗಂತುಕನು
ಶ್ರಾಂತನಾಗಿ, ಮತ್ತೆ ಸೆರೆಮನೆಯ ಬಳಿಗೆ ಬಂದನು. ಇವನು ಬರುವುದ
ರೊಳಗಾಗಿ ಆಜಾನುಬಾಹುವಾದ ಬಂದಿಯೊಬ್ಬನು ಗವಾಕ್ಷದಿಂದ ಹೊರಕ್ಕೆ
ಬ೦ದು ನೂಲೇಣಿಯನ್ನು ಹೊರಕ್ಕೆ ತೆಗೆದು ಸುತ್ತುತ್ತಿದ್ದನು. ಆಗಂತು
ಕನು ಅವನ ಬಳಿಗೆ ಬಂದು ಕಿವಿಯಲ್ಲಿ ಏನೋ ಪಿಸುಮಾತುಗಳನ್ನಾಡಿದನು.
ಬಂದಿಯು ತನ್ನ ಬಳಿಯಲ್ಲಿದ್ದ ಗಂಟನ್ನು ಆಗಂತುಕನ ಕೈಗೆ ಕೊಟ್ಟು
ಉತ್ತರಾಭಿಮುಖನಾಗಿ ಹೊರಟನು. ಇಬ್ಬರೂ ಹೋಗುತ್ತಿರುವಾಗ