ವಿಷಯಕ್ಕೆ ಹೋಗು

ಪುಟ:ಸಂದೇಶದ ಕಥೆಗಳು.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
36
ಸಂದೇಶದ ಕಥೆಗಳು

ಇಂದು ಅವನು ಬಯಸಿದಂತೆ ಆಹಾರಸಾಮಗ್ರಿ ಒದಗಿ ಬರಲಿಲ್ಲ “ಏಕೆ ಹೀಗಾಯಿತು? ನನ್ನ ತಪಃ ಪ್ರಭಾವ ಎಲ್ಲಿ ಹೋಯಿತು?” ಅವನಿಗೆ ದಿಕ್ಕೇ ತೋಚಲಿಲ್ಲ ಚಿಂತೆ- ಅಸಹನೆ-ಕೋಪದಲ್ಲೇ ಹತ್ತಿರದ ಹಳ್ಳಿಯತ್ತ ಹೆಜ್ಜೆ ಹಾಕಿದ.

ಅದೊಂದು ಸದ್ಗೃಹಸ್ತನ ಮನೆ, ಹಸಿದು ಕಂಗಾಲಾದ ಕೌಶಿಕ ಮನೆಯಂಗಳದಿ ಬಂದು ನಿಂತ ಮನೆಯೊಡತಿ ಅವನಿಗೆ ಭಿಕ್ಷೆ ನೀಡುವುದಾಗಿ ಹೇಳಿ ಒಳನಡೆದಳು ಕೆಲ ನಿಮಿಷಗಳು ಕಳೆದವಷ್ಟೆ! ಕೌಶಿಕ ಚಡಪಡಿಸಿದ ಸ್ವಲ್ಪ ಸಮಯ ಕಳೆಯಿತು ಮನೆಯೊಡತಿ ಹೊರ ಬರಲಿಲ್ಲ! ಕೌಶಿಕನಿಗೆ ಒಂದೊಂದು ಕ್ಷಣವೂ ಯುಗವಾಯಿತು ಅತ್ತಿತ್ತ ಶತವಧಗೈದ “ತನ್ನಂತಹ ಮಹಾನ್ ತಪಸ್ವಿ-ಬ್ರಾಹ್ಮಣ ಮನೆಯೆದುರು ಹಸಿದು ಭಿಕ್ಷೆಗಾಗಿ ನಿಂತಾಗ ಹೊರಬರದೇ ವಿಳಂಬ ಮಾಡುತ್ತಾ ಕಾಯಿಸುತ್ತಿರುವುದು ಸಣ್ಣ ಅಪರಾಧವೇ?" ಮನಸ್ಸು ವ್ಯಗ್ರವಾಯಿತು ಉದ್ವಿಗ್ನತೆಯಿಂದ ಹುಂಕರಿಸಿದ ಕೂಗಿದ ಕೊನೆಗೆ ಮನೆಯೊಡತಿ ಭಿಕ್ಷಾಪಾತ್ರೆಯೊಡನೆ ಹೊರಬಂದಳು ಕೋಪದಲ್ಲಿ ಭುಸುಗುಡುತ್ತಿದ್ದ ಮುನಿಯ ಬಳಿ ಬಂದು ತಣ್ಣೀರು ನೀಡಿದಳು

“ಮನೆಯೊಳಗೆ ನನ್ನ ಪತಿಯ ಭೋಜನ ನಡೆದಿತ್ತು ಮಗುವಿನ ಆರೈಕೆ ಮಾಡಬೇಕಿತ್ತು ಅದಕ್ಕಾಗಿ ತಮಗೆ ಭಿಕ್ಷೆ ನೀಡುವಲ್ಲಿ ವಿಳಂಬವಾಯಿತು ತಾವು ದಯಮಾಡಿ ಕ್ಷಮಿಸಿ ಭಿಕ್ಷೆ ಸ್ವೀಕರಿಸಬೇಕು"

ಅವನ ಮಾತಿನಲ್ಲಿ ನಮ್ರತೆಯ ಪ್ರಾರ್ಥನೆಯಿತ್ತು

ಕೌಶಿಕನ ಕೋಪದ ಉರಿ ಆರಲಿಲ್ಲ ಆ ಗೃಹಿಣಿಯತ್ತ ಕೆಂಗಣ್ಣ ಬೀರಿದ “ಬಾಗಿಲ ಬಳಿ ಹಸಿದು ಕಾಯುತ್ತಿರುವ ನನ್ನಂತಹ ಅತಿಥಿಗಿಂತ ಹೆಚ್ಚಾಯಿತೇ ನಿನ್ನ ಮನೆಗೆಲಸ? ನಾನು ಯಾರೆಂದು ತಿಳಿದಿರುವೆ? ನನ್ನ ತಪಃಶಕ್ತಿಯ ಅರಿವು ನಿನಗಿದ್ದಂತಿಲ್ಲ ಪಾಪ ನಿನಗೇನು ಗೊತ್ತು? ನನ್ನಂತಹ ತಪಸ್ವಿಗಳ ಪ್ರಭಾವ! ನಾನು ಮನಸ್ಸು ಮಾಡಿದರೆ ನಿನ್ನನ್ನು ಈ ಕ್ಷಣ”