ಪುಟ:ಸತ್ಯವತೀ ಚರಿತ್ರೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದನೆಯ ಪ್ರಕರಣ

  • * * * * * * * * * * # i1F#\ \r
  • * * # , * * * \ + #1 # , 4 * * * * * * * * * *

ವ, ಚೆನ್ನಾಗಿ ಬರೆಯುವುದನ್ನೂ ಮಾತ್ರ ಕಲಿತು ಕೊಂಡನು. ಈಗ ಒಬ್ಬ ಕರಣಿಕನ ಹತ್ತಿರ ಅವನು ಗುಮಾಸ್ತನಾಗಿ ತಿಂಗಳಿಗೆ ಹತ್ತು ರೂಪಾಯಿ ಸಂಬಳ ತರುತ್ತಾನೆ, ಅವನು ಮತದಲ್ಲಿಸಾರ್ತನಾದರೂ ವೈಷ್ಣವರ ಸಹವಾಸದಿಂದ ವಿಷ್ಣು ಭಕ್ಕನೆನಿಸಿ ಕೊರಲು ತುಂಬಾ ತುಳಸೀಮಣಿಯ ಸರಗಳನ್ನೂ, ದೊಡ್ಡ ದೊಡ್ಡ ನಾಮಗಳನ್ನೂ , ಧರಿಸಿಕೊಂಡು ಹರಿಭಕ್ತನಾಗಿರುವನು. ಅವನ ಹೆಂಡತಿಯ ಹೆಸರು ಸುಂದರಮ್ಮ, ಆಕೆಗೆ ಚೆನ್ನಾಗಿ ಓದುವುದಕ್ಕೆ ಬರುವುದು. ಆದುದರಿಂದ ಕೆಲವು ವೇಳೆ ಜಗಳವಾಡುತ್ತಿದ್ದರೂ ಗಂಡಹೆಂಡತಿಯರಿಬ್ಬರೂ ಏಕಮನಸ್ಕರಾಗಿ ಏಕವಾಕ್ಯ ವುಳ್ಳವರಾಗಿರುವರು. ಅವರಿಗೆ ರಾಮಾನುಜಮ್ಮನೆಂಬ ಒಬ್ಬ ಮಗಳು. ಅವಳಿಗೆ ಎರಡು ತುಂಬಿ ಮೂರನೆಯ ವರ್ಷ, ನಾರಾಯಣಮೂರ್ತಿಗೆ ಈಗ ಇಪ್ಪತ್ತನೆಯ ವರ್ಷ, ಅವನು ಬಹು ಸೂಕ್ಷ್ಮ ಬುದ್ಧಿಯುಳ್ಳವನು, ಅವನಿಗೆ ಓದಿನಲ್ಲಿ ಆಸಕ್ತಿ ಬಸಳ, ಅವನು ಗುಣಸಂಪನ್ನ ನೆಂದು ಅವನ ಗುರುತು ಕಂಡವರೆಲ್ಲರೂ ಹೇಳುತ್ತಾರೆ. ಆ ಗ್ರಾಮದ ಕರಣಿಕನ ತಮ್ಮನು ರಾಜಮಹೇಂದ್ರದಲ್ಲಿ ಇಂಗ್ಲೀಷ್ ಓದಿ ದೊಡ್ಡ ಅಧಿಕಾರಕ್ಕೆ ಬಂದಿದ್ದನು. ಅದನ್ನು ನೋಡಿ ನಾರಾಯಣಮೂರ್ತಿ ತಾನೂ ಹಾಗೆ ಮಾಡಬೇಕೆಂದು ತಾಯಿತಂದೆಗಳಿಗೂ ಹೇಳದೆ ಅಮಲಾಪುರಕ್ಕೆ ಹೋಗಿ ಇಂಗ್ಲೀಷ್ ಸ್ಕೂಲಿಗೆ ಸೇರಿ ವಾರಗಳನ್ನು ಮಾಡಿಕೊಂಡು ಕಷ್ಟ ಪಟ್ಟು ಓದುತ್ತ ಬಟ್ಟೆ ಬರೆ ಪುಸ್ತಕ ಮುಂತಾದುವುಗಳನ್ನು ಕೊಂಡುಕೊಳ್ಳುವುದಕ್ಕಾಗಿ ರಾತ್ರಿ ಕಾಲದಲ್ಲಿ ಧನಿ ಕರ ಮಕ್ಕಳಿಗೆ ಪಾಠಹೇಳಿ ಹಣ ಸಂಪಾದಿಸಿಕೊಳ್ಳುತ್ತಿದ್ದನು. ಕೆಲವು ವರ್ಷ ಗಳಲ್ಲಿಯೇ ಪ್ರವೇಶಪರೀಕ್ಷೆಯಲ್ಲಿ ಮೊದಲನೆಯ ತರಗತಿಯಲ್ಲಿ ತೇರ್ಗಡೆಯಾಗಿ ಹತ್ತು ರೂಪಾಯಿ ವಿದ್ಯಾರ್ಥಿ ವೇತನವನ್ನು ಪಡೆದು ರಾಜಮಹೇಂದ್ರದಲ್ಲಿ ಪ್ರಥಮ ಶಾಸ್ತ್ರ ಪರೀಕ್ಷೆಗೆ ಓದಲಾರಂಭಿಸಿದನು. ಆ ತರಗತಿಯವರೆಲ್ಲರಲ್ಲಿ ಇವನೇ ಬುದ್ಧಿ ವಂತನಾದುದರಿಂದಲೂ ಸಹಪಾಠಿಯಾದ ಮಾಧವಯ್ಯನ ಪ್ರೋತ್ಸಾಹವು ಪ್ರಬಲ ವಾಗಿದ್ದುದರಿಂದಲೂ ಮಂಡಲನ್ಯಾಯ ಸಭೆಯ ಪ್ರಥಮ ವಿಶೇಖಕನಾದ ರಾಘ ವಯ್ಯನು ಹನ್ನೆರಡು ವರ್ಷದ ತನ್ನ ಮಗಳನ್ನು ಇವನಿಗೆ ಕೊಟ್ಟು ಮದುವೆ ಮಡಿದನು, ಈ ರಾಘವಯ್ಯನು ಮಾಧವಯ್ಯನ ತಂದೆಯೇ, ಮದುವೆಯಾದ ಎರಡು ಮೂರು ತಿಂಗಳಲ್ಲಿಯೇ ರಾಘವಯ್ಯನು ಪೆದ್ದಾಪುರದ ಡಿಸ್ಸಿಸ್ಸು ಮನ ಸೀಪನಾಗಿ ಹೊರಟು ಹೋದನು. ಆಗ ರಾಮಸ್ವಾಮಿಯ ಇಲ್ಲಿಗೆ ಬಂದು ಪಾಠಶಾಲೆಗೆ ಸೇರಿದುದರಿಂದ ತಿಂಗಳಿಗೆ ಹತ್ತು ರೂಪಾಯಿ ಸಾಲದೆ ನಾರಾಯಣ ಮೂರ್ತಿ ಕೊಂಚ ಸಾಲ ಮೂಡುತ್ತಿದ್ದನು. ಆದರೂ ಅವನ ತಾಯಿತಂದೆಗಳು