ಪುಟ:ಸತ್ಯವತೀ ಚರಿತ್ರೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪ್ರಕರಣ ೧೫. r 1 # 4 # * * * \/: 1 # \\r

  1. \ \ \ # \ " \ \ " + /1 #

bu yug* #ay *** mg 1ಳ4 #y Fuyuw 4, dhy 44 = » »» ಯಿತೆಂದು ಪುನಃ ಕದವನ್ನು ತೆರೆದು ಒಳಗೆ ಹೋದಳು. ಆಗ ವೆಂಕಟೇಶನಿಗೆ ಆ ಮುದಿಗೂಬೆಯ ಮೇಲೆ ತಡೆಯಲಾರದಷ್ಟು ಕೋಪಬಂದಿತು, ಅದನ್ನು ಬಯ್ಯ ಲಾರಂಭಿಸಿದನು. ಆಗ ನಾರಾಯಣಮರ್ತಿ-ಜನರ ಮರುಳುತನವನ್ನೂ ಶಕು ನಗಳಲ್ಲಿ ಅವರಿಗಿರುವ ನಂಬಿಕೆಯನ್ನೂ ನೋಡಿ ಅವರ ಸ್ಥಿತಿ ಯಾವಾಗ ಚೆನ್ನಾ ಗು ವುದೋ ಎಂದು ಯೋಚಿಸುತ್ತಿದ್ದನು. ಅಣ್ಣ ತಮ್ಮಂದಿರ ಶರೀರವಲ್ಲೇ ಇದ್ದರೂ, ಮನಸ್ಸೆಲ್ಲಾ ಮನೆಯಮೇಲೆಯೇ ಇದ್ದುದರಿoti ಅವರು ಎಷ್ಟು ಬಾರಿ ಕೂಗಿದ್ಧಾ ಝ ಆ ಸೂಲಗಿತ್ತಿ ಒಂದು ಗಳಿಗೆಯವರೆಗೆ ಒಳಗಿನಿಂದ ಹೊರಡಲೇ ಇಲ್ಲ. ಆಮೇಲೆ ನಾಗಮ್ಮ ನು ಹೊತ್ತಾಯಿತೆಂದು ಮುಲುಕುತ್ತಾ ಬೀದಿಯ ಕದಕ್ಕೆ ಬೀಗಹಾಕಿ ಹೊರಟಳು. ವೆಂಕ- ಅಯ್ಯಾ ! ನೀನು ನಾಳೆ ದಶಮಿಯ ದಿನ ಪ್ರಯಾಣವನ್ನು ನಿಲ್ಲಿಸಿ ಅಮಾವಾಸ್ಯೆಯಾದಮೇಲೆ ಸಂಚಮಿಯೋ ಸಪ್ತಮಿಯೋ ಹೊರಡಬಾರದೇ ? ಆಗ್ಗೆ ಪುರುಡ ಕಳೆದುಹೋಗುವುದು. ನಾರಾ....- ಅಣ್ಣಯ್ಯಾ ! ನಾನು ನಾಳೆಯೇ ಹೊರಡಬೇಕು, ಇಲ್ಲದಿದ್ದರೆ ಪಾಠ ತಪ್ಪಿಹೋಗುವುದು, ಅತ್ತಿಗೆಗೆ ನೋವೆತ್ತಿರುವುದರಿಂದ ಮಗು ಬಾಣಂತಿ ಯರು ಸುರಕ್ಷಿತರಾಗುವುದನ್ನು ನೋಡಬೇಕೆಂದು ನಾಳೆ ಹೊರಡದೆ.ದಶಮಿಯ ದಿನ ಹೊರಡುವೆನು..... ಎಂದು ನಿನ್ನ ಸಂಗಡ ಹೇಳಿದನು. ವೆಂಕ-ಚಿಂತೆಯಿಲ್ಲ, ಅವಳಿಗೆ ಸಧ್ಯಕ್ಕೆ ಹಾಕಿದಮೇಲೆಯಾದರೂ ಹೊರಡು. ನಾರಾ.-ಅಣ್ಣಾ ! ಹೆತ್ತೊಡನೆ ಪಥ್ಯಕ್ಕೆ ಹಾಕದಿದ್ದರೆ ಕಾಯಿಲೆ ಬರು ವುದು, ಅವರಿಗೆ ಪ್ರಸವವಾಗುವಾಗಲೇ ಎಷ್ಟೋ ಆಲಸ್ಯ, ಅದರಮೇಲೆ ಹೊಟ್ಟೆಗೂ ಆಧಾರವಿಲ್ಲದಿದ್ದರೆ ಮೇಲೆ ಏಳುವುದಕ್ಕೂ ಶಕ್ತಿಯಿರಲಾರದು, ಕೆಲ ವು ಸಮಯಗಳಲ್ಲಿ ಈ ಲಂಫುನೆಗಳಿಂದ ರೋಗಗಳು ಬರುವುದೂ ಉಂಟು. ಇ೦ ಗ್ಲಿಷ್‌ ಜನರಲ್ಲಿ ಬಾಣಂತಿಯರನ್ನು ನೋಡಿಲ್ಲವೇ ? ನಮ್ಮಂತೆ ಲಂಫುನಮಾಡಿಸದೆ ಇರುವುದರಿಂದ ಅವರು ಎಷ್ಟೋ ದೃಢರಾಗಿದ್ದು, ಕೆಲವು ದಿನಗಳಲ್ಲಿಯೇ ಎದ್ದು ಸಾಧಾರಣವಾಗಿ ತಿರುಗಾಡುತ್ತಾರೆ, ನೀನು ಹೆಂಗಸರನ್ನೆಲ್ಲಾ ಗದರಿಸಿ, ಅತ್ತಿಗೆಗೆ ನೀರುಮಿಂದ ದಿನದಿಂದಲೇ ಪಥ್ಯಕ್ಕೆ ಹಾಕುವಂತೆ ಮಾಡು. ವೆಂಕ-ಮರು ದಿನ ಕಳೆಯುವವರೆಗೆ ಬಾಣಂತಿಯರಿಗೆ ಅನ್ನದ ಮಾತನ್ನೇ ಎತ್ತಬಾರದು, ಇದು ಸರಿಯಷ್ಟೆ ? ಕುಡಿಯುವುದಕ್ಕೆ ನೀರನ್ನೂ ಕೊಡಬಾರದು.