ಪುಟ:ಸತ್ಯವತೀ ಚರಿತ್ರೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಸತ್ಯವತೀಚರಿತ್ರೆ

  • * * * * * * * * * * * *4 P4 vr = ># # # # # # Pa, * \ na, 4 * # , 14 # # #
  • * * * * * * * * * * * * * * * * * * * * * * * * * * * * * * * * * * * *

ವೆಂದೂ ಅವು ಇಲ್ಲವೆಂದೂ ದೋಷಗಳನ್ನೇ ಎಣಿಸುತ್ತಾ ಬಂದ ನೆರೆಮನೆ ಹೆಂಗಸ ರನ್ನು ಆದರಿಸುವರಿಲ್ಲ ವೆಂದು ಕಂಡಕಂಡವರಮೇಲೆ ಕಿಡಿಕಿಡಿಯಾಗಿ ಬೀಳುವುದೇ ಹೊರತು ಒಂದು ಕೆಲಸವನ್ನಾ ದರೂ ಮಾಡಿ ಪಾಪಕಟ್ಟಿ ಕೊಳ್ಳಲಿಲ್ಲ, ಸತ್ಯವತಿ ಯೊಬ್ಬಳು ಅಡಿಗೆಯ ಕೆಲಸದಲ್ಲಿ ಸಾವಿತ್ರಿಗೆ ಸಹಾಯ ಮಾಡಿದುದಲ್ಲದೆ ಬಂದ ಮುತ್ತೈದೆಯರಿಗೆಲ್ಲಾ ಅರಸಿನ, ಕುಂಕುಮ, ತಾಂಬೂಲ ಮುಂತಾದುವುಗಳನ್ನು ಕೊಟ್ಟು ಆದರಿಸುವ ವಿಷಯದಲ್ಲಿ ಯಶೋದಮ್ಮ ನಿಗೆ ಜೊತೆಯಾಗಿ ಯಾವಭಾಗ ದಲ್ಲಿಯ ಅರೆಯಿಲ್ಲದಂತೆ ಸಾವಿರ ಕಣ್ಣುಗಳುಳ್ಳವಳ ಹಾಗೆ ನೋಡಿಕೊಳ್ಳುತ್ರಿ ದೃಳು, ಅದರಿಂದಲೇ ಸಾಧಾರಣವಾಗಿ ಮದುವೆಯ ಮನೆಗಳಲ್ಲಿ ಕಳುವಾಗುವಂತೆ, ಮರು ಮದುವೆಗಳೊಂದೇಸಾರಿ ನಡೆದರೂ ಒಂದು ವಸ್ತುವಾದರೂ ಹೋಗಲಿಲ್ಲ. ಐಶ್ವರ್ಯವಂತರ ಮಗಳಾದರೂ ಸತ್ಯವತಿಯು ಹಾಗೆ ಕೆಲಸಮಾಡುವದನ್ನು ಆ ಗ್ರಾಮದ ಹೆಣ್ಣು ಮಕ್ಕಳನೇಕರು ನೋಡಿ ಕೆಲಸಬಿದ್ದಾಗ ದಾಸಿಯಂತೆ ಕೆಲಸ ಮಾಡಬೇಕೆಂದೂ, ಸುಖ ಬಂದಾಗ ರಾಣಿಯಂತೆ ಸುಖಸಡಬೇಕೆಂದೂ ತಿಳಿದು ಕೊಂಡು ಹಾಗೆಯೇ ನಡೆಯಲಾರಂಭಿಸಿದರು, ಬಾಯಲ್ಲಿ ನೂರು ನೀತಿಗಳನ್ನು ಹೇಳುವುದಕ್ಕಿಂತ ಕೈಯಲ್ಲಿ ಒಂದು ಕೆಲಸಮಾಡಿ ತೋರಿಸಿದರೆ ಅದು ಎಷ್ಟೋ ಪ್ರಯೋಜನಕರವಾಗಿದ್ದು ಅನೇಕರನ್ನು ಸನ್ಮಾರ್ಗದಲ್ಲಿ ನಡೆಯಿಸುವುದು.

  1. ಳುಳಗಿ~ ಏಳನೆಯ ಪ್ರಕರಣ.

ಹೀಗೆ ಮದುವೆಗಳೆಲ್ಲಾ ನಡೆದಮೇಲೆ ಔತಣಮಾಡಿ ನಂಟರಿಷ್ಟರನ್ನು ಕಳು ಹಿಸುವುದಕ್ಕಿಂತ ಮುಂಚೆಯೇ ಒಂದು ದಿನ ಯಶೋದಮ್ಮನಿಗೂ ಹಿರಿಯ ಸೊಸೆ ಗೂ ದೊಡ್ಡ ಜಗಳ ಹತ್ತಿತು. ಒಂದು ದಿವಸ ಸುಂದರಮ್ಮನ ಮಗಳಾದ ರಾಮಾ ನುಜಮ್ಮನು ಕೈಯಲ್ಲಿ ಒಂದು ಸೀಬೆಯಹಣ್ಣನ್ನು ಹಿಡಿದುಕೊಂಡು ಆಡುತ್ತಿದ್ದಳು. ಆಗ ಚಿಕ್ಕ ಮದುವಣಗಿತ್ತಿಯಾದ ಸೂರಮ್ಮನು ಬಂದು, ಒಳ್ಳೆಯ ಮಾತಾಡಿ ಆ ಹುಡುಗಿಯ ಕೈಯಲ್ಲಿದ್ದ ಹಣ್ಣನ್ನು ಕಿತ್ತುಕೊಂಡು ಅರ್ಧವನ್ನು ತಾನು ತಿಂದು ಮಿಕ್ಕ ಅರ್ಧವನ್ನು ಅವಳಿಗೇ ಕೊಟ್ಟಳು. ಅದು ಹೇಗೋ ಸುಂದರಮ್ಮನ ಕಣ್ಣಿಗೆ ಬಿದ್ದಿತು. ಆಕೆ ತನ್ನ ಚಿಕ್ಕ ಓರಗಿತ್ತಿಯ ಮೇಲೆ ಕೋಪಮಾಡಿ ಬಯ್ದಳು. ಯ ಶೋದಮ್ಮನು ಅದನ್ನು ಕೇಳಿ ಒಳಗಿನಿಂದ ಒಂದು ಕಿರಿಯಸೊಸೆಯಲ್ಲಿ ಪ್ರೀತಿಯಿ,