ಪುಟ:ಸತ್ಯವತೀ ಚರಿತ್ರೆ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂಭತ್ತನೆಯ ಪ್ರಕರಣ ೪೭ - * * \« , , , , , , , , , P + ' ' + G # + ' ! A # , ” , 1 1 1 1 * * * * * * 1/} ಬೇಕು ಎಂದು ಕಾಗದ ಬರೆದನು, ಅದುವರೆಗೆಯೇ ಆತನು ತನ್ನ ಪ್ರಯಾಣದ ವೆಚ್ಚಕ್ಕಾಗಿ ಕೊಂಚ ಸಾಲಮಾಡಿಕೊಂಡಿದ್ದನು, ಮತ್ತು ಆತನಿಗೆ ಮುಂದೆ ಹಣ ವೆಚ್ಚವಾಗಬೇಕಾದ ಕೆಲಸಗಳು ಅನೇಕಗಳಿದ್ದುವು. ತಾನಾಗಿ ಕೆಲಸ ದೊರೆತಾಗ ಬಿಟ್ಟು ಬಿಟ್ಟರೆ ಪುನಃ ಸಿಕ್ಕಲಾರದಲ್ಲವೆ ? ಈ ಕಾರಣಗಳಿಂದ ಆತನು ಸತ್ಯವಶಿಯ ಸಂಗಡ ಆಲೋಚಿಸಿ ರಾಜಮಹೇಂದ್ರಕ್ಕೆ ಹೋಗಿ ಕೆಲಸಕ್ಕೆ ಒಪ್ಪಿ ಕೊಂಡನು ಹೀಗಿರುವಾಗ ಬಿ. ಎ. ತರಗತಿಯಲ್ಲಿ ತೇರಿದಂತೆ ಚಿನ್ನ ಪಟ್ಟಣದಿಂದ ತಂತಿಯ ಸಮಾಚಾರ ಬಂದದಿನವೇ ಪುತ್ರ ಜನನವಾದ ಶುಭವಾರ್ತೆಯ ಬಂದು ನಾರಾ ಯಣ ಮೂರ್ತಿ ಸಂತೋಷವನ್ನು ಇಮ್ಮಡಿಸಿತು, ಇಪ್ಪತ್ತೊಂದನೆಯದಿನ ನಾಮಕರಣ ಮಹೋತ್ಸವವು ನಿಶ್ಚಯವಾಯಿತು. ಆದುದರಿಂದ ನಾಲ್ಕು ದಿನ ರಜಾ ತೆಗೆದು ಕೊಂಡು ನಾರಾಯಣಮೂರ್ತಿ ತಮ್ಮಂದಿರೊಡನೆಯ ಅತ್ತಿಗೆ ನಾದನಿ ಯರೊಡನೆಯ ಒಡಹುಟ್ಟಿದ ಹೆಣ್ಣು ಮಕ್ಕಳೊಡನೆಯ ಪೆದ್ದಾಪುರಕ್ಕೆ ಹೋಗಿ ಪುನಃ ಹಿಂದಿರುಗಿ ಬಂದನು, ಆ ಮಗುವಿಗೆ ಲಕ್ಷ್ಮಿ ನಾರಾಯಣರಾವ್ ಎಂದು ಅಜ್ಜನ ಹೆಸರನ್ನೇ ಇಟ್ಟರು, ಕೆಲವು ತಿಂಗಳ ಕೆಳಗೆ ನಾಗರಚೌತಿಯ ದಿನ ಹುತ್ತಕ್ಕೆ ಹಾಲೆರೆಯುವುದಕ್ಕಾಗಿ ತಾಯಿಯೊಂದಿಗೆ ರಾಮಾನುಜಮ್ಮನೂ ಹೋಗಿದ್ದಳು. ಆಗ ಅವಳನ್ನು ಒಂದು ಹಾವು ಕಚ್ಚಿತು, ಮಗು ಸತ್ತಿತು. ಸತ್ತಸಮಾಚಾರ ತಿಳಿದರೂ ನಾರಾಯಣಮೂರ್ತಿಯ ಸತ್ಯವತಿಯ ಬಂದು ನೋಡಿಕೊಂಡು ಹೋಗಲಿಲ್ಲವಲ್ಲ ಎಂಬ ಕೋಪದಿಂದಲೂ ತಮ್ಮ ಮಗಳು ಸತ್ತ ದುಃಖದಲ್ಲಿಯ ನಾರಾಯಣಮೂರ್ತಿ ತಾನೇ ಬಂದು ಕರೆದನಲ್ಲ ಎಂಬ ಮತ್ಸರದಿಂದಲೂ ಶುಭ ಲೇಖನವನ್ನು ಬರೆದುಕೊಟ್ಟು ದೊಡ್ಡ ತಮ್ಮನಾದ ರಾಮಸ್ವಾಮಿಯನ್ನು ಕಳು ಹಿಸಿದರೂ ನಾಮಕರಣಮಹೋತ್ಸವಕ್ಕೆ ವೆಂಕಟೇಶನೂ ಸುಂದರಮ್ಮನೂ ಮಾತ್ರ ಬರಲಿಲ್ಲ, ಅವರು ಬಾಗದೆ ಹೋದರಲ್ಲ ಎಂದು ನಾರಾಯಣಮೂರ್ತಿಯ ಸತ್ಯ ವತಿಯೂ ಬಹು ಪೇಚಾಡಿಕೊಂಡರು. ಈ ಲೋಕದಲ್ಲಿ ಯಾರೂ ಸರ್ವದಾ ಸುಖವಾಗಿರುವುದಿಲ್ಲ. ಮಧ್ಯೆಮಧ್ಯೆ ಯಾವುದೋ ಒಂದು ಬಗೆಯಾದ ದುಃಖ ವುಂಟಾಗುತ್ತಿರುವುದು ಹೀಗೆ ಅವರೆಲ್ಲರೂ ಸುಖವಾಗಿರುವಾಗ ಒಂದು ದಿನ ಕೃಷ್ಣಮೂರ್ತಿ ನರಸಾಪುರದಲ್ಲಿ ತನ್ನ ಸೋದರಮಾವನಿಗೆ ಕಾಯಿಲೆಯಾಗಿರು ವುದೆಂದು ಕೇಳಿ ನೋಡಿಕೊಂಡು ಬರುವುದಕ್ಕಾಗಿ ಮಧ್ಯಾಹ್ನ ಮೂರು ಘಂಟೆಯ ಸಮಯ ದಲ್ಲಿ ಹಡಗು ಹತ್ತಿದನು, ಆ ಹಡಗು ಗೋದಾವರಿಯಲ್ಲಿ ಅರ್ಧ ದೂರ ಹೋದಮೇಲೆ ದೊಡ್ಡದೊಂದು ಬಿರುಗಾಳಿ ಬಂದಿತು. ಕಟ್ಟಿದ್ದ ಹಳೆಯ ಹಳ್ಳಗಳೆಲ್ಲ