ಪುಟ:ಸತ್ಯವತೀ ಚರಿತ್ರೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಲೆ ಸತ್ಯ ನತೀಚರಿತ್ರೆ

  • #1 11, r\* * * * * * * * * \ 4 \ #1 * * * * * * * * * * * * * * * * * * * \ ಈv # \ #* \ +\* *\ \ ****/* * * * # /\\ r\ n Arry " **/

ಕಿತ್ತು ಹೋದುವು, ಮತ್ತು ಹಡಗು ನಡಿಸುತ್ತಿದ್ದವರಿಗೆ ತಿಳುವಳಿಕೆ ಕಡಿಮೆ, ಈ ಕಾರಣಗಳಿಂದ ಹಡಗು ಮಲೆಗೆ ಒರಗಿತು, ಒಳಗಿದ್ದವರೆಲ್ಲರೂ ಏಕಕಾಲದಲ್ಲಿ ಒಂದೇಕಡೆಗೆ ಬಂದುದರಿಂದ ಹಡಗು ಮುಳುಗಿಹೋಯಿತು. ಆಗ ಈಚೆಗೆ ಬಾರ ದೆಯ, ದಡಸೇರುವುದಕ್ಕೆ ಈಜು ಬೀಳದೆಯ ಮೃತಿಪಟ್ಟವರಲ್ಲಿ ಕೃಷ್ಣ ಮೂರ್ತಿ ಯೊಬ್ಬನು, ಹಡಗು ಮುಳುಗಿದ ಸಿಡಿಲಿನಂತಹ ದುರ್ವಾರ್ತೆ ರಾತ್ರಿ ಏಳು ಘಂಟೆಗೆ ರಾಜಮಹೇಂದ್ರಕ್ಕೆ ತಿಳಿಯಿತು, ಆಗ ನಾರಾಯಣಮೂರ್ತಿ ಮುಂತಾದ ವರು ಚಿಕ್ಕ ಚಿಕ್ಕ ದೋಣಿಗಳಲ್ಲಿ ಕುಳಿತು ಕೊಂಡು ಅಲ್ಲಿಗೆ ಹೋಗಿ ನೋಡಿ ಅನ್ಯಾಯ ವಾಯಿತೆಂದು ಬಹು ವಿಷಾದಪಟ್ಟರು. ಸೀತೆಗೆ ಮದುವೆಯಾಗಿ ಒಂದು ವರ್ಷ ವಾದರೂ ತುಂಬಲಿಲ್ಲ. ಆದರೂ ಅವಳಿಗೆ ವೈಧವ್ಯಯೋಗ ಸಂಭವಿಸಿತು. ಆಹಾ ! ವಿಧಿವಿಲಾಸವನ್ನು ಏನೆಂದು ಹೇಳೋಣ. ಸತ್ಯವತಿಯು ಮಗುವಿಗೆ ಐದು ತಿಂಗಳು ತುಂಬುವವರೆಗೂ ತವರುಮನೆಯಲ್ಲಿಯೇ ಇರಬೇಕೆಂದು ಯೋಚಿಸಿಕೊಂಡಿದ್ದಳು. ಆದರೆ ತನ್ನ ಪ್ರೀತಪಾತ್ರಳಾದ ನಾದಿನಿಗೆ ಅಂತಹ ವಿಪತ್ತು ಬಂದುದನ್ನು ಕೇಳಿದ ಕೂಡಲೆ ಒಂದು ನಿಮಿಷವಾದರೂ ಅಲ್ಲಿರುವುದಕ್ಕೆ ಅವಳ ಕಾಲು ನಿಲ್ಲಲಿಲ್ಲ. ಅವಳು ಮಗುವೆತ್ತಿಕೊಂಡು ಮೂರನೆಯ ತಿಂಗಳಲ್ಲಿಯೇ ಹಡಗುಹತ್ತಿ ಅಣ್ಣ ನೊಂದಿಗೆ ಹೊರಟು ಮರುದಿನವೇ ರಾಜಮಹೇಂದ್ರಕ್ಕೆ ಸೇರಿದಳು. ಆಗ ಮನೆ ಯಲ್ಲಿ ಎಲ್ಲಿ ನೋಡಿದರೂ ರೋದನಧ್ವನಿಯೇ ತುಂಬಿದ್ದಿತು. ನೋಡುವವರಿಗೆ ಝಗ್ಗನೆ ಎದೆಯೊಡೆದು ಹೋಗುವಂತಿದ್ದಿತು. ನಾದನಿಯ ಮೇಲೆ ಪ್ರೀತಿ ಬಹಳವಾಗಿ ದ್ದುದರಿಂದ ಸತ್ಯವತಿಯ ದುಃಖವು ಅಪಾರವಾಗಿದ್ದಿತು. ಆಕೆಯೇ ಸೀತೆಗೆ ಮೊದ ಲಿಂದಲೂ ಓದುಕಲಿಸಿದವಳು. ಆದಕಾರಣ ಅವಳನ್ನು ತಾನೇ ಹೆತ್ತವಳಂತೆ ನೋಡಿಕೊಳ್ಳುತ್ತಿದ್ದಳು, ಸೀತೆಗೂ ಅತ್ತಿಗೆಯ ವಿಷಯದಲ್ಲಿ ಅಂತಹ ಪ್ರೀತಿಯೇ, ತನ್ನ ಒಡಹುಟ್ಟಿದವರಲ್ಲಿ ಸೀತೆಯೇ ಬಹಳ ಚಿಕ್ಕವಳಾದುದರಿಂದಲೂ ಅತಿ ಮೋಹ ದಿಂದ ಸಾಕಿದವಳಾದುದರಿಂದಲೂ ಅವಳ ಮದುವೆಗೆ ತಾನೇ ಪ್ರೇರಕನಾದುದ ರಿಂದಲೂ ನಾರಾಯಣಮೂರ್ತಿ ಸೀತೆಗೆ ಒದಗಿದ ದುರ್ಗತಿಗಾಗಿ ಅಪರಿಮಿತವಾದ ದುಃಖಕ್ಕೆ ಗುರಿಯಾದನು. ಆ ದಂಪತಿಗಳು ಒಳಗೆ ಎಷ್ಟು ದುಃಖಪಟ್ಟರೂ ಮೇಲೆ ಮಾತ್ರ ಮಿಕ್ಕವರಂತೆ ಗಟ್ಟಿಯಾಗಿ ಅಳುತ್ತಿರಲಿಲ್ಲ. ವೆಂಕಟೇಶನು ಒಡಹುಟ್ಟಿದ ವಳಿಗೆ ಇಂತಹ ವಿಪತ್ತು ಸಂಭವಿಸಿತೆಂಬ ಮಾತನ್ನು ಕೇಳಿದರೂ ಒಂದುಸಾರಿಯಾದರೂ ಬಂದು ನೋಡಿಕೊಂಡು ಹೋಗಲಿಲ್ಲ. ತನ್ನ ಮಗಳು ಹೋದಾಗ ಅವರಿಬ್ಬರೂ ಬಂದು ನೋಡಲಿಲ್ಲವಲ್ಲ ಎಂಬ ಕೋಪದಿಂದ ಅವನ ಎದೆ ಕಲ್ಲಾಗಿದ್ದಿತು.