ಪುಟ:ಸತ್ಯವತೀ ಚರಿತ್ರೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩. ಸತ್ಯ ವಚರಿತ್ರೆ ಕೊಳ್ಳದೆ ಕ್ಷಮಾಗುಣವನ್ನು ಅವಲಂಬಿಸಿ ಅವರು ಕೇಳಿದುದಕ್ಕೆಲ್ಲಾ ಸಮಾಧಾನ ವನ್ನು ಹೇಳಿ ತಾನು ತಿಳಿದು ಕೊಳ್ಳಬೇಕಾದ ಸಂಗತಿಗಳನ್ನೆಲ್ಲಾ ತಿಳಿದುಕೊಂಡು ಅವ ರನ್ನು ಕಳುಹಿಸುತ್ತಿದ್ದನು. ಮೊಟ್ಟ ಮೊದಲೇ ಪ್ರತಿಫಲವನ್ನು ಖಂಡಿತವಾಗಿ ನಿಶ್ಚಯಿ ಸಿಕೊಂಡು ಅವರಿಂದ ಮುಂದಾಗಿಸ್ವಲ್ಪ ಹಣವನ್ನು ತೆಗೆದುಕೊಳ್ಳುತ್ತಿದ್ದನೇಹೊರತು ಪೂರ್ವ ಕಾಲದ ನ್ಯಾಯವಾದಿಗಳಂತೆ ಕಡಿಮೆಯಾದ ದುಡ್ಡಿಗೆ ಒಪ್ಪಿಕೊಂಡು ಅಕ್ರಮ ನಾಗಿ ಸ್ಟಂಪುಗಳ ಹೆಸರನ್ನು ಹೇಳುತ್ತಲೂ ಇತರರಿಗೆ ಕೊಡಬೇಕಾದ ಮಾಮಲು ಎಂದು ಹೇಳುತ್ತಲೂ ಒಂದು ಕುರುಡು ಕವಡೆಯನ್ನಾದರೂ ಹೆಚ್ಚಾಗಿ ತೆಗೆದುಕೊ ಇನು, ಸಾಕ್ಷಿಗಳಿಗೆ ಸುಳಾದ ಸಂಗತಿಗಳನ್ನು ಬೋಧಿಸುವುದು, ಕಳ್ಳ ಪತ್ರಗಳನ್ನು ಪ್ರೋತ್ಸಾಹಪಡಿಸುವುದು, ಇವೇ ಮುಂತಾದ ಕೆಲಸಗಳಲ್ಲಿ ತನಗೆ ಲಕ್ಷ ರೂಪಾಯಿ ಗಳ ಆದಾಯವಿದ್ದರೂ ಯಾವಾಗಲೂ ಪ್ರವೇಶಿಸನು. ಆದುದರಿಂದ ಜಮೀ ನಾರರೂ ವಿವಾದಗಳನ್ನು ಬೆಳಸಿ ನೂರಾರು ಊರುಗಳಿಗೆ ಹೋಗಿ ತಿರುಗಿಬಂದು ವ್ಯವಕುಾರಗಳನ್ನು ತರತಕ್ಕೆ ವಿಜ೦ಟರೂ ಈ ತನ ಸಮೀಪಕ್ಕೆ ಬಡಿರು ವ್ಯವಹಾರಕ್ಕೆ ಸಂಬಂಧಪಟ್ಟ ಕಾಗದಪತ್ರಗಳನ್ನು ಚೆನ್ನಾಗಿ ಮನೆಯಲ್ಲಿಯೇ ಓದಿ ಕೊಂಡು ಹೋಗಿ ನ್ಯಾಯ ಸಭೆಗೆ ಸೇರಿದಮೇಲೆ ನ್ಯಾಯಾಧಿಪತಿಯ ಇಷ್ಟ್ರವನ್ನು ಕಂಡು ಹಿಡಿದು ಭಯ ಪಟ್ಟು ಸುಮ್ಮನಿರದೆ ತನ್ನ ಪಕ್ಷದಲ್ಲಿರುವ ಸಾಧನಗಳನ್ನು ತೋರಿಸಿ ಚೆನ್ನಾಗಿ ವಾದಿಸುವುದರಿಂದ ಒಳ್ಳೆಯವರನೇಕರು ಈತನ ಬಳಿಗೆ ಬರು ತಿದ್ದರು. ಹೀಗೆ ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡು ನಿಂತಮೇಲೆ ಆತನು ಒಂದು ಒಳ್ಳೆಯವನೆಯನ್ನು ಹತ್ತು ರೂಪಾಯಿಗಳ ಬಾಡಿಗೆಗೆ ತೆಗೆದುಕೊಂಡು ಅದಕ್ಕೆ ತಕ್ಕಂತೆ ಬೆಂಚುಗಳು ಕುರ್ಚಿಗಳು ಮುಂತಾದುವುಗಳನ್ನೂ ಸಂಪಾದಿಸಿದನು. ಮನೆಯಲ್ಲಿ ಅಡಿಗೆ ಮಾಡುವುದಕ್ಕೆ ಒಬ್ಬ ಬ್ರಾಹ್ಮಣನನ್ನೂ ಕೆಲಸಮಾಡುವುದಕ್ಕೆ ಮನೆತಪ್ಪಿದ ಒಬ್ಬ ಬ್ರಾಹ್ಮಣಸ್ತ್ರೀಯನ್ನೂ ಗೊತ್ತು ಮಾಡಿದನು. ವ್ಯವಹಾರದ ಕೆಲಸಗಳನ್ನು ನೋಡುವುದಕ್ಕೆ ಒಬ್ಬ ಗುಮಾಸ್ತನನ್ನೂ ರಾತ್ರಿ ದೀವಿಗೆ ಹಚ್ಚಿಸು ವದೇ ಮುಂತಾದ ಕೆಲಸಗಳನ್ನು ಮಾಡುವುದಕ್ಕೆ ಒಬ್ಬ ಅಗಸನನ್ನೂ ಏರ್ಪಡಿಸಿ ದನು, ತಾನು ಸಾಯಂಕಾಲದಲ್ಲಿ ಪ್ರತಿದಿನವೂ ಸಂಗೀತವನ್ನು ಕಲಿತುಕೊಳ್ಳು ವುದಕ್ಕೆ ಸಂಬಳ ಕೊಟ್ಟು ಒಬ್ಬ ಸಂಗೀತಗಾರನನ್ನು ಇಟ್ಟು ಕೊಂಡುದಲ್ಲದೆ ಸೀತೆಗೂ ಸತ್ಯವತಿಗೂ ವಿದ್ಯೆ ಕಲಿಸುವುದಕ್ಕೆ ಗಟ್ಟಿಗಳಾದ ಒಬ್ಬ 'ಜಾತಸ್ತ್ರೀಯನ್ನು ನಿಯಮಿಸಿದನು. ಹೀಗೆ ಸಕಲಸುಖಸಂಪೂರ್ಣವಾದ ಕಾಲದಲ್ಲಿ ಯ ಸತ್ಯವತಿ ಕೆಲಸಕಾರ್ಯಗಳನ್ನು ಮಾಡದೆ ಕಾಲವನ್ನು ವ್ಯರ್ಥವಾಗಿ ಕಳೆಯಲಿಲ್ಲ. ಮನೆಯ