ಪುಟ:ಸತ್ಯವತೀ ಚರಿತ್ರೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬

  • #1 * * * * * * * * * * * * E F T # * * * * * * * * * * * * * * * * * * */*/* * \ ?

•sr\r\" r\r\/~, `v 4ಗಿ,,?'* f/11/v* \ \h hy ಹದಿನಾಲ್ಕನೆಯ ಪ್ರಕರಣ ಎಂತಹ ಮನೋವ್ಯಥೆಯ ಆಯಾಸವೂ ಸಂಭವಿಸುತ್ತಿರುವುದು ಈ ಕಲಹದಿಂದ ಸೂರಮ್ಮನ ಅವಳತಾಯಿಯ ಒಟ್ಟಾಗಿ ತಲೆನೋವಿದ್ದಾಗಲೂ ಇಲ್ಲದಾಗಲೂ ಬಟ್ಟೆ ಯನ್ನು ಬಿಗಿಯಾಗಿ ಕಟ್ಟಿ ಕೊಂಡು ಮುಖಕ್ಕೆ ಪಟ್ಟು ಹಾಕಿಕೊಂಡು ಕೊಟ್ಟ ಔಷಧಗಳನ್ನು ತೆಗೆದುಕೊಳ್ಳದೆ ತಮ್ಮನ್ನು ನೋಡಿಕೊಳ್ಳುವುದಕ್ಕೆ ಯಾರೂ ದಿಕ್ಕಿ ಲ್ಲ ವೆಂದು ಗಟ್ಟಿಯಾಗಿ ಅಳುತ್ತಾ ನೆರೆಹೊರೆಯವರನ್ನೆಲ್ಲಾ ಬರಮಾಡುತ್ತಿರುವರು. ಮತ್ತೆ ಕೆಲವು ವೇಳೆ ಸೂರಮ್ಮನು ದೆವ್ವ ಹಿಡಿದಂತೆ ಅಭಿನಯಿಸಿ ಗಟ್ಟಿಯಾಗಿ ಅರಚಿ ಕೊಳ್ಳುತ್ತಾ ಹಾವಳಿಮಾಡಿ ರಾತ್ರಿ ಕಾಲಗಳಲ್ಲಿ ಎಲ್ಲರನ್ನೂ ಊರುಗಳಮೇಲೆ ಓಡಿ ಸುತ್ತಾ ದೇಹದಮೇಲೆ ಸ್ಮತಿಯಿಲ್ಲದಂತೆ ನಟಿಸಿ ಬಾಯಿತೀಟೆ ತೀರುವವರೆಗೆ ತನಗೆ ಕೋಪವಿದ್ದವರನ್ನೆಲ್ಲಾ ಒಯ್ಯುತ್ತಾ ದೆವ್ವದ ಹೆಸರನ್ನು ಹೇಳಿ ಬಟ್ಟೆಗಳನ್ನು ಸುಡು ತಲೂ ಗಾಜಿನಬಟ್ಟಲು ಮುಂತಾದುವುಗಳನ್ನು ಒಡೆದು ಹಾಕುತ್ತಲೂ ವಿಶೇಷ ವಾಗಿ ನಷ್ಟವನ್ನು ಂಟುಮಾಡುತ್ತಿರುವಳು. ಅದರಿಂದ ಸುಬ್ರಹ್ಮಣ್ಯನು ತನಗೆ ಓದಿಗೆ ಎಷ್ಟು ವಾಗುತ್ತಿರುವುದಕ್ಕೂ ಅಂತಹ ಗಯ್ಯಾಳಿ ಹೆಂಡತಿಯಾದುದಕ್ಕೂ, ತನ ಗಾಗಿ ನಿರ್ಮಾಣವಾಗಿ ಅಣ್ಣನಿಗೂ ಅತ್ತಿಗೆಗೆ ಶ್ರಮವುಂಟಾಗುತ್ತಿರುವುದಕ್ಕೂ, ಬಹು ವ್ಯಸನಪಟ್ಟು, ಜುಗುಪೈಯಾದಾಗ ಕೆಲವುವೇಳೆ ಮನೆಬಿಟ್ಟು ದೇಶಾಂತರಕ್ಕೆ ಹೋಗಬೇಕೆಂದೂ ಕೆಲವು ಸಮಯಗಳಲ್ಲಿ ಆತ್ಮಹತ್ಯೆ ಮಾಡಿ ಕೊಳ್ಳಬೇಕೆಂದೂ ಪ್ರಯ ತ್ರಿಸುತ್ತಾಬಂದನು. ಆದರೆ ಇಂದಿನವರೆಗೆ ಅಂತಹ ವೈಪರೀತ್ಯವು ಯಾವುದೂ ನಡೆಯ ಲಿಲ್ಲ. ಮುಂದೆ ಏನಾಗುವುದೋ ಅದು ಈಶ್ವರನಿಗೇ ತಿಳಿಯಬೇಕು. ಸತ್ಯವ ತಿಗೂ ನಾರಾಯಣಮೂರ್ತಿಗೂ ಇರುವ ಮೂರನೆಯ ಚಿಂತೆ ಯಾವುದೆಂದರೆಸೀತೆಗೆ ಬಂದ ದುರವಸ್ಥೆಯ ವಿಷಯ. ಅವರು ಆಕೆಯ ದುರ್ಗತಿಯನ್ನು ಪರಿಹರಿಸಿ ಹೇಗಾದರೂ ಪುನರ್ವಿವಾಹ ಮಾಡಿ ಆಕೆಯನ್ನು ಸುಖಸ್ಥಿತಿಗೆ ತರಬೇಕೆಂದು ತಮ್ಮ ಮನಸ್ಸುಗಳಲ್ಲಿ ದೃಢವಾಗಿ ನಿಶ್ಚಯಿಸಿಕೊಂಡಿದ್ದರೇ ಹೊರತು ಬಹು ಕಾಲದಿಂ ದಲೂ ಪುನರ್ವಿವಾಹವೆಂಬುದು ವಾಡಿಕೆಯಲ್ಲಿಲ್ಲವಾದುದರಿಂದ ಜನಗಳಲ್ಲಿರುವ ದ್ವೇಷವನ್ನೂ ಹೊಸದಾಗಿ ಮದುವೆಯನ್ನು ಮಾಡಿಕೊಂಡವರ ವಿಷಯದಲ್ಲಿ ಮಠಾಧಿಪತಿಗಳು ಬಹಿಷ್ಕಾರ ಪತ್ರಿಕೆಗಳನ್ನು ಕಳುಹಿಸಿ ಪಡಿಸಿದ ಬಾಧೆಯನ್ನೂ ನೆನೆ ನೆನೆದು ಕೊಂಡು ತಮ್ಮ ಅಭಿಪ್ರಾಯವನ್ನು ಕೆಲಮಂದಿ ಆಪ್ತರೊಂದಿಗಲ್ಲದೆ ಇತರರ ಸಂಗಡ ಹೇಳಲಿಲ್ಲ. ಸೋಮ ಸುಂದರನಿಗೆ ಸೀತೆಯನ್ನು ಕೊಟ್ಟು ಮದುವೆಮಾಡ ಬೇಕೆಂದು ಅವರಿಗೆ ಅಭಿಪ್ರಾಯವುಂಟು, ಸೋಮಸುಂದರನೂ ಸೀತೆಯ ಒಬ್ಬರ ಮೇಲೊಬ್ಬರು ಪ್ರೀತಿಯುಳ್ಳವರಾಗಿ ತಾವು ಒಬ್ಬರನ್ನೊಬ್ಬರು ಮದುವೆಮಾಡಿ