ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ಈr ಆ ದ್ವೀಪದಲ್ಲಿ ಮುಖ್ಯವಾದ ಕುದ್ರಮೃಗವು ಬಿಳೀಕರಡಿ, ಇದರ ಬಾಧೆಯನ್ನು ತಪ್ಪಿಸಿಕೊಳ್ಳಲು ಇವರಿಗೆ ಆಯುಧಸಾಮಗ್ರಿ ಅನುಕೂಲ ವಾಗಿರಲಿಲ್ಲ, ಕೋವಿ ಏನೋ ಇತ್ತು, ತಂದಿದ್ದ ಹನ್ನೆರಡು ಗುಂಡೂ ತೀರಿಹೋಗಿತ್ತು. ಆದಕಾರಣ ಕರಡೀ ಬೇಟೆಯಾಡುವುದಕ್ಕೆ ಮತ್ತೊಂದು ಉಪಾಯ ತೋರಿತು, ಸಮಯಬಂದಾಗಲೇ ಮನುಷ್ಯನ ಯುಕ್ತಿಯೂ ಬುದ್ದಿ ಯ ವೃದ್ಧಿ ಯಾಗಿ ಪ್ರಕಾಶಕ್ಕೆ ಬರತಕ್ಕದ್ದು. ಪಾಚೆಯಹಾಗಿರತಕ್ಕೆ ಒಂದು ಬಗೇ ಸಸ್ಯ ವಿನಾ ಮತ್ತೆ ಯಾವ ಗಿಡವೂ ಅಲ್ಲಿ ಬೆಳೆಯುತಿರಲಿಲ್ಲ, ಆದರೆ ಸಮುದ್ರ ತೀರದಲ್ಲಿ ಒಂದು ವಿಧವಾದ ಕುರುಚುಗಿಡ ಬೆಳೆದಿತ್ತು. ಅದರ ಬೇರು ಬಿಲ್ಲಿನಹಾಗೆ ಬಗ್ಗಿ ಕೊಂಡಿತ್ತು, ಅದನ್ನು ಕಿತ್ತುಕೊಂಡು ಬಿಲ್ಲಿನ ಆಕಾರಕ್ಕೆ ಸಮಮಾಡಿ ಕೊಂಡರು. ಜಿಂಕೆಚಕ್ಕಳದ ಬಾರು ಹೆದೆಯೂಯಿತು, ಸಮುದ್ರತೀರ ದಲ್ಲಿ ಬಿದ್ದಿದ್ದ ತುಂಡುಗಳಿಂದ ದೊಣ್ಣೆಗಳನ್ನು ಮಾಡಿಕೊಂಡು ಅದರ ತುದಿಗೆ ಸಾರಗದ ಸಣ್ಣ ಕೊಂಬುಗಳನ್ನು ಬಲಿದರು. ಅದೇ ಈಟಿಯಾ ಯಿತು, ಅಲ್ಲಿ ವಿಸ್ತಾರವಾಗಿ ಸಿಕ್ಕುತಿದ್ದ ಸಾರಗದ ಉದ್ದವಾದ ಕೊಂಬು ಗಳು ಬಾಣಗಳಾದವು. ಹೀಗೆ ಇಬ್ಬರು ಅಂಬು ಬಿಲ್ಲುಗಳನ್ನೂ, ಇನ್ನಿಬ್ಬರು ಈಟಿಯನ್ನೂ ತೆಗೆದುಕೊಂಡರು. ಈ ನಾಲ್ವರೂ ಒಳಪ್ರಾಂ ತಕ್ಕೆ ಹೊರಟು ಸಿಕ್ಕಿದ ಕರಡಿಗಳನ್ನು ಕೊಲ್ಲುತಾ ಬಂದರು, ಈ ಕರಡಿ ಗಳ ಜೊತೆಗೆ, ಬಿಳೀ ನರಿಗಳೂ, ನೀಲವರ್ಣವಾದ ನರಿಗಳೂ ಸಹಾ ಸೇರಿಕೊಂಡು, ಎಷ್ಟು ಕೊಂದರೂ ಅಷ್ಟು ಹೆಚ್ಚಾಗಿ ಬಾಧೆಯನ್ನು ಕೊಡುತಾ ಬಂದವು. ಆಗ ಮದನನು ಓದುವುದನ್ನು ನಿಲ್ಲಿಸಿ- ಏನು ಭಯಂಕರವಾದ ಬಾಳು, ಪ್ರತಿಕ್ಷಣದಲ್ಲಿಯೂ ಕಾಡುಮೃಗಗಳು ನುಂಗಿಕೊಳ್ಳುವವೆಂಬ ಭೀತಿಯೇ ಭೀತಿ, ಏನು ಹೀನವಾದ ಅದೃಷ್ಟ ! ಎಂದನು. ಜೋಯಿಸ-ಹಾಗೆ ಕಾಡುಮೃಗಗಳು ನುಂಗಿಕೊಳ್ಳಲಿಲ್ಲವಷ್ಟೆ. ಮದನ-ಅವುಗಳಿಗೆ ತಕ್ಕ ಆಯುಧಗಳನ್ನು ಹೊಸದಾಗಿ ಮಾಡಿ - ಕೆಂಡಕಾರಣ ನುಂಗಿಕೊಳ್ಳಲಿಲ್ಲ. ಜೋಯಿಸ-ಅಪಾಯ ಸಂಭವಿಸಬಹುದೆಂಬ ಭೀತಿಯಿಂದಲೇ