ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಕಂಡರೆ ನೀನು ಹಾಗೆ ಓಡಿಹೋಗುತೀಯೆ. ಆದಕಾರಣ ನೀನೂ ಕಾಡ ಮೃಗವಾಗಬೇಕಷ್ಟೆ ? ಮದನ-( ಈ ಮಾತಿಗೆ ನಗುತಾ) ನಾನು ಕಾಡಮೃಗವಲ್ಲ ಜೋಯಿಸರೆ.. ಜೋಯಿಸ-ಆದಕಾರಣ ಜಂತುಗಳನ್ನು ಸಾಧುವಾಗಿ ಮಾಡಿ ಕೊಳ್ಳ ಬೇಕಾದರೆ ಅವುಗಳಿಗೆ ಹಿಂಸೆಮಾಡದೆ ಪ್ರೇಮದಿಂದ ಆದರಿಸ ಬೇಕು, ಹಾಗಾದರೆ ನಿನ್ನಲ್ಲಿ ಅವುಗಳಿಗೆ ಭಯವಿಲ್ಲದೆ ಪ್ರೀತಿಯನ್ನು ಇಟ್ಟು ಕೊಂಡಿರುವುವು. ಸುಮತಿ-ತಾವು ಅಪ್ಪಣೆ ಕೊಡಿಸಿದ್ದು ನಿಜ, ಉಪಾಧ್ಯಾಯರೆ. ಒಬ್ಬ ಹುಡುಗನು ದಿನವಹಿ ತನ್ನ ತೋಟಕ್ಕೆ ಹೋಗಿ ಕೆಲಸ ಮಾಡಿ ಕೊಂಡು ಬರುತಿದ್ದನು. ಆ ತೋಟದಲ್ಲಿ ಒಂದು ಘಟಸರ್ಪವಿತ್ತು. ಈ ಹುಡುಗ ತೋಟದಲ್ಲಿ ಕೂತು ಅನ್ನಾ ತಿನ್ನುವಾಗೆಲ್ಲಾ ಒಂದು ಸಿಳ್ಳು ಹಾಕುತಿದ್ದನು. ಆ ಹೊತ್ತಿಗೆ ಸರಿಯಾಗಿ ಆ ಹಾವು ಇವನ ಮುಂದೆ ಬಂದು ಕೂತುಕೊಳ್ಳುತಿತ್ತು, ಹುಡುಗನು ಅದಕ್ಕೂ ಸ್ವಲ್ಪ ಆಹಾರ ವನ್ನು ಹಾಕುತಿದ್ದನು. ಸರ್ಪವು ಅದನ್ನು ತಿಂದು ಹೊಟ್ಟೆ ತುಂಬಿಸಿ ಕೊಂಡು ಸ್ವಲ್ಪ ಹೊತ್ತು ಆಡಿ, ತನ್ನ ಹುತ್ತಕ್ಕೆ ಹೊರಟು ಹೋಗು ತಿತ್ತು, ಹೀಗೆ ಹಾವು ಸಹಿತ ಒಗ್ಗಿಕೊಂಡಿತ್ತು, ಅವನ ಕೈಯಿಂದಲೇ ಆಹಾರವನ್ನು ಇಸಕೊಂಡು ತಿಂದು ಹೊರಟು ಹೋಗುತಿತ್ತು. ಮದನ- ಹಾವು ಅವನನ್ನು ಕಚ್ಚು ತಿರಲಿಲ್ಲವೆ ? ಸುಮತಿ-ಇಲ್ಲ. ಹುಡುಗನು ಅದಕ್ಕೆ ಒಂದೆರಡು ಏಟ ಹೊಡೆ | ದರೂ ಅವನ ಗೋಜಿಗೆ ಹೋಗುತಿರಲಿಲ್ಲ. ಈ ಮಾತನ್ನು ಕೇಳಿ ಮದನನಿಗೆ ಬಹಳ ಸಂತೋಷವಾಯಿತು. ಸಹಜವಾಗಿ ಒಳ್ಳೆ ಹುಡುಗನಾದಕಾರಣ, ಯಾವುದಾದರೂ ಸಿಕ್ಕಿದ ಪ್ರಾಣಿಗಳನ್ನು ಒಗ್ಗಿಸಿಕೊಂಡು, ಅವುಗಳನ್ನು ಸಾಕಬೇಕೆಂದು ಇವ .ನಿಗೆ ಆಶೆಹುಟ್ಟಿ ತು, ತನ್ನ ಅಂಗೀ ಜೇಬಿನಲ್ಲಿ ಸ್ವಲ್ಪ ಮಿಠಾಯಿಯನ್ನು ಹಾಕಿಕೊಂಡು ಬೀದಿಗೆ ಹೊರಟನು. ದೂರದಲ್ಲಿ ಒಂದು ಹಂದಿಮರಿ ಓಡಾಡುತಿತ್ತು, ಅದನ್ನು ಕಂಡು ಹಂದೀ ಹಂದೀ, ಇಲ್ಲಿ ಬ್ರಾ, ಬ್ರಾ,