ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ತಾವು ಹೇಳಿದಂತೆ ಪ್ರಾಣಿಗಳಿಗೆ ಉಪಕಾರ ಮಾಡಬೇಕೆಂದು ಹೋದ ರಿಂದ ಹೀಗಾಯಿತು. ಇದಕ್ಕೆ ನೀವೇ ಕಾರಣ, ಎಂದನು. ಆಗ ಉಪಾಧ್ಯಾಯನು-ಅಪ್ಪಾ, ಚಿಂತೆ ಇಲ್ಲ, ನಿನಗೆ ಬಹಳ ಪೆಟ್ಟಾಗ ಲಿಲ್ಲವಲ್ಲ, ಮನೆಗೆ ನಡೆ, ಮೈ ತೊಳೆದುಕೊ, ಎಂದು ಹೇಳಿ ಅವನನ್ನು ಕರೆದುಕೊಂಡು ಹೋದನು. ಮದನನು ಮೈ ತೊಳೆದುಕೊಂಡು ಬಂದಮೇಲೆ ಜೋಯಿಸನು ಈ ಅಪಾಯವು ಸಂಭವಿಸಿದ ರೀತಿಯನ್ನು ಕೇಳಿ ತಿಳಿದುಕೊಂಡು - ಅಪ್ಪ, ನಿನಗೆ ಬಾಧೆ ಆಯಿತು. ಇದಕ್ಕೆ ನಾನು ಹೇಗೆ ಕಾರಣನೊ ತಿಳಿಯದು, ಹಂದೀ ಕಾಲನ್ನು ಹಿಡಿದು ಎಳೆತರುವಹಾಗೆ ನಾನು ನಿನಗೆ ಹೇಳಿದೆನೆ ? - ಮದನ-ಇಲ್ಲ, ಹಾಗೆ ಹೇಳಲಿಲ್ಲ. ಆದರೆ ಪ್ರಾಣಿಗಳಿಗೆ ಆಹಾರ ವನ್ನು ಹಾಕಿದರೆ, ಅವು ನಮಗೆ ಒಗ್ಗಿಕೊಳ್ಳು ವವು ಎಂದು ಹೇಳಿದಿರಿ. ಇದಕ್ಕಾಗಿ ಆ ಹಂದಿಗೆ ನಾನು ದೋಸೆಯನ್ನು ಹಾಕೋಣವೆಂದು ಹೋದೆ, ಜೋಯಿಸ-ಆದರೆ ದಾರಿತಪ್ಪಿ ನೀನು ಆ ಕೆಲಸಕ್ಕೆ ಹೋದ್ದು ನನ್ನ ತಪ್ಪಲ್ಲ. ನೀನು ಅದಕ್ಕೆ ತಿಂಡಿ ಹಾಕುತೀಯೆ ಎಂದು ಅದು ಅರಿಯದು, ಆದ್ದರಿಂದ ನೀನು ಹಿಡಿದುಕೊಳ್ಳಲು ಅರಚಿಕೊಂಡಿತು. ಮರಿಯ ಕೂಗನ್ನು ಕೇಳಿ ತಾಯಿ ಓಡಿಬಂತು, ಇದೆಲ್ಲಾ ನಿನಗೆ ತಿಳಿವಳಿಕೆ ಇಲ್ಲದಕಾರಣ ಉಂಟಾಯಿತು. ಜಂತುಗಳ ಗೋಜಿಗೆ ಹೋಗುವುದಕ್ಕೆ ಮುಂಚೆ ಅವುಗಳ ಸ್ವಭಾವವನ್ನು ತಿಳಿದುಕೊಳ್ಳ ಬೇಕು. ಇದಲ್ಲದೆ ಇದ್ದರೆ ನೊಣವನ್ನು ಹಿಡಿಯುತ್ತೇನೆಂದು ಹೋಗಿ ಕಣಜದ ಕೈಲಿ ಕಡಿಸಿಕೊಂಡ ಹುಡುಗನ ಬಾಳು ನಿನಗೂ ಉಂಟಾಗುವುದು. ಮದನ-ಉಪಾಧ್ಯಾಯರೆ, ಒಬ್ಬ ಸಣ್ಣ ಹುಡುಗ ಹಾವಿಗೆ ಆಹಾರವನ್ನು ಹಾಕಿ ಒಗ್ಗಿಸಿಕೊಂಡಿದ್ದನೆಂದು ಸುಮತಿ ಆ ದಿನ ಹೇಳ ಲಿಲ್ಲವೆ ? ಜೋಯಿಸ-ಅದಾಗಬಹುದು, ಹೊಟ್ಟೆಗೆ ಇಲ್ಲದ ಬಾಧೆ ಉಂಟಾದಾಗ ಹೊರತು ಯಾವ ಪ್ರಾಣಿಯೂ ಇತರರನ್ನು ತೊಂದರೆ