ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ರ್ಕ ಹೀಗೆ ಜೋಯಿಸನು ಹೇಳಿ ಮುಗಿಸಿದ ಎರಡು ಕಥೆಗಳನ್ನೂ ಕೇಳಿ ಮದನನಿಗೆ ಬಹುವಾಗಿ ಆನಂದ ಉಂಟಾಯಿತು. ಮುಂದಕ್ಕೆ ಜೀವಜಂತುಗಳ ವಿಷಯದಲ್ಲಿ ವಿವೇಕವಾಗಿದ್ದು ಅವುಗಳನ್ನು ಆದರ ದಿಂದ ನೋಡಿಕೊಳ್ಳು ತ್ತೇನೆಂದು ಮದನ ಹೇಳಿದನು. ೯ ನೆ ಅಧ್ಯಾಯ ಮಾರನೇ ದಿನ ಮದನನೂ ಸುಮತಿಯೂ ಇಬ್ಬರೂ ಸೇರಿ ಎಂದಿ ನಂತೆ ತೋಟಕ್ಕೆ ಬಂದರು. ಅಲ್ಲಿ ತಾನು ಅಗೆದು ಮಡಿಮಾಡಿದ್ದ ಪಾತಿಗೆ ಕೊತ್ತುಂಬರಿಯನ್ನು ಬಿತ್ತಬೇಕೆಂದು ಸುಮತಿಯು ತನ್ನ ಸಂಗಡ ಸ್ವಲ್ಪ ಬೀಜವನ್ನು ತಂದಿದ್ದನು. ಅವರಿಬ್ಬರೂ ಸೇರಿ ಕೆಲಸ ಮಾಡುತ್ತಾ ಇರುವಾಗ್ಗೆ, ಮದನ-ಸುಮತಿ, ಮಂಜಿನಗಡ್ಡೆ ಯಿಂದ ತುಂಬಿ, ಛಳಿಯಿಂದ ಪಂಚಪ್ರಾಣವನ್ನೂ ನಡುಗಿಸತಕ್ಕ ಒಂದಾನೊಂದು ದ್ವೀಪದಲ್ಲಿ ೩-೪ ಜನ ನಾವಿಕರು ವರ್ಷಾ೦ತರ ಇದ್ದರಂತಲ್ಲಾ ; ಈ ಕಥೆಯನ್ನು ನೀನು ಕೇಳಿದ್ದೀಯಾ ? ಆ ದೇಶದಲ್ಲಿ ಮನುಷ್ಯರನ್ನು ಉ೦ಡೆಯಾಗಿ ನುಂಗಿ ಕೊಳ್ಳುವ ದೊಡ್ಡ ದೊಡ್ಡ ಕರಡಿ ಹೊರತು ಮತ್ತೆ ಯಾವ ಮೃಗವೂ ಇಲ್ಲವಂತೆ. ಸುಮತಿ-ನಾನು ಕೇಳಿದೇನೆ. ಮದನ-ಅದನ್ನು ನೆನಸಿಕೊಂಡರೆ ನಿನಗೆ ಅತ್ಯಂತ ಭಯವುಂ ಟಾಗುವದಿಲ್ಲವೆ ? ಸುಮತಿ-ನನಗೇನೂ ಭಯವಾಗುವುದಿಲ್ಲ. ಮದನ-ಅಂಥಾ ಹಾಳು ದೇಶದಲ್ಲಿ ಇರಬೇಕೆಂದು ಯಾಕೆ ಅಪೇ ಕ್ಷಿಸುತ್ತೀಯೆ ? ಸುಮತಿ- ಅಂಥಾ ದೇಶದಲ್ಲಿ ಇರಬೇಕೆಂಬ ಅಪೇಕ್ಷೆ ನನಗಿಲ್ಲ.