ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೧04 ಕುದುರೆಯು ಚೇತರಿಸಿಕೊಂಡು ಮೆಲ್ಲನೆ ಮುಂದಕ್ಕೆ ಹೊರಟಿತು. ಆಗ ಈ ಹುಡುಗನು-ಹೊತ್ತು ಬಹಳವಾಯಿತು. ದಾರಿ ಸಾಗಲಿಲ್ಲ, ಸುತ್ತುಮುತ್ತ ಕಳ್ಳರ ಕಾಟವೆಂದು ಹೇಳುತ್ತಾರೆ, ಆದರೂ ಚಿಂತೆ ಇಲ್ಲ, ಸಂಕಟಪಡುತಿದ್ದ ಪ್ರಾಣಿವಾತ್ರಕ್ಕೆ ನಾವು ಉಪಕಾರವನ್ನು ಮಾಡಿದರೆ ನಮಗೆ ಪುಣ್ಯ ಉಂಟು, ನಮಗೆ ಬಂದ ಕಷ್ಟವನ್ನೆಲ್ಲಾ ದೇವರು ಪರಿ ಹರಿಸುತ್ತಾನೆ, ಎಂದುಕೊಂಡನು. ಆ ಮೇಲೆ ಮುಂದಕ್ಕೆ ಹೋಗಲು, ಅಲ್ಲಿ ಒಬ್ಬ ತುರುಕನು ಒಂದು ಕೆರೆಯೊಳಗೆ ಎದೆಯುದ್ದ ನೀರಿನಲ್ಲಿ ಹೋಗುತಿದ್ದನು, ಈ ಒಳ್ಳೇ ಹುಡುಗನು ಅವನನ್ನು ಕಂಡು-ಅಪ್ಪಾ, ನೀನು ಯಾರು ? ನಡುನೀರಿ ನಲ್ಲಿ ಯಾಕೆ ಹಾಗೆ ಹೋಗುತೀಯೇ ? ಎಂದು ಕೂಗಿದನು, ಆ ಕುರು ಡನು-ಅಯ್ಯಾ, ನನಗೆ ಎರಡು ಕಣ್ಣೂ ಕಾಣುವುದಿಲ್ಲ. ದಾರಿತಪ್ಪಿ ಈ ಕಡೆಗೆ ಬಂದು ನೀರಿನೊಳಕ್ಕೆ ಬಿದ್ದೆ, ನನಗೆ ದಾರಿ ತೋರಿಸಯ್ಯ ಎಂದನು. ಈ ಬಾಲಕನು ದಯಾರಸದಿಂದ ನೀರಿನ ತಡಿಗೆ ಹೋಗಿ ಅಲ್ಲಿ ಬಿದ್ದಿದ್ದ ಉದ್ದವಾದ ಜಳವೆಯನ್ನು ತೆಗೆದುಕೊಂಡು, ಅದರ ಮೂಲಕ ಕುರುಡನು ನೀರಿನ ತಡಿಗೆ ಬರುವಂತೆ ಮಾಡಿ, ಅವನನ್ನು ದಾರಿಗೆ ಕರೆತಂದುಬಿಟ್ಟನು. ಈ ಉಪಕಾರಕ್ಕಾಗಿ ಕುರುಡನು ಹುಡುಗ ನನ್ನು ಕೊಂಡಾಡಿ, ಹರಸಿ ಮುಂದಕ್ಕೆ ನಡೆದನು, ತರುವಾಯ ಈ ಹುಡುಗನ ದಾರಿ ಸ್ವಲ್ಪ ಸಾಗಿತು, ಅಷ್ಟರಲ್ಲಿಯೇ ಅಲ್ಲಿ ಒಬ್ಬ ಕುಂಟ ಕೂತುಕೊಂಡು,-ಅಪ್ಪಾ ಧರಾತ್ಮರೆ, ನಾನು ಎರಡು ಕಾಲೂ ಇಲ್ಲದ ಹೆಳವ, ನನಗೆ ಏನಾದರೂ ಕೊಟ್ಟು ಪುಣ್ಯ ವನ್ನು ಕಟ್ಟಿ ಕೊಳ್ಳಿ, ಎಂದನು. ಈ ಬಾಲಕನು ಅದನ್ನು ಕಂಡು, ತನ್ನ ಹತ್ತಿರ ಇದ್ದ ಬುತ್ತಿಯ ಅನ್ನ ವನ್ನೆಲ್ಲಾ ಅವನಿಗೆ ಇಕ್ಕಿ, ತಾನು ಹಸಿದುಕೊಂಡು ಮುಂದಕ್ಕೆ ಹೊರಟನು. ಆಗ ಅರ್ಧದಾರಿ ಕೂಡ ಸಾಗಿರಲಿಲ್ಲ, ಸಾಯಂಕಾಲವಾಯಿತು, ಮೋಡ ಕವಿದುಕೊಂಡಿತು, ಮಳೆ ಹುಯ್ಯುವುದಕ್ಕೆ ಮೊದಲಾಯಿತು, ಇವನ ಕಾಲಿಗೆ ಮುಳ್ಳು ಬಲಿದುಕೊಂಡು ತುಂಬಾ ಯಾತನೆಯಾಯಿತು. ಒಂದು ಹೆಜ್ಜೆಯನ್ನೂ ಆಚೆಗೆ ಇಡಲಾರದೆ ಹುಡುಗನು, ಒಂದು ಕಲ್ಲಿನ