ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ. ಹೀಗಿರುವಲ್ಲಿ ಆ ಅಟಕ್ ಪಟ್ಟಣದಲ್ಲಿಯೇ ಇದ್ದ ಒಬ್ಬ ಮುಲ್ತಾನಿ ಸಾಹುಕಾರನಿಗೆ ಒಬ್ಬನೇ ಒಬ್ಬ ಮಗ ಇದ್ದನು. ಮಗನ ಮೇಲೆ ತಂದೆಗೆ ವಿಶೇಷವಾದ ಪ್ರೀತಿ ಇತ್ತು. ಈ ಹುಡುಗನು ನಿತ್ಯವೂ ಮಠಕ್ಕೆ ಹೋಗುವಾಗ, ಸುಲೇಮಾನ ಕೂತಿದ್ದ ಮನೆಯ ಮಾರ್ಗ ವಾಗಿಯೇ ಹೋಗುತಿದ್ದನು. ಆ ದಾರಿಯಲ್ಲಿ ಅಷ್ಟೊಂದು ಜನ ತಿರುಗು ತಿದ್ದಾಗ್ಯೂ, ಒಬ್ಬರಾದರೂ ಒಂದು ದಿನವಾದರೂ ಸುಲೇಮಾನನ ಸಂಗಡ ಒಂದು ಮಾತನ್ನೂ ಆಡುತಿರಲಿಲ್ಲ. ಆದರೆ ಮುಲ್ತಾನೀ ಸಾಹುಕಾರನ ಮಗ ಮಾತ್ರ ಮಠಕ್ಕೆ ಹೋಗುತ್ತಾ ಬರುತಾ ದಾರಿಯಲ್ಲಿ ಸುಲೇಮಾನನ ಹತ್ತಿರ ಸ್ವಲ್ಪ ಹೊತ್ತು ನಿಂತುಕೊಂಡು ಅವನ ಸಂಗಡ ನಾಲ್ಕು ಮಾತ ನ್ಯಾಡಿ ಹೋಗುತಿದ್ದನು. ಮೇಲೂ ಅನುಕೂಲವಾದಾಗೆಲ್ಲಾ ತನಗೆ ದೊರೆತ ತಿಂಡಿಯನ್ನು ಆ ಪುಲಾಮನಾದ ಸುಲೇಮಾನನಿಗೆ ತಂದು ಕೊಡು ತಿದ್ದನು. ಹೀಗೆ ಇವರಿಬ್ಬರಿಗೂ ಸ್ನೇಹ ಹೆಚ್ಚಿತು. ಹೀಗಿದ್ದಾಗ್ಯೂ ಸುಲೇಮಾನನು ದುಃಖಪಡುತಲೇ ಇರುತಿದ್ದನು. ಮುಲ್ತಾನೀ ಸಾಹು ಕಾರನ ಮಗನ ಸಂಗಡ ಮಾತನಾಡುತ್ತಾ ಇದ್ದಾಗ ಕೂಡ ದುಃಖವು ಉಮ್ಮಿ ಉಮ್ಮಿ ಬರುತಿತ್ತು ; ಆಗಾಗ್ಗೆ ಕಣ್ಣಿನಲ್ಲಿ ನೀರು ಬರುತಿತ್ತು. ಆದರೂ ಆ ದುಃಖವನ್ನು ನುಂಗುತಾ ಕಣ್ಣಿನಲ್ಲಿ ಬರುತಿದ್ದ ನೀರನ್ನು ಒರಸಿಕೊಳ್ಳು ತಾ ಇದ್ದನು, ಸಾಹುಕಾರನಮಗನು- ಯಾಕೆ ಅಳುತೀಯೆ? ನಿನಗೆ ಏನು ಬೇಕು ? ನನ್ನ ಸಂಗಡ ಹೇಳು, ನಮ್ಮ ತಂದೆಗೆ ಹೇಳಿ ಅದನ್ನು ಆಗಮಾಡಿಸುತೇನೆ, ಎಂದು ಎಷ್ಟು ಬಗೆಯಲ್ಲಿ ಕೇಳಿದರೂ, ಸುಲೇಮಾನನು ಬಾಯ ಬಿಡದೆ ಸುಮ್ಮನೆ ಇರುತಿದ್ದನು. ಹೀಗಿರಲಾಗಿ, ಒಂದು ದಿನ ಆ ಗುಲಾಮನ ಗೋಳನ್ನು ನೋಡಿ ಸಾಹುಕಾರನ ಮಗನಿಗೂ ಬಹಳ ವ್ಯಾಕುಲವಾಯಿತು. ಬಹು ಒಳ್ಳೆಯ ವನಾದ ಸುಲೇಮಾನನಿಗೆ ಏನೋ ಕಷ್ಟ ಬಂದಿದೆಯಲ್ಲಾ, ಎಂದು ಯೋಚಿಸುತಾ ಈ ಹುಡುಗನು ಒಂದು ದಿನ ಮನೆಗೆ ಹೋಗಿ ಊಟ ವನ್ನು ಮಾಡದೆ ಸುಮ್ಮನೆ ಮಲಗಿಕೊಂಡನು. ಯಾರು ಎಬ್ಬಿಸಿದರೂ ಏಳದೆ ಇರಲು, ಸಾಹುಕಾರನೇ ಬಂದು ಮಗನನ್ನು ಎಬ್ಬಿಸಿ ದುಗುಡ ವೇನೆಂದು ಕೇಳಿದನು. ಆಗ ಬಾಲಕನು-ಜೀಯ, ನಾನು ಮಠಕ್ಕೆ