ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ ಇರುತೀಯೆ, ಎಂದು ನನ್ನ ಪುತ್ರ ಹೇಳುತಾನೆ ; ಆ ದುಃಖವೇನು ? ಅದಕ್ಕೆ ಕಾರಣವೇನು ? ಅದನ್ನು ಹೋಗಲಾಡಿಸುವುದಕ್ಕೆ ನನ್ನಿಂದ ಆಗಬೇಕಾದ ಸಹಾಯವೇನು ? ಎಂದು ಕೇಳಿದನು. ಸುಲೇರ್ಮಾ- ಸ್ವಾತಂತ್ರ ಹೋಗಿ ನಿರ್ಬ೦ಧದಲ್ಲಿ ನರಳುತಾ ಇರುವ ನಾನು ದುಃಖಪಡುವುದು ಏನು ಆಶ್ಚರ್ಯವೆ ? ಸಾಹುಕಾರ – ನಮ್ಮವರು ಎಷ್ಟು ಜನರನ್ನು ನಿಮ್ಮವರು ಸೆರೆ ಯಲ್ಲಿಟ್ಟು ಕೊಂಡಿದಾರೆ, ಅದನ್ನು ಕಾಣೆಯ ? ಸುಲೇರ್ಮಾ-ನಮ್ಮ ಜನರ ಕೆಟ್ಟ ತನಕ್ಕೆ ನಾನು ಜವಾಬು ದಾರನಲ್ಲ. ಹಾಗೆಯೇ ನಿಮ್ಮವರ ಕೆಟ್ಟ ತನ ಕ್ಕೂ ನೀವು ಜವಾಬು ದಾರರಲ್ಲ. ಆದರೆ ನನ್ನ ಮಟ್ಟಿಗೆ ಹೇಳಿಕೊಳ್ಳು ತೇನೆ ; ನಾನು ನಮ್ಮ ದೇಶದಲ್ಲಿ ಯಾರನ್ನೂ ಸೆರೆಯಲ್ಲಿಟ್ಟು ಹಿಂಸಮಾಡಿದವನಲ್ಲ. ಪ್ರಾಣಿ ಮಾತ್ರಕ್ಕೆ ಬಾಧೆಮಾಡಲು ನನಗೆ ಅಭಿಪ್ರಾಯವಿಲ್ಲ. ನಾನು ಇದು ವರೆಗೆ ಯಾವ ಹಿಂದೂ ವರ್ತಕನನ್ನೂ ಹಾಳಮಾಡಿ ನನ್ನ ಮನೆ ಯನ್ನು ತುಂಬಿಕೊಂಡವನಲ್ಲ. (ಹೀಗೆ ಮಾತನಾಡುತಿರಲು ಅವನ ಕಣ್ಣಿನಲ್ಲಿ ನೀರು ಸುರಿಯುವುದಕ್ಕೆ ಮೊದಲಾಯಿತು. ಆ ದುಃಖ ವನ್ನು ನುಂಗಿಕೊಂಡು ಸುಲೇಮಾನನು ಸ್ವಲ್ಪ ಸುಧಾರಿಸಿಕೊಂಡು, ಕೈಯನ್ನು ಕಟ್ಟಿ ಕೊಳ್ಳು ತಾ ತಲೆಯನ್ನು ಬಗ್ಗಿಸಿಕೊಂಡು ಮುಂದಕ್ಕೆ ಹೇಳಿದ್ದೇನೆಂದರೆ) ದೇವರು ದೊಡ್ಡವನು. ಅವನ ಇಷ್ಟ ವಿದ್ದಂತೆ ನಾವು ನಡೆಯಬೇಕು. ಸಾಹುಕಾರ- ಅಯ್ಯ, ನೀನು ಪಡುವ ಕಷ್ಟವನ್ನು ನೋಡಿ ವ್ಯಸನವಾಗುತಿದೆ. ನನ್ನ ಕೈಲಾದಮಟ್ಟಿಗೆ ಅದನ್ನು ಹೋಗಲಾಡಿಸಿ ಯೇನು, ನಿನಗೆ ಬಿಡುಗಡೆ ಮಾಡಿಸಿಕೊಳ್ಳುವುದಕ್ಕೆ ಯಾವ ಸಾಹಸ ಮಾಡಬಲ್ಲೆ ? ಸುಲೇರ್ಮಾ-ಎಂಥಾ ಕಷ್ಟ ನನ್ನಾ ದರೂ ಸಹಿಸುತೇನೆ. ಪ್ರಾಣ ವನ್ನಾದರೂ ಕೊಡುವುದಕ್ಕೆ ಸಿದ್ದವಾಗಿದೇನೆ. ಸಾಹುಕಾರ-ನೀನು ಅಷ್ಟು ದೂರ ಹೋಗತಕ್ಕೆ ಅಗತ್ಯವಿಲ್ಲ. ನಿನ್ನ ಬಿಡುಗಡೆಗೆ ಒಂದು ಮಾರ್ಗವಿದೆ.