ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಬಟ್ಟೆ ಯು ವಿಶೇಷವಾಗಿ ಸುಟ್ಟು ಹೋಗಿತ್ತು, ಅವನ ಮೈ ಮೇಲೆಲ್ಲಾ ಮಸಿಯಾಗಿತ್ತು. ಗುರುತೇ ಸಿಕ್ಕಲಿಲ್ಲ. ಆತನು ಆ ಸೆಟ್ಟ ಯನ್ನು ಕುರಿತು-ಅಯಾ ನಾನು ಯಾರಾದರೇನು ? ನಿನ್ನ ಮಗನನ್ನು ಕರೆ ದುಕೊ, ಎಂದನು. ಕೂಡಲೆ ಸೆಟ್ಟಿ ಯು-ನೀನುಮಾಡಿದ ಉಪಕಾರಕ್ಕೆ ಈಗ ಈ ಜಾಳಿಗೇ ಹೊನ್ನ ನ್ನು ಹಿಡಿ ; ನಾಳೆ ನನ್ನ ಮಾತಿನ ಪ್ರಕಾರ ನನ್ನ ಅರ್ಧ ಆಸ್ತಿ ಯನ್ನು ಕೊಡುತೇನೆ ಎನಲು, ಆ ಮನುಷ್ಯನುಅಯ್ಯಾ ನಾನು ಏನನ್ನೂ ಒಲ್ಲೆ ಎಂದನು. ಸಾಹುಕಾರನು-ಧ್ವನಿಯನ್ನು ನೋಡಿದರೆ ಯಾರೋ ನಾನು ಗುರುತು ಕಂಡಹಾಗೆ ಇದೆ, ಎಂದು ಹೇಳಿ ದನು. ಸಾಹುಕಾರನ ಮಗನು-ಜಿಯಾ, ನನಗೆ ಈಗ ತಿಳಿಯಿತು. ಅವನು ನಮ್ಮ ಸುಲೇಮಾನ, ಎಂದು ಓಡಿಹೋಗಿ ಅವನನ್ನು ತಬ್ಬಿ ಕೊಂಡನು. ಸಾಹುಕಾರನ ಆನಂದಕ್ಕೆ ಕೊನೆಯೇ ಇಲ್ಲದೆ ಹೋಯಿತು. ಅವನನ್ನೂ ತನ್ನ ಮಗನನ್ನೂ ಕರೆದುಕೊಂಡು ನೆರೆ ಮನೆಗೆ ಹೋಗಿ ಅಲ್ಲಿ ಕೂತು-ನೀನು ಎಲ್ಲಿಂದ ಬಂದೆ, ನಿನಗೆ ನಾನು ಬಿಡುಗಡೆಯನ್ನು ಮಾಡಿಸಿದ್ದೆನಲ್ಲ : ತಿರುಗಿ ನೀನು ಸೆರೆಗೆ ಹೇಗೆ ಬಿದ್ದೆ ? ಎಂದು ಪ್ರಶ್ನೆ ಮಾಡಿದನು, ಆಗ ಸುಲೇಮಾನನು ಆ ಹಣವಂತನನ್ನು ಕುರಿತು-ಎರಡನೇ ಸಾರಿ ಸೆರೆಯು ದೇವರ ದಯದಿಂದ ನನಗೆ ಸಂಭವಿಸಿದಹಾಗಾಯಿತು, ಅದರಿಂದಲೇ ಮತ್ತೆ ನಾನು ಈ ಪಟ್ಟಣಕ್ಕೆ ಬಂದು ಒಬ್ಬ ಹಿಂದೂರಾಜ ಪುತ್ರನ ಮನೆಯಲ್ಲಿ ಗುಲಾಮನಾಗಿದೇನೆ. ಈದೆಸೆ ನನಗೆ ಬಂದದ ರಿಂದಲೇ ನನ್ನ ಕೃತಜ್ಞತೆಯನ್ನು ತೋರಿಸುವ ಸಮಯ ದೊರಕಿತು. ಈಗ ನಿಜವನ್ನು ಹೇಳುತ್ತೇನೆ ಕೇಳು. ಈಗ ನನ್ನ ನ್ನು ಗುಲಾಮ ನಾಗಿಮಾಡಿಕೊಂಡು ಇರತಕ್ಕೆ ದೊರೆಮಗನು ಪೂರ್ವದಲ್ಲಿ ಮುದುಕ ನಾದ ನಮ್ಮ ತಂದೆಯನ್ನು ಗುಲಾಮನನ್ನಾಗಿ ಕೊಂಡುಕೊಂಡು ಅವ ನನ್ನು ಹಿಂಸೆಮಾಡುತಿದ್ದನು. ಅದನ್ನು ನೆನೆಸಿಕೊಂಡೇ ನಾನು ಪೂರ್ವ ದಲ್ಲಿ ಅಳುತಿದ್ದೆ, ಆ ದುಃಖವನ್ನು ಧರ್ಮಾತ್ಮನಾದ ನೀನು ಪರಿಹಾರ ಮಾಡಿದೆ. ನಾನು ನಿನ್ನ ಔದಾರ್ಯದಿಂದ ಸೆರೆಯನ್ನು ತಪ್ಪಿಸಿಕೊಂಡು, ನಮ್ಮ ತಂದೆಯನ್ನು ಇರಿಸಿಕೊಂಡಿದ್ದ ರಾಜಪುತ್ರನ ಬಳಿಗೆ ಹೋಗಿ,