ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಸುಮತಿ ಮದನಕುಮಾರರ ಚರಿತ್ರ [ಅಧ್ಯಾಯ ಗುಂಪಿನಲ್ಲಿ ಸೇರಿದ್ದನು. ಸುಲೇಮಾನನು ಆ ಮುದುಕನಿಗೆ ನಮಸ್ಕಾರ ವನ್ನು ಮಾಡಿ, ಅಯ್ಯಾ ನೀವು ನಮ್ಮ ತಂದೆಗಿಂತಲೂ ಹೆಚ್ಚು ; ನನ್ನ ಪ್ರಾಣವನ್ನು ಎರಡುಸಾರಿ ಉಳಿಸಿದಿರಿ, ಎರಡು ಸಾರಿ ನನಗೆ ಸೆರೆಯಿಂದ ಬಿಡುಗಡೆಮಾಡಿಸಿದಿರಿ, ತಮ್ಮ ಸೀಮೆಯನ್ನು ಬಿಟ್ಟು ನಾನು ಇಲ್ಲಿಗೆ ಬಂದಮೇಲೆ ಈ ದೇಶದಲ್ಲಿ ಒಂದು ಯುದ್ಧ ವಾಗುತಿತ್ತು. ಅದರಲ್ಲಿ ನಾನು ಒಬ್ಬ ಸಿಪಾಯಿಯಾಗಿ ಸೇರಿದೆ, ಕದನದಲ್ಲಿ ಮುಂದಾ ಳಾದೆ. ಅದರಿಂದ ಸೇನಾಧಿಪತ್ಯವನ್ನು ಕೊಟ್ಟರು, ಇನ್ನೊಂದು ಯುದ್ದದಲ್ಲಿ ನಾನು ಪರಾಕ್ರಮವನ್ನು ತೋರಿಸಿ ಶತ್ರುಗಳನ್ನು ಜೈಸಿದೆ. ಆಗ ಈ ದೇಶಸ್ಥರೆಲ್ಲರೂ ನನ್ನ ಮೇಲೆ ಸಂಪೂರ್ಣವಾದ ದಯವಿಟ್ಟು, ಈ ರಾಜ್ಯದ ದೊರೆತನವನ್ನು ನನಗೆ ಕೊಟ್ಟರು, ಆಗಿನಿಂದಲೂ ನಾನು ಇಲ್ಲಿ ದೊರೆಯಾಗಿದೇನೆ, ಎಂದನು. ಹೀಗೆ ಆಡಿದ ಸುಲೇಮಾನನ ಮಾತಿನಿಂದ ಅಲ್ಲಿದ್ದ ಜನರೆಲ್ಲ ರಿಗೂ ಆಶ್ಚರವಾಯಿತು. ಎಲ್ಲೆಲ್ಲಿದ್ದವರು ಅಲ್ಲಲ್ಲಿಯೇ ಬೆರಗಾಗಿ ನಿಂತುಕೊಂಡರು. ತರುವಾಯ ಸುಲೇಮಾನನು ಆ ತಂದೆಮಕ್ಕಳಿಬ್ಬ ರನ್ನೂ ಹಣಕೊಟ್ಟು ಬಿಡಿಸಿಕೊಂಡು ಹೋಗಿ ತನ್ನ ಅರಮನೆಯಲ್ಲಿ ಅವರಿಗೆ ವಿಶೇಷವಾಗಿ ಉಪಚಾರವನ್ನು ಮಾಡಿ, ಸಾಹುಕಾರನನ್ನು ಕುರಿತು-ಸ್ವಾಮಿ, ತಾವು ಮಾಡಿದ ಉಪಕಾರವನ್ನು ಎಂದೆಂದಿಗೂ ಮರೆಯಲಾರೆ. ಈ ದೇಹವೆಲ್ಲಾ ತಮ್ಮದೇ, ತಾವು ಮಾಡಿದ ಕುಂಬಳಕಾಯಿನಷ್ಟು ಉಪಕಾರಕ್ಕೆ ಒಂದು ಸಾಸಿವೆಯಷ್ಟು ಪ್ರತ್ಯುಪ ಕಾರವನ್ನು ಮಾಡಲು ನನಗೆ ದೊರೆತ ಸಮಯ ದೇವರ ದಯದಿಂದಲೇ ದೊರೆಯಿತೇ ಹೊರತು ಮನುಷ್ಯ ಪ್ರಯತ್ನದಿಂದಲ್ಲ, ನಾನು ಈ ದೇಶಕ್ಕೆ ಅರಸಾದಾಗಿನಿಂದಲೂ ಗುಲಾಮರಾಗಿ ಮಾಡಲ್ಪಟ್ಟ ಯಾವ ಹಿಂದು ವನ್ನು ಕಂಡರೂ, ಅವರಿಗೋಸ್ಕರ ಹಣವನ್ನು ಕೊಟ್ಟು ಅವರ ಬಂಧ ವನ್ನು ತಪ್ಪಿಸಿ, ಹಿಂದೂಸ್ಥಾನಕ್ಕೆ ಕಳುಹಿಸುತ್ತಾ ಇದೇನೆ ಎಂದು ಹೇಳಿ ದನು, ಮತ್ತು ತಂದೆಮಕ್ಕಳಾದ ಸಾಹುಕಾರರಿಗೂ ಬೇಕಾದಷ್ಟು ಐಶ್ವಠ್ಯವನ್ನು ಕೊಟ್ಟು ಬಹುಮಾನವನ್ನು ಮಾಡಿ ಅವರ ಸಂಗಡ ಸೆರೆ ಯಲ್ಲಿದ್ದವರೆಲ್ಲರನ್ನೂ ಬಿಡುಗಡೆ ಮಾಡಿಸಿ, ಎಲ್ಲರನ್ನೂ ಒಟ್ಟಿಗೆ ಹಿಂದೂ ಸ್ಥಾನಕ್ಕೆ ಪ್ರಯಾಣಮಾಡಿ ಕಳುಹಿಸಿಕೊಟ್ಟನು.