ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಸುಮತಿ ಮದನಕುಮಾರರ ಚರಿತ್ರೆ ೧೩೩ ಶತ್ರುವನ್ನು ಸಹಿತ ದಯೆಯಿಂದ ನೋಡುತ್ತಾರೆಯೇ ಹೊರತು ನಾಶ ಮಾಡುವುದಿಲ್ಲ ಎಂದು ಜೋಯಿಸ ಉತ್ತರ ಕೊಟ್ಟ ನು. ಹೀಗೆ ಇಬ್ಬರೂ ಮಾತನಾಡುತಿರುವಾಗ ಜನಗಳು ಗಾಬರಿ ಯಿಂದ ದಿಕ್ಕು ದಿಕ್ಕಿಗೆ ಓಡಿ ಹೋಗುತಿದ್ದರು, ಇದಕ್ಕೆ ಕಾರಣವೇ ನೆಂದು ನೋಡುವಲ್ಲಿ ಒಂದು ಕರಡಿ ಸರಪಣಿಯನ್ನು ಕಿತ್ತುಕೊಂಡು ಓಡಿ ಬರುತಿತ್ತು, ಅದನ್ನು ನೋಡಿ, ರಾಮ ಜೋಯಿಸನು ಓಡಿ ಹೋಗಿ, ತನ್ನ ಕೈ ಕಟ್ಟಿಗೆಯಿಂದ ಅದನ್ನು ಹೆದರಿಸಿ ಮಧ್ಯ ದಾರಿಯಲ್ಲಿ ನಿಲ್ಲಿಸಿದನು, ಕರಡಿಯು ಕೋಪದಿಂದ ಇವನ ಮೇಲೆ ಬೀಳುವುದಕ್ಕೆ ಬಂತು. ಜೋಯಿಸನು ಗಟ್ಟಿಯಾಗಿ ಕೂಗಿ ಗದರಿಸುತಾ ದೊಣ್ಣೆ ಯಿಂದ ಅದಕ್ಕೆ ಮೂರು ನಾಲ್ಕು ಬಲವಾದ ಏಟನ್ನು ಕೊಟ್ಟು, ಅದು ಎಳಕೊಂಡು ಬರುತಿದ್ದ ಸರಪಣಿಯ ಕೊನೆಯನ್ನು ಹಿಡಿದುಕೊಂಡನು. ಅಷ್ಟರಲ್ಲಿ ಕರಡಿಸಾಕುವವನು ಓಡಿಬಂದನು. ಅವನ ಕೈಗೆ ಜೋಯಿ ಸನು ಸರಪಣಿಯನ್ನು ಕೊಟ್ಟು ಮುಂದಕ್ಕೆ ಹೀಗೆ ಬಿಟ್ಟು ಬಿಡದೆ ಜಾಗ್ರತೆಯಾಗಿರೆಂದು ಹೇಳಿದನು. ಆಗ ಈ ಕರಡಿಯ ಸಂಗಡ ತನ್ನ ಹಗ್ಗವನ್ನು ಕಿತ್ತು ಕೊಂಡು ಒಂದು ಕೋತಿಯು ಓಡಿಬರುತಿತ್ತು, ಮದನನು ಧೈರ್ಯದಿಂದ ಓಡಿ ಹೋಗಿ ಅದನ್ನು ನಿಲ್ಲಿಸಿದನು. ಅದು ಇವನನ್ನು ಕಚ್ಚುವುದಕ್ಕೆ ಬಂತು. ಇವನು ದೊಣ್ಣೆಯಿಂದ ಅದಕ್ಕೆ ಎರಡು ಏಟನ್ನು ಹೊಡೆದು ಹಗ್ಗವನ್ನು ಹಿಡಿದುಕೊಂಡನು, ಕಸಿಯು ಇವನಿಗೆ ಹೆದರಿಕೊಂಡು ನಿಂತುಕೊಂಡಿತು, ಅದನ್ನು ಅದರ ಪಾಲಕನು ಕರೆದುಕೊಂಡು ಹೊರಟು ಹೋದನು. ಆಗ | ಮದನ- ಜೋಯಿಸರೆ, ಈ ಜಂತುಗಳು ಕಿತ್ತುಕೊಂಡು ಹೋಗು ತಿರುವಾಗ ನಾವು ನಿಲ್ಲಿಸುವುದು ಅಪಾಯಕರವಲ್ಲವೆ ? ಜೋಯಿಸ-ಅಪಾಯವೇನೋ ಉಂಟು. ಆದರೆ ಅದರಿಂದ ಎಷ್ಟು ಅಪಾಯ ಉಂಟಾಗುವುದೆಂದು ಜನರು ತಿಳಿದಿದಾರೊ, ಅಷ್ಟಿಲ್ಲ. ನಾವು ಧೈರ್ಯಮಾಡಿ ಮುಂದಕ್ಕೆ ಹೋದರೆ, ಅವುಗಳು ಹೆದರಿ ಕೊಳ್ಳುವವು.