ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಸುಮತಿ ಮದನಕುಮಾರರ ಚರಿತ್ರೆ ೧೪೧+ ಯೂ ಸೇರಿ ಮಾಡಿದ್ದ ಪೈರನ್ನು ಈ ಕೆಟ್ಟ ಮೊಲಗಳು ತಿಂದು ಕೆಡಿಸು ತಿವೆ. ಇವುಗಳಿಗೆ ತಕ್ಕದ್ದನ್ನು ಮಾಡಬೇಕು, ಎಂದು ಬಹು ಕೋಪ ದಿಂದ ನುಡಿದನು. ಆ ಮಾತಿಗೆ ಜೋಯಿಸನು-ಪೈರೆಲ್ಲಾ ಹಾಳಾ ದ್ದಕ್ಕೆ ಪೇಚಾಡತಕ್ಕದ್ದೇಸರಿ ; ಆದರೆ ಅದನ್ನು ಹೇಗೆ ಸರಿಮಾಡುವುದು, ಎಂದು ಕೇಳಿದನು. ಹೇಗೆ ಎಂದರೆ, ಈ ಮೊಲಗಳನ್ನೆ ಲ್ಲಾ ತುಪಾಕಿ ಯಿಂದ ಸುಟ್ಟು ಬಿಡಬೇಕು, ಎಂದು ಮದನ ಉತ್ತರ ಹೇಳಿದನು. ಇದಕ್ಕೆ ಜೋಯಿಸನು--ಸ್ವಲ್ಪ ದಿವಸಕ್ಕೆ ಮುಂಚೆ ಬೆಕ್ಕನ್ನು ಕೊಂದ ಹಾಕಬೇಕು, ಯಾಕೆಂದರೆ ಗುಬ್ಬಿ ಯನ್ನು ತಿಂದಿತು ಎಂದು ಹೇಳಿದೆ. ಈಗ ನಿರಪರಾಧಿಗಳಾದ ಮೊಲಗಳನ್ನು ಕೊಂದುಹಾಕಬೇಕು, ಯಾಕೆಂ ದರೆ ಅವು ಸಸ್ಯಗಳನ್ನು ತಿಂದುಬಿಟ್ಟವು ಎಂದು ಹೇಳುತೀಯ ಎಂಬದಾಗಿ ನುಡಿದನು. ಈ ಮಾತನ್ನು ಕೇಳಿ ಮದನನು ಉತ್ತರ ಹೇಳುವುದಕ್ಕೆ ತಿಳಿಯದೆ ಪೆಚ್ಚು ಮುಖವನ್ನು ಹಾಕಿಕೊಂಡು, ಕೊನೆಗೆ ಗುರುವಿನ ಸಂಗಡ-ಸಸ್ಯಗಳನ್ನು ತಿಂದುದಕ್ಕೋಸ್ಕರ ಅವುಗಳನ್ನು ಕೊಲ್ಲಬೇ ಕೆಂದು ಅಲ್ಲ, ನಾನು ಹಾಕಿದ ಪೈರನ್ನು ಅವು ತಿಂದು ಬಿಟ್ಟ ವು, ಆದ್ದ ರಿಂದ ಕೊಲ್ಲಬೇಕು, ಎಂದನು. ಆ ಮೂಗಪ್ರಾಣಿಗಳು ನಿನ್ನ ಪೈರು ಮತ್ತೊಬ್ಬನ ಪೈರು ಎಂದು ಬಲ್ಲವೆ ? ನಿನ್ನ ಜಾಗ್ರತೆಯಲ್ಲಿ ನೀನು ಇರ. ಬೇಕಾಗಿತ್ತು ; ಹೊಲಕ್ಕೂ ತೋಟಕ್ಕೂ ಸರಿಯಾದ ಬೇಲಿಯನ್ನು ಹಾಕಬೇಕಾಗಿತ್ತು, ಆಗ ಮೊಲಗಳು ಬಂದು ಪೈರನ್ನು ಹಾಳುಮಾಡು ತಿರಲಿಲ್ಲ. ಇದೂ ಅಲ್ಲದೆ, ಬೇಸಗೆ ಮೊದಲಾಯಿತು. ಪ್ರಾಣಿಗಳಿಗೆ. ಮೇವು ಸಿಕ್ಕುವುದು ಕಡಮೆ. ಆದ್ದರಿಂದ ಅದು ಸಿಕ್ಕು ವ ಕಡೆಗೆ ಬಂದು ತಿನ್ನುವುವು, ಅದಕ್ಕೋಸ್ಕರ ಅವುಗಳನ್ನು ಕೊಂದುಹಾಕುವುದ ಕ್ಕಿಂತಲೂ ಕ್ಷಮಿಸಿ ಬಿಟ್ಟು ಬಿಡುವುದು ಲೇಸು, ಎಂದು ಜೋಯಿಸ ಹೇಳಿದನು. ಈ ಪ್ರಕಾರ ಮಾತನಾಡುತಾ ಜೋಯಿಸನು ಮದನನನ್ನು ಕರೆದು ಕೊಂಡು ಮುಂದಕ್ಕೆ ಹೋದನು. ದಾರಿಯಲ್ಲಿ ಜೋಯಿಸನ ಹೊಲ ಸಿಕ್ಕಿತು, ಅಲ್ಲಿ ಬೆಳೆದು ನಿಂತಿದ್ದ ಪೈರನ್ನು ಮಾಘದ ಹಕ್ಕಿಗಳು ಗುಂಪು ಗುಂಪಾಗಿ ಬಂದು ತಿಂದು ನಾಶಮಾಡುತಿದ್ದವು. ಇವರು .