ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಸುಮತಿ ಮದನಕುಮಾರರ ಚರಿತ್ರೆ ೧೪೫ ಒಂದುಮಾರು ದೂರ ಇರುವ ಮಂಚದಮೇಲೆ ಹಾ ಎಂದು ಬಿದ್ದು ಕೊಳ್ಳು ತಿದ್ದನು. ಅತ್ತ ಅಡಿಗೆಯವರು ಇವನ ಊಟವಾದ ಕೂಡಲೆ ಮಧ್ಯಾನ್ಹದ ಫಲಾಹಾರಕ್ಕೆ ಮಾಡಲು ತೊಡಗುತ್ತಿದ್ದರು. ಮೂರನೇ ಜಾವಕ್ಕೆ ಬೇಕುಬೇಕಾದ ರವೇ ಭಕ್ಷ್ಯಗಳನ್ನು ಮಾಡಿ ಯಜಮಾನನಿಗೆ ತಂದು ಇರಿಸುತಿದ್ದರು. ಇವನು ಅದೆಲ್ಲವನ್ನೂ ಕವಳಿಸಿ ಪುನಃ ಮಲಗಿ ಕೊಂಡು ತಾಂಬೂಲವನ್ನು ಅಗಿಯುತಾ ರಾತ್ರಿ ಊಟದ ಪರಿಕರವನ್ನು ಅಡಿಗೆಯವರಿಗೆ ಹೇಳುತಿದ್ದನು. ಈ ಮಧ್ಯೆ ಏನಾದರೂ ತಿರುತಿ೦ಡಿ ಯನ್ನು ತಿನ್ನು ತಲೇ ಇರುವುದೊ, ತಾಂಬೂಲವನ್ನು ಅಗಿಯುತಲೇ ಇರುವುದೊ, ಅಂತೂ ಯಾವದಾದರೂ ಒಂದು ನೆಪದಿಂದ ಬಾಯಾಡು ತಲೇ ಇದ್ದನು. ಸಾಯಂಕಾಲವಾದ ಕೂಡಲೆ, ಎಡೆ ಸಿದ್ದವಾಗುತಿತ್ತು. ಅದನ್ನು ಮೆಲ್ಲುತಿದ್ದನು, ರಾತ್ರಿ ಒಂಭತ್ತು ಹತ್ತು ಗಳಿಗೆಯ ಸಮಯ ದಲ್ಲಿ ನಿದ್ರೆ ಬರುವುದಕ್ಕೆ ಮುಂಚೆ ತೆಂಗಿನಕಾಯಿ ಗಾತ್ರ ಹಾಲು ಕೋವೆ ಯನ್ನು ಮಾಡಿ ಇರಿಸುತಿದ್ದರು. ಇದನ್ನು ಮೆಟ್ಟ ತರುವಾಯ ಅಬ್ಬರಿಸಿ ಕೊಂಡು ಬಿದ್ದು ಕೊಳ್ಳುತಿದ್ದನು. ಒಂದೆರಡು ಹೆಜ್ಜೆ ಅತ್ತ ಇತ್ತ ಇಡ ಬೇಕಾಗಿದ್ದಾಗ್ಯೂ, ಎಲಾ ಯಾರಿದ್ದೀರೊ ? ಎಂದು ಆಳುಗಳನ್ನು ಕೂಗು ತಿದ್ದನು, ನಾಲ್ಕು ಜನ ಎರಡು ಕಡೆಯಲ್ಲಿಯೂ ಹಿಡಿದುಕೊಂಡು ಎಬ್ಬಿಸಿ ಕರೆದುಕೊಂಡು ಹೋಗುತಿದ್ದರು. ಜಲಮಲಾದಿಗಳೆಲ್ಲಾ ಕೂತ ಕಡೆಯಲ್ಲಿಯೇ ಆಗುತಿತ್ತು. ಇಂಥಾ ಉಪಚಾರವನ್ನು ಹೊಂದುತಿದ್ದ ಈ ತಿಂಡಿಪೋತನ ಸ್ಥಿತಿಯನ್ನು ಏನು ಹೇಳೋಣ ! ಹೊಟ್ಟೆ ಒಂದು ಬೆಟ್ಟದ ಹಾಗಿತ್ತು, ಕೈಕಾಲೆಲ್ಲಾ ದೊಡ್ಡ ದೊಡ್ಡ ತೊಲೆಯ ಹಾಗಿತ್ತು. ಕೆನ್ನೆ ಯೆಲ್ಲಾ ದಪ್ಪದಪ್ಪವಾಗಿ ಊದಿಕೊಂಡಿತ್ತು, ಯಾವಾಗಲೂ ಮೇಲು ಸಿರನ್ನೇ ಹುಯ್ಯುತಿದ್ದನು. ರಾತ್ರೆ ಸ್ವಲ್ಪವೂ ನಿದ್ದೆ ಬರುತ್ತಿರಲಿಲ್ಲ. ಪ್ರಾತಃಕಾಲದಲ್ಲಿ ಎದ್ದರೆ ಹೊಟ್ಟೆ ಯಲ್ಲಿ ಏನೋ ಸಂಕಟವಾಗುತಿತ್ತು. ಆದರೂ ತಿಂಡಿಯನ್ನು ಮಾತ್ರ ಇವನು ಕಡಮೆ ಮಾಡುತಿರಲಿಲ್ಲ. ಯಾವ ಹೊಸ ತಿಂಡಿಯನ್ನು ಮಾಡಿಸಿ ತಿನ್ನೋಣವೆಂಬುವುದೇ ಇವನ ಮುಖ್ಯವಾದ ಜಪವಾಗಿತ್ತು, ಇಂಥವನಿಗೆ ರೋಗ ಬರುವುದೇನಾಶ್ಚರ್ಯ ವಲ್ಲ, ತಿಂದ ತಿಂಡಿ ಸ್ವಲ್ಪವೂ ಜೀರ್ಣವಾಗುತಿರಲಿಲ್ಲ, ಅಜೀರ್ಣ 10