ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನ ಕುಮಾರರ ಚರಿತ್ರೆ ಅಲ್ಲೇ ಇಟ್ಟು ಅವನ ಉಪಚಾರಕ್ಕೆ ಬೇಕಾದಷ್ಟು ಜನ ಚಾರರನ್ನು ನೇಮಿಸಿ ಹೊರಟುಹೋದನು. ಈ ರಾಜಕುಮಾರನ ತಾಯಿಯು ಮಗುವಿನ ಸವಿಾಪದಲ್ಲಿಯೇ ಇರುತಿದ್ದಳು. ತಂದೆಯೂ ಆಗಾಗ್ಗೆ ಬಂದು ನೋಡಿಕೊಂಡು ಹೋಗುತಿದ್ದನು. ಮದನ ಕುಮಾರನು ಬನವಾಸಿಯನ್ನು ಬಿಟ್ಟು ಬಿದರೆಗೆ ಬರು ವಾಗ್ಗೆ ಅವನಿಗೆ ೬ ವರುಷ, ಈ ಬಾಲಕನು ಸ್ವಭಾವವಾಗಿ ಒಳ್ಳೆ ಮಾರ್ಗವನ್ನು ಅನುಸರಿಸತಕ್ಕವನಾಗಿದ್ದನು, ಆದರೆ ಅವನ ಅದೃಷ್ಟಕ್ಕೆ, ಮೊದಲಿನಿಂದಲೂ ಅತಿಯಾಗಿ ಮುದ್ದು ಮಾಡಿ ಮಾಡಿ ಹುಡುಗನ ಅಭ್ಯಾಸವನ್ನು ಕೆಡಿಸಿದ್ದರು. ಬನವಾಸಿಯಲ್ಲಿ ಈತ ಇದ್ದಾಗ್ಗೆ ಅನೇಕ ಆಳುಗಳು ಇವನ ಅಂಗರಕ್ಷಕರಾಗಿ ಕೈ ಕಟ್ಟಿ ಕೊಂಡು ಇರುತಿದ್ದರು. ಈ ಆಳುಗಳೆಲ್ಲಾ ಬಾಯಿಮುಚ್ಚಿಕೊಂಡು ಸುಮ್ಮನಿರಬೇಕಾಗಿತ್ತೇ ಹೊರತು, ಏನೇ ಆಗಲಿ, ಯಾರೂ ಈ ಹುಡುಗನಿಗೆ ಎದುರುಮಾತನಾಡ ಕೂಡದಾಗಿತ್ತು, ಇವನು ಓಡಿಯಾಡುವಾಗಕೂಡ ಇವನ ಸಂಗಡ ಯಾವಾಗಲೂ ಇಬ್ಬರು ಓಲೆಕಾರರು ಸೊಂಟಕಟ್ಟಿ ಕೊಂಡು ಓಡಿ ಯಾಡುತಲೇ ಇದ್ದರು, ಅವರಲ್ಲಿ ಒಬ್ಬನು ಬಿಸಿಲಿಗೆ ಮರೆಯಾಗಿ ರಾಜ ಪುತ್ರನಿಗೆ ದೊಡ್ಡ ಛತ್ರಿಯನ್ನು ಬಿಚ್ಚಿ ಹಿಡಿದುಕೊಂಡಿರುತಲೇ ಇದ್ದನು; ಹುಡುಗನು ಓಡಿಯಾಡಿ ಆಯಾಸ ಪಟ್ಟಾಗ ಅವನನ್ನು ಕಂಕುಳಿಗೆ ಎತ್ತಿಕೊಳ್ಳುವುದಕ್ಕೆ ಮತ್ತೊಬ್ಬ ಆಳು ಸಿದ್ಧನಾಗಿದ್ದನು; ಈ ಅರಸು ಮಗನಿಗೆ ರತ್ನಖಚಿತವಾದ ನಿಲುದೊಡಿಗೆಯನ್ನು ಇಟ್ಟು ದಿವ್ಯವಾದ ಕಿ೦ಕಾಬಿನ ಉಡುಪನ್ನು ಹಾಕುತಿದ್ದರು. ಈತನಿಗೆ ಸುನೇರೀ ಕೆಲಸ ಮಾಡಿದ ಒಂದು ಪಲ್ಲಕ್ಕಿ ಇತ್ತು, ಬೇಕಾದ ಶೃ೦ಗಾರವನ್ನು ಮಾಡಿ ಕೊಂಡು ಈ ಪಲ್ಲಕ್ಕಿಯಲ್ಲಿ ಕೂತು, ಸುಂದರನಾದ ಈ ಹುಡುಗನು ತನ್ನ ಸಂಗಡ ಆಡುವ ಓರಗೇ ಹುಡುಗರ ಮನೆಗೆ ಹೋಗುತಿದ್ದನು. ತಾಯಿಗೆ ಇವನಲ್ಲಿ ವಿಪರೀತವಾಗಿ ಪ್ರೀತಿಯಿತ್ತು, ಯಾವ ಪದಾರ್ಥ ಬೇಕೆಂದು ಮಗ ಅತ್ತಾಗ್ಗೂ ಕೂಡಲೆ ಅವನಿಗೆ ಅದನ್ನು ತರಿಸಿಕೊಡು ತಿದ್ದಳು, “ ಅಮ್ಮೆಯ, ನಾನು ಓದಿದರೆ ನನಗೆ ತಲೆನೋವು ಬರುತ್ತೆ,” ಎಂದು ಆ ಪುತ್ರರತ್ನವು ಆಗಾಗ್ಗೆ ಹೇಳುತಿದ್ದ ಕಾರಣ, ತಾಯಿಯಾದ