ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಸುಮತಿ ಮದನಕುಮಾರರ ಚರಿತ್ರೆ ೧೭ ವೈದ್ಯ- ನೀವು ಹೊರಗೆ ಸಂಚಾರಮಾಡುವುದು ಉತ್ತಮ. ಲಂಬೋದರ-ಎಂಟಕ್ಕೆ ಹತ್ತಕ್ಕೆ ಎತ್ತಿನ ಗಾಡಿಯಲ್ಲಿ ಕೂತು ಒಂದು ಕೊಂಬಿನ ಕೂಗು ಹಾಗೆಯೇ ಹೋಗಿಬರುತಿದ್ದೆ. ಗಾಡಿಯ ಕುಲು ಕಾಟದಿಂದ ಮೈ ಸೇನೆ ಅಲುಗಿ ಸಂಕಟವಾಯಿತು, ಆದ್ದರಿಂದ ಈಚೆಗೆ ಒಂದು ಪಲ್ಲಕ್ಕಿಯಲ್ಲಿ ಕೂತು ಹೊರಡುತಿದ್ದೆ, ಒಂದೊಂದು ಕಡೆಗೆ ಎಂಟೆಂಟು ಜನ ಬೆಸ್ತರನ್ನು ಹಾಕಿದರೂ ಹೊರಲಾರೆವೆಂದು ಅವರು ಓಡಿಹೋಗುತಿದ್ದರು, ಅದರಲ್ಲಿಯೂ ಕುಲುಕಾಟ ಹೆಚ್ಚಾಯಿತು. ಆದಕಾರಣ ಅದನ್ನೂ ಈಚೆಗೆ ಬಿಟ್ಟು ಬಿಟ್ಟೆ. ವೈದ್ಯ-ನೀವು ತಿನ್ನುವ ಆಹಾರವನ್ನು ಸ್ವಲ್ಪ ಕಡಮೆಮಾಡಿ, ನಿಮ್ಮ ಮನೆಯಲ್ಲಿಯೇ ದಿನಕ್ಕೆ ಐದುಸಾರಿ ಶತ ಪಥವನ್ನು ಸುತ್ತೀರಾ? ಲಂಬೋದರ- ಪಂಡಿತರೆ, ಹೀಗೆಲ್ಲಾ ಗುಣವಾಗುವುದಿಲ್ಲ. ನನ್ನ ದೇಹ ಪ್ರಕೃತಿಯನ್ನು ಇನ್ನೂ ತಾವು ಚೆನ್ನಾಗಿ ಪರೀಕ್ಷಿಸಬೇಕು. ನಾಡಿಯನ್ನು ಚೆನ್ನಾಗಿ ನೋಡಿ ಹೇಳಿ, ಇದು ತಮ್ಮ ಹಸ್ತಗುಣದಿಂದ ವಾಸಿಯಾಗಬೇಕು. - ವೈದ್ಯ-ಅಳಲೇಕಾಯಿ ಕಷಾಯವನ್ನೂ, ಜಾಪಾಳದ ಮಾತ್ರೆ ಯನ್ನೂ, ರಸಗಂಧಕ ಪಾಷಾಣಗಳನ್ನೂ, ನಿಮಗೆ ಕೊಟ್ಟರೆ, ನಿಮ್ಮ ರೋಗ ಹೋಗುವುದೆಂದು ನೀವು ತಿಳಿದು ಇದ್ದೀರಿ. ಆದರೆ, ನಿಮ್ಮದು ಔಷಧಕ್ಕೆ ಗುಣವಾಗತಕ್ಕ ಜಾಡ್ಯವಲ್ಲ. ಲಂಬೋದರ- ನೀವು ಏನು ಕಠಿಣವಾಗಿ ಮಾತನಾಡು ತೀರಿ ! ಸ್ವಲ್ಪ ವೂ ದಯಾರಸವಿಲ್ಲ. ವೈದ್ಯ- ನನಗೆ ತಿಳಿದುದನ್ನೆಲ್ಲಾ ನಾನು ಆಗಲೇ ನಿಮಗೆ ಹೇಳಿ `ಬಿಟ್ಟೆ, ನಿಮಗೆ ಚಿಕಿತ್ಸೆಯನ್ನು ಮಾಡುವುದಕ್ಕೆ ದೇವ ಪುರದಲ್ಲಿ ಒಬ್ಬ ತಕ್ಕ ಪಂಡಿತರು ಇದಾರೆ, ನಾನು ಅವರಿಗೆ ಕಾಗದವನ್ನು ಬರೆದು ಕೊಡುತೇನೆ. ಅವರು ಅನೇಕರಿಗೆ ವಾಸಿಮಾಡಿದಾರೆ, ನಿಮಗೆ ಅವ ರಿಂದ ಅನು ಕೂಲವಾಗಬಹುದು. - ಹೀಗೆ ಹೇಳಿದ ವೈದ್ಯನ ಮಾತನ್ನ ಕೇಳಿ, ಲಂಬೋದರನು ಬಹಳ ಅಥೈಲ್ಯ ಪಟ್ಟನು, ಆದಿನ ಸಾಯಂಕಾಲ ತನ್ನ ರೋಗ ಇನ್ನೂ ಹೆಚ್ಚ