ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧MS ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ತೆಂದು ತಿಳಿದು, ದೇವಪುರಕ್ಕೆ ಹೋಗಿ ಅಲ್ಲಿನ ಪಂಡಿತನನ್ನು ಕಾಣ ಬೇಕೆಂದು ನಿಶ್ಚಯಿಸಿಕೊಂಡನು. ಇದಕ್ಕಾಗಿ ಒಂದು ಪಲ್ಲಕ್ಕಿಯನ್ನು ಏರ್ಪಡಿಸಿಕೊಂಡು ಅದರಲ್ಲಿ ಕೂತಹಾಗೆಯೇ ಆಹಾರಾದಿಗಳನ್ನು ತೆಗೆದು ಕೊಳ್ಳುವುದಕ್ಕೆ ಅನುಕೂಲಮಾಡಿಕೊಂಡಿದ್ದನು. ದೇವಪುರವು ಅಲ್ಲಿಗೆ ಒಂದು ದಿವಸದ ಪಯಣ, ಆದರೆ ಲಂಬೋದರನು ಅದನ್ನು ನಾಲ್ಕು ದಿವಸದ ಪಯಣವಾಗಿಮಾಡಿಕೊಂಡು ಆ ವೂರಿಗೆ ತಲಪಿ, ಅಲ್ಲಿ ವೈದ್ಯನ ಮನೆಯನ್ನು ವಿಚಾರಿಸಿಕೊಂಡು ಹೋಗಿ ಸೇರಿದನು, ಪಲ್ಲಕ್ಕಿಯಿಂದ ಇವನನ್ನು ಏಳೆಂಟು ಜನ ಹಿಡಿದು, ಈಚೆಗೆ ಇಳಿಸಿಕೊಂಡು ಒಳಕ್ಕೆ ಕರೆದುಕೊಂಡು ಹೋದರು. ಆ ಮನೆಯೊಳಗೆ ಶಿರೋಮಣಿ ಎ೦ಬ ಪಂಡಿತನು-ಒಬ್ಬ ರೋಗಿಗೆ ಈ ರೊಟ್ಟಿ ಯನ್ನು ತಿನ್ನು ಎನ್ನು ವುದು, ಮತ್ತೊಬ್ಬ ರೋಗಿಗೆ ಈ ತುಪ್ಪ ವನ್ನು ಅನ್ನಕ್ಕೆ ಹಾಕಿಕೊ ಎನ್ನು ವುದು, ಈ ರೀತಿಯಲ್ಲಿ ರೋಗಿಗಳಿಗೆ ಉಪಚಾರವನ್ನು ಮಾಡುತಿದ್ದನು, ಲಂಬೋದರನಿಗೆ ಆ ಪಂಡಿತ ನನ್ನು ನೋಡಿ ಬಹು ಸಂತೋಷವಾಯಿತು ; ಇವನು ತನ್ನ ಮನಸ್ಸಿ ನಲ್ಲಿ-ಶಹಬಾಸು, ಪಂಡಿತ ಎಂದರೆ ಈತನೇ ಸರಿ, ಬೇಕಾದ ತಿಂಡಿ ಯನ್ನು ತಿನ್ನಿ ಎಂದು ತಾನೇ ರೋಗಿಗಳಿಗೆ ಕೊಡುತಾನೆ, ನಮ್ಮ ಊರಿನ ವೈದ್ಯನಹಾಗೆ ಇದು ತಿನ್ನ ಬೇಡ ಅದು ಕುಡಿಯಬೇಡ ಎಂದು ಹೇಳುವುದಿಲ್ಲ. ಔಷಧದಲ್ಲಿ ತ್ರಾಣವಿದ್ದರೆ, ಪಥ್ಯವು ಯಾತಕ್ಕೆ ? ಈತ ನನಗೆ ಸಿಕ್ಕಿದ್ದು ನನ್ನ ಪುಣೋದಯ, ಎಂದುಕೊಂಡನು. ತರುವಾಯ ಶಿರೋಮಣಿ ಪಂಡಿತನನ್ನು ಕಂಡು, ತಮ್ಮ ಊರ ಪಂಡಿತನ ಕಾಗದ ವನ್ನು ಕೊಟ್ಟು ತನ್ನ ರೋಗವನ್ನೆಲ್ಲಾ ಹೇಳಿದನು. ಅದಕ್ಕೆ ಆ ಪಂಡಿತನು-ಸ್ವಾಮಿ, ನಿಮ್ಮ ಜಾಡ್ಯ ನನಗೆ ಗೊತ್ತಾಯಿತು. ಇದನ್ನು ವಾಸಿಮಾಡುವ ಭಾರ ನನ್ನ ದಾಗಿರಲಿ, ಆದರೆ ನಾನು ಹೇಳಿದಂತೆ ಒಂದು ತಿಂಗಳಮಟ್ಟಿಗೆ ನೀವು ಕೇಳಬೇಕು, ನಿಮ್ಮ ಆಳುಗಳನ್ನೆಲ್ಲಾ ಒಬ್ಬರೂ ಇಲ್ಲದಹಾಗೆ ಊರಿಗೆ ಕಳುಹಿಸಿಬಿಡಬೇಕು. ನನ್ನ ಮಾತಿನ ಪ್ರಕಾರ ನಡೆಯದೆಹೋದರೆ, ಯಾವ ದೊರೆಯೇ ಆಗಲಿ, ನಾನು ಔಷಧ ವನ್ನು ಕೊಡಲಾರೆ ಎಂದನು. ಇದಕ್ಕೆ ಲಂಬೋದರನು ತಾವು