ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨) ಸುಮತಿ ಮದನಕುಮಾರರ ಚರಿತ್ರ ೧೫೫. ರಿಗೆ ತಕ್ಕ ಹಾಗೆ ತಿಂಡಿಯನ್ನು ಹಾಕಿ ಗುಣಮಾಡುತಾನೆ, ಐಶ್ವರ. ವಂತರಾದ ನಿಮಗೆ ಉಪಚಾರ ಹೆಚ್ಚಾಯಿತು ; ಆದುದರಿಂದ ರೋಗ ಬಂತು. ನಿಮಗೆ ತಿಂಡಿಯನ್ನು ಹಾಕದೆ ಗುಣಮಾಡಿದಾನೆ, ಇನ್ನು ಯಾರಿಂದಲೂ ನಿಮ್ಮ ಜಾಡ್ಯ ವಾಸಿಯಾಗುತ್ತಿರಲಿಲ್ಲ. ಇದನ್ನು ಖಂಡಿತವಾಗಿ ತಿಳಿಯಿರಿ, ಎಂದು ಸಮಾಧಾನ ಪಡಿಸಿದನು. ಆಗ ಲಂಬೋದರನು ತನ್ನ ಮನಸ್ಸಿನಲ್ಲಿ ವೈದ್ಯನ ಮಾತೆಲ್ಲ ನಿಶ್ಚಯವೆಂದು ಯೋಚಿಸಿಕೊಂಡು ಮಾನಸಪುರದ ಪಂಡಿತನಿಗೂ ಶಿರೋಮಣಿ ಪಂಡಿತ ನಿಗೂ ಬಹುಮಾನವನ್ನು ಕೊಟ್ಟು ಕಳುಹಿಸಿ, ಅವನು ಹೇಳಿದಂತೆ ಆಹಾರವ್ಯವಹಾರಗಳಲ್ಲಿ ಮಿತವರಿತು ನಡೆದುಕೊಳ್ಳು ತಿದ್ದನು. ಆದ್ದ ರಿಂದ ಯಾವ ಜಾಡ್ಯವೂ ಇಲ್ಲದೆ ಬಹು ದಿವಸ ಬದುಕಿದ್ದನು. ಈ ಪ್ರಕಾರದಲ್ಲಿ ಕಥೆ ಮುಗಿಯಿತು. ಆಗ ಮದನನು- ಈ ಕಥೆ ಬಹು ವಿನೋದಕರವಾಗಿದೆ. ಇಂಥಾ ಜಾಡ್ಯದಿಂದ ನರಳುತಿರುವ ಜನರು ನಮ್ಮ ಮನೆಗೆ ಬಂದರೆ, ಈ ಉಪಾ ಯವನ್ನು ಅವರಿಗೆ ಹೇಳಿ ಕೊಡುತೇನೆ, ಎಂದನು. ಇದಕ್ಕೆ ಜೋಯಿ ಸನು- ಹಾಗೆ ಸುಮ್ಮನೇ ಹೇಳುವುದು, ಸರಿಯಲ್ಲ. ನಿನ್ನ ನ್ನು ಕೇಳಿದರೆ ಹೇಳಬೇಕು, ಮನಸ್ಸು ಬಂದಹಾಗೆ ತಿಂದರೆ, ತಮ್ಮ ರೋಗ ಹೆಚ್ಚು ವುದು ಎಂಬ ಸಂಗತಿಯನ್ನು ಆ ಜನರು ಅರಿಯದೇ ಇರಲಾರರು. ಆದ್ದರಿಂದ ನೀನು ಹೊಸಮಾತನ್ನು ಅವರಿಗೆ ಹೇಳಿಕೊಟ್ಟ ಹಾಗಾಗ. ಲಿಲ್ಲ. ಇದೂ ಅಲ್ಲದೆ ನೀನು ಚಿಕ್ಕ ಹುಡುಗ, ನೀನೇ ಎಷ್ಟೋ ವಿಷಯ ಗಳನ್ನು ತಿಳಿದುಕೊಳ್ಳಬೇಕಾಗಿದೆ, ಆದ್ದರಿಂದ, ಇತರರಿಗೆ ಬುದ್ದಿ ಯನ್ನು ಕಲಿಸುವುದು ನಿನ್ನ ಕೆಲಸವಲ್ಲ. ಲೋಕದಲ್ಲಿ ಇರತಕ್ಕೆ ಐಶ್ವರ ವಂತರಲ್ಲಿ ಅರ್ಧ ಜನರಿಗೆ ಈ ಕಥೆ ಅನ್ವಯಿಸುತ್ತೆ. ಕಷ್ಟವೂ ಬಡತನವೂ ಹೇಗೆ ಕೆಟ್ಟ ದೊ, ಮಿತವಿಲ್ಲದೆ ಇರತಕ್ಕದ್ದೂ ಹಾಗೆಯೇ ಕೆಟ್ಟ ದು, ಎಂದು ಇದರಿಂದ ನಾವು ತಿಳಿದುಕೊಳ್ಳ ಬಹುದು, ವಿಶೇಷ ಚಳಿಯಾಗಿರುವ ಉತ್ತರದೇಶದ ಜನರು ಕಷ್ಟ ಪಡುವುದೇನೋ ನಿಜ, ಆದರೆ ರೋಗ ವಿಲ್ಲದೇ ಇರುವವರು ಬಹುದಿವಸ ಬದುಕುವರು ; ಹೀಗೆಂದು ಜೋಯಿಸ. ಹೇಳಿದನು.