ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಸುಮತಿ ಮದನಕುಮಾರರ ಚರಿತ್ರೆ ೧ಜ೬. ಭಯಹೆಚ್ಚಿತು. ಅಷ್ಟು ಹೊತ್ತಿಗೆ ಮಳೆ ಸ್ವಲ್ಪ ಕಡಮೆಯಾಯಿತು ಸುಮತಿಮದನಕುಮಾರರಿಬ್ಬರೂ ಮನೆಗೆ ಹೊರಟರು. ಕಷ್ಟವನ್ನು ಅರಿಯದ ಮದನನು ಹೆಜ್ಜೆ ಹೆಜ್ಜೆಗೂ ಸೊಂಟದುದ್ದ ಬದಿಯಲ್ಲಿ ಹೂತು. ಕೊಳ್ಳು ತಿದ್ದನು, ಮಧ್ಯೆ ಮಧ್ಯೆ ಸುಮತಿಯು ಅವನಿಗೆ ಧೈರ್ಯವನ್ನು ಹೇಳಿ, ಮೇಲಕ್ಕೆ ಎತ್ತಿ ಕರೆದುಕೊಂಡು ಹೋಗುತಿದ್ದನು. ದಾರಿಯಲ್ಲಿ ಯಾರೊ ಕಾಸಿಕೊಳ್ಳು ತಾ ಇದ್ದು ಬಿಟ್ಟು ಹೋದ ಸ್ವಲ್ಪ ಬೆಂಕಿಯು ಸಿಕ್ಕಿತು, ಸುಮತಿಯು ಅಲ್ಲಿ ಬಿದ್ದಿದ್ದ ಒಣ ಕಡ್ಡಿಗಳನ್ನು ಆರಿಸಿ ಕೊಂಡು ಬಂದು ಬೆಂಕಿಗೆ ಹಾಕಿ ಉರಿಮಾಡಿದನು. ಇವರಿಬ್ಬರೂ ಬೆಚ್ಚಗೆ ಕಾಸಿಕೊಂಡರು. ಆಗ ಮದನನು-ಈ ಕಡ್ಡಿಗಳು ಎಂಥಾ ಸಮಯಕ್ಕೆ ಬಂದವು ನೋಡಿದೆಯ ?ಎಂದನು. ಸುಮತಿ -ಅಯ್ಯಾ, ನೀನು ಅರಮನೆಯಲ್ಲಿ ಸುಖವಾಗಿ ಬೆಳೆ ದವನು, ದೊರೆಮಗ, ಈ ಕಷ್ಟ ನನ್ನೆಲ್ಲಾ ಅರಿಯೆ, ಮೈಮೇಲೆ ಅಂಗೈ ಅಗಲ ಬಟ್ಟೆ ಯೂ ಇಲ್ಲದೆ, ಒಪ್ಪೋತಿಗೂ ಅನ್ನಕ್ಕೆ ಗತಿಯಿಲ್ಲದೆ, ಇರತಕ್ಕೆ ಬಡವರ ಮಕ್ಕಳು ಎಷ್ಟೋ ಜನರಿದಾರೆ. ಅವರ ಗತಿ. ಏನಾಗಬೇಕೋ, ನೋಡು. ಇಷ್ಟು ಕಷ್ಟಕ್ಕೆ ನೀನು ಈಗ ಒಂದು ಗಳಿಗೆಯಿಂದ ಎಷ್ಟು ಅತ್ತೆಯೋ, ಅಷ್ಟರಮಟ್ಟಿಗೆ ಆ ಬಡಜನರು ಒಂದು. ವರುಷದಲ್ಲಿ ಸಹಿತಾ ಅಳುವುದಿಲ್ಲ. ಮದನ-ಈ ಕಷ್ಟವನ್ನೆಲ್ಲಾ ಬಡವರು ಅನುಭವಿಸುವ ಹಾಗೆ ದೊರೆಯೂ ದೊರೆಮಕ್ಕಳೂ ಅನುಭವಿಸಬೇಕಾದ ಅಗತ್ಯವಿಲ್ಲ. ಸುಮತಿ-ಅದು ಯಾಕೆ ಇಲ್ಲ ? ದೊರೆಮಗನು ಬಡವರ ಹಾಗೆ ಮನುಷ್ಯನಲ್ಲವೋ ? ಮನುಷ್ಯನಾದಮೇಲೆ ಇತರರು ಅನುಭವಿಸುವ ಹಾಗೆ ತಾನೂ ಕಷ್ಟವನ್ನು ಅನುಭವಿಸುವುದಕ್ಕೆ ರಾಜಕುಮಾರನು ಯಾಕೆ ಅಭ್ಯಾಸಮಾಡಿಕೊಳ್ಳಬಾರದು ? ಮದನ- ಆಗಬಹುದು. ಆದರೆ, ದೊರೆಮಕ್ಕಳಿಗೆ ಎಲ್ಲಾ ಅನು. ಕೂಲವಾಗಿರುವುದು, ತಿನ್ನುವುದಕ್ಕೆ ತಿಂಡಿ ಇದೆ, ಹೊದೆಯುವುದಕ್ಕೆ ಬಟ್ಟೆ ಇದೆ. ವೆಚ್ಚ ಮಾಡುವುದಕ್ಕೆ ಹಣವಿದೆ, ಬೇಕಾದ್ದೆಲ್ಲಾ ಇದೆ. - ಸುಮತಿ-ಇದೆಲ್ಲಾ ಏಕರೀತಿಯಾಗಿರುವುದೊ ? ಧನವಂತರು.