ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಸುಮತಿ ಮದನಕುಮಾರರ ಚರಿತ್ರೆ ೧೫ ದಲ್ಲಿರುವ ಹಾಗೆಯೇ, ಇತರ ನಕ್ಷತ್ರಗಳನ್ನು ಗುರುತುಮಾಡುವುದು, ಅವುಗಳ ಹೆಸರುಗಳನ್ನು ಬರೆದುಕೊಡಬೇಕೆಂದು, ತಮ್ಮನ್ನು ಕೇಳಿ ಕೊಳ್ಳುವುದು. ಜೋಯಿಸ- ಅದು ಒಳ್ಳೆ ಕೆಲಸವೇ ಸರಿ, ಆದರೆ ಕಾಗದ ಒಂದೇ ಸಮನಾಗಿ ಚಪ್ಪಟೆಯಾಗಿರುವುದು, ಆಕಾಶ ಹಾಗಿದೆಯೆ ? ಮದನ-ಇಲ್ಲ, ಆಕಾಶವು ಎಲ್ಲಾ ಕಡೆಯಲ್ಲಿಯೂ ಭೂಮಿಯಿಂದ ಮೇಲಕ್ಕೆ ಎದ್ದು ಮೇಲೆ ವ್ಯಾಪಿಸಿದ ದೊಡ್ಡ ಬುರುಜಿನ ಹಾಗೆ ಕಾಣುವುದು. ಜೋಯಿಸ-ಹಾಗಾದರೆ ಗುಂಡಾಗಿರುವ ಒಂದು ಪದಾರ್ಥವನ್ನು ತಂದರೆ, ಆಕಾಶಕ್ಕೆ ಇದನ್ನು ಹೋಲಿಸಬಹುದು. ನಕ್ಷತ್ರಗಳ ಗುರು ತನ್ನು ತಪ್ಪಿಲ್ಲದೆ ಹಾಕಿಕೊಳ್ಳಬಹುದು. ಮದನ-ಅಂಥಾ ಗೋಳ ಎಲ್ಲಿದೆ ? ಜೋಯಿಸ-ನಾನು ಕೊಡಿಸಿಕೊಡುತೇನೆ. ಮದನ-ಜೋಯಿಸರೆ, ನಕ್ಷತ್ರಗಳ ವಿಷಯವನ್ನು ತಿಳಿದುದ ರಿಂದ ಪ್ರಯೋಜನವೇನು ? ಜೋಯಿಸ-ಇವುಗಳಿಂದ ಇನ್ನು ಯಾವ ಉಪಯೋಗವೂ ಇಲ್ಲದೇ ಇದ್ದಾಗ್ಯೂ, ನೋಡುವುದಕ್ಕಾದರೂ ಬಹು ಚೆನ್ನಾಗಿ ಕಾಣಿ ಸುವದಿಲ್ಲವೆ ? ಒಬ್ಬರು ಒಳ್ಳೆ ಬಟ್ಟೆ ಯನ್ನು ಹಾಕಿಕೊಂಡು ಹೋದರೂ, ಒಡವೆಯನ್ನು ಇಟ್ಟು ಕೊಂಡು ಹೋದರೂ, ಒಂದು ಚಿತ್ರವನ್ನು ಬರೆ ದಿದ್ದರೂ, ಒಂದು ಮನೆಯನ್ನು ಚೆನ್ನಾಗಿ ಕಟ್ಟಿದ್ದರೂ, ಅದನ್ನೆಲ್ಲಾ ನಾವು ನೋಡಿ ಆನಂದಪಡುತೇವೆ. ಆದರೆ ಈ ಗಗನದಲ್ಲಿ ಥಳಥಳ ಗುಟ್ಟುವ ಅದ್ಭುತವಾದ ಈ ನಕ್ಷತ್ರವನ್ನು ನೋಡಿದರೆ, ಆನಂದವಿಲ್ಲವೆ? ಇಷ್ಟೇ ಉಪಯೋಗ ಸಾಕು. ಆದರೆ ಈ ನಕ್ಷತ್ರಗಳನ್ನು ತಿಳಿಯು ವುದರಿಂದ ಇನ್ನೂ ಕೆಲವು ಪ್ರಯೋಜನ ಉಂಟು, ಸುಮತಿ, ನಿಮ್ಮ ಚಿಕ್ಕಯ್ಯನ ಮನೆಗೆ ನೀನು ಹೋಗಿದ್ದಾಗ ನಡೆದ ಸಂಗತಿಯನ್ನು ಹೇಳು. ಸುಮತಿ-ಇಲ್ಲಿಗೆ ಒಂದು ಫಿರಂಗೀ ಎಸಗೆಯಲ್ಲಿ ನಮ್ಮ ಚಿಕ್ಕಪ್ಪನ