ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ನನ್ನ ಕಣ್ಣಿಗೆ ಬಿತ್ತು, ಅದರಮೇಲೆ ಧ್ರುವನಕ್ಷತ್ರ ಕಾಣಿಸಿತು, ನಮ್ಮ ಚಿಕ್ಕ ಪ್ರನ ಮನೆಗೆ ಹೋಗುವಾಗ್ಗೆ ನನಗೆ ಇದಿರಾಗಿ ಧ್ರುವ ನಕ್ಷತ್ರ ಯಾವಾಗಲೂ ಕಾಣಿಸುತಿತ್ತು. ಅದರಕಡೆ ಬೆನ್ನು ಮಾಡಿಕೊಂಡು ನೆಟ್ಟಗೆ ಹೊರಟರೆ ನಮ್ಮ ಮನೆ ಸಿಕ್ಕಬಹುದೆಂದು ನಿರ್ಧರಿಸಿಕೊಂಡೆ. ಅದೇ ಪ್ರಕಾರ ನನ್ನ ಮೂಗಿನ ನೇರಕ್ಕೆ ನೆಟ್ಟಗೆ ಹೊರಟೆ. ಬೆಳದಿಂಗಳ ಪ್ರಕಾಶ ಹೆಚ್ಚಾಗುತ್ತಾ ಬಂದುದರಿಂದ, ಹಳ್ಳ ಕೊಳ್ಳಗಳಿಗೆ ಬೀಳದಂತೆ ಬಂದೆ. ದಾರಿಗೊತ್ತಾಯಿತೆಂದು ಮನಸ್ಸಿಗೆ ಖಂಡಿತವಾಗಿ ತೋರಿತಾಗಿ, ನನಗೆ ಆಯಾಸವೇ ತೋರಲಿಲ್ಲ. ಅಷ್ಟು ಹೊತ್ತಿಗೆ ನಾಯಿ ಬೊಗ ಳುವ ಸದ್ದು ಕೇಳಿತು. ನನಗೆ ಒಂದಕ್ಕೆ ಎರಡರಷ್ಟು ಬಲಬಂದಹಾಗೆ ತೋರಿತು. ಹಾಗೆಯೇ ಓಡಿಬರಲು, ನಮ್ಮ ಊರು ಸಿಕ್ಕಿತು, ಮನೆಗೆ ಹೋಗಿ ತಲಪಿದೆ. ಮದನ-ಓಹೋ ! ಧ್ರುವನಕ್ಷತ್ರವನ್ನು ತಿಳಿಯುವುದರಿಂದ ಪ್ರಯೋಜನವಿದೆ ! ಈ ನಕ್ಷತ್ರಗಳ ವಿಷಯವನ್ನೆಲ್ಲಾ ತಿಳಿದುಕೊಳ್ಳ ಬೇಕು, ಸುಮತಿ, ನಿನ್ನ ಮುಂದೆ ಹಾಗೆ ಹರಿದುಹೋದ ಬೆಳಕು ಯಾವುದು ? ಕೊನೆಗೆ ಗೊತ್ತಾಯಿತೆ ? ಸುಮತಿ-ನಮ್ಮ ಅಯ್ಯನ ಸಂಗಡ ಹೇಳಿದೆ. ಅದು ಕೋಳಿ ಪಿಶಾಚಿ ಎಂದು ಹೇಳಿದರು. ಈಚೆಗೆ ಜೋಯಿಸರು ಅದನ್ನು ಚೆನ್ನಾಗಿ ವಿವರಿಸಿದರು. ಜೋರೆಗಳಿಂದ ಒಂದು ಬಗೆ ಗಾಳಿ ಹೊರಟು ಬೆಳಕಿನ ಹಾಗೆ ಕಾಣುವುದು, ಎಂದು ಹೇಳಿದರು. ಹೀಗೆ ಮಾತನಾಡಿಕೊಂಡು, ಸುಮತಿ, ಮದನ, ಜೋಯಿಸ ಮೂರು ಜನವೂ ಜೋಯಿಸನ ಮನೆಗೆ ಬಂದು ಸೇರಿದರು. ಇಬ್ಬರು ಹುಡುಗರೂ ಬೆಚ್ಚಗೆ ಹೊದ್ದು ಕೊಂಡು ಮಲಗಿಕೊಂಡರು. ರಾಮ ಜೋಯಿಸ ಮಾತ್ರ ಏನೋ ಪುಸ್ತಕವನ್ನು ನೋಡುತಾ ಇದ್ದನು, ಸ್ವಲ್ಪ ಹೊತ್ತಿನಮೇಲೆ ಮದನನು ಓಡಿಬಂದು, ಜೋಯಿಸರೆ, ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವುದು, ಎಂದನು. ಜೋಯಿಸ-ಯಾವುದು, ಎಂದು ಕೇಳಲಾಗಿ, ರಾಜಪುತ್ರನುಸಪ್ತಋಷಿ ನಕ್ಷತ್ರ, ಇದು ಚಲಿಸುವುದೇ ಇಲ್ಲವೇ, ನೋಡೋಣ.