ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭0 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಭಾರವಾದಕಾರಣ ಮನೆಯು ಬಿದ್ದು ಹೋದೀತೆಂಬ ಭಯದಿಂದ ಒಬ್ಬ ಮನುಷ್ಯನೂ ಅವನ ಮಗನೂ ಚಾವಣಿಯ ಮೇಲೆ ಹತ್ತಿ, ಮಂಜಿನ ಗಡ್ಡೆಯನ್ನು ತೆಗೆದು ಕೆಳಕ್ಕೆ ಹಾಕುತಿದ್ದರು, ಮತ್ತೊಬ್ಬ ಮಾರ್ಗಸ್ಥನು ಇವರನ್ನು ಕುರಿತು-ಅಯ್ಯ, ಬೇಗ ಕೆಳಕ್ಕೆ ಇಳಿದು ಓಡಿಹೋಗಿರಿ, ಬೆಟ್ಟದ ಮೇಲಿನಿಂದ ಹಿಮದಗಡ್ಡೆ ಪರ್ವತದ ಹಾಗೆ ಉರುಳಿ ಬರುತಿದೆ, ನೀವು ಅದರಲ್ಲಿ ಸಿಕ್ಕಿಕೊಂಡು ಸತ್ತು ಹೋದೀರಿ, ಎಂದನು. ಇದನ್ನು ಕೇಳಿದ ಕೂಡಲೆ ಹಾರಿನಮೇಲಿನಿಂದ ಅಪ್ಪ ಮಕ್ಕಳಿಬ್ಬರೂ ಕೆಳಕ್ಕೆ ಇಳಿದು ಓಡಿಹೋದರು. ಕಾಲುಗಳಿಗೆಯೊಳಗೆ ಮಂಜಿನ ಗಡ್ಡೆ ಯು ಉರುಳಿ ಬಂದು ಆ ಹಳ್ಳಿಯನ್ನೆ ಲ್ಲಾ ಮುಚ್ಚಿಕೊಂಡು ಬಿಟ್ಟಿತು, ಆ ಮನುಷ್ಯನು ತನ್ನ ಹೆಂಡತಿ, ಮಕ್ಕಳು, ತಂಗಿ, ಎಲ್ಲಾ ಹಿಮದಲ್ಲಿ ಸಿಕ್ಕಿ ಸತ್ತು ಹೋದರೆಂದು ತಿಳಿದು, ಮೂರ್ಛಹೋಗಿ, ಎದ್ದು ಇನ್ನೊಂದು ಹಳ್ಳಿಗೆ ಹೋಗಿ ಸುದಾರಿಸಿಕೊಂಡು, ಐದುದಿವಸದ ಮೇಲೆ, ತನ್ನ ಜನರು ಏನಾದರೋ ನೋಡೋಣವೆಂದು, ಮಗನನ್ನೂ ಕರೆದುಕೊಂಡು ಹೊರಟನು. ಇವನಿಗೆ ಮನೆ ಇದ್ದ ಸ್ಥಳವೇ ಗುರುತು ಸಿಕ್ಕಲಿಲ್ಲ. ಆಗ ಬೇಸಗೆ ಸ್ವಲ್ಪ ಮೊದಲಾಗಿತ್ತು. ಹಿಮದ ಗಡ್ಡೆ ಸ್ವಲ್ಪ ಮೆತ್ತ ಗಾಯಿತು. ಇವರಿಬ್ಬರೂ ಗುದ್ದಲಿ, ಹಾರೆ, ಎಲ್ಲವನ್ನೂ ತೆಗೆದು ಕೊಂಡುಹೋಗಿ, ಒಂದೆರಡು ಕಡೆ ಅಗೆದು ನೋಡಿದರು. ಏನೂ ಸಿಕ್ಕ ಲಿಲ್ಲ, ಇವನ ಭಾವಮೈದಂದಿರು ಸಹಾಯಕ್ಕೆ ಬಂದರು. ಎಲ್ಲರೂ ಸೇರಿ ಅಗೆದು ನೋಡುವಲ್ಲಿ ಕಡೆಗೆ ಒಂದು ಸಣ್ಣ ತೂತು ಸಿಕ್ಕಿತು. “ ಅಣ್ಣಾ, ನಮ್ಮನ್ನು ಆಚೆಗೆ ಕರೆದುಕೊ, ಕರೆದುಕೊ,” ಎಂಬ ಧ್ವನಿ ಕೇಳಿಸಿತು. ಆಗ ಮನೇ ಯಜಮಾನನೂ, ಅವನ ಭಾವಮೈದನೂ ಒಳಕ್ಕೆ ಇಳಿದರು. ಅಲ್ಲಿ ಅವನ ಹೆಂಡತಿಯೂ, ಅವನ ತಂಗಿಯೂ, ಹದಿಮೂರು ವರುಷದ ಒಬ್ಬ ಹೆಣ್ಣಮಗಳೂ ಮೂರುಜನ ಮಾತ್ರ ಬದು ಕಿದ್ದರು. ಅವರಿಗೂ ಚಳಿಯಿಂದ ಮೈಯೆಲ್ಲಾ ಬೆರತುಹೋಗಿತ್ತು. ಆ ಮೂರು ಜನರನ್ನೂ ಮೇಲಕ್ಕೆ ಎತ್ತಿ ಕೊಟ್ಟರು. ಮೇಲಿದ್ದ ವರು ಅವ ರನ್ನು ಕರೆದುಕೊಂಡರು. ಆ ಹೆಂಗಸರಿಗೆ ಸ್ಪಲ್ಪ ಆಹಾರವನ್ನು ಕೊಟ್ಟು ಮೈ ಬೆಚ್ಚಗಾಗುವುದಕ್ಕೆ ತಕ್ಕ ಉಪಾಯವನ್ನು ಮಾಡಿ ಪ್ರಾಣವನ್ನು ಉಳಿಸಿದರು.