ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩] ಸುಮತಿ ಮದನಕುಮಾರರ ಚರಿತ್ರೆ ೧೭n ಈ ಅದ್ಭುತವಾದ ಸಂಗತಿಯನ್ನು ಅಲ್ಲಿನ ಕೋಶಾಧಿಕಾರಿಯು ಕೇಳಿ ಅವರನ್ನು ಕರಸಿ, ವಿಚಾರಿಸಲಾಗಿ, ಆ ಯಜಮಾನನ ಹೆಂಡತಿ ಹೇಳಿದ್ದು ಹೇಗೆಂದರೆ :- ನಾನು ಮನೆಯಲ್ಲಿ ಕೆಲಸ ಮಾಡುತಿದ್ದೆ, ನನ್ನ ಯಜಮಾನನೂ ಹಿರೀಮಗನೂ ಹಂಜರದಮೇಲೆ ಬಿದ್ದಿದ್ದ ಮಂಜಿನ ಗಡ್ಡೆ ಗಳನ್ನು ಕೆಳಗೆ ತೆಗೆದುಹಾಕುತಿದ್ದರು. ಬೆಟ್ಟ ದಹಾಗೆ ಬರುತಿದ್ದ ಹಿಮದಗಡ್ಡೆ ಯು ಕಾಣಿಸಿತು. ನಾನು ಜಾಗ್ರತೆಯಾಗಿ ಬೀದೀಬಾಗಿಲನ್ನು ಹಾಕಿಕೊಂಡೆ. ಒಂದು ಗಳಿಗೆಯಲ್ಲಿ ಮನೇ ಚಾವಣಿಯು ಮುರಿದು ಕೆಳಕ್ಕೆ ಬಿತ್ತು. ಕೊಟ್ಟಿಗೆಯಲ್ಲಿ ಒಂದು ಮೂಲೆಯಲ್ಲಿ ಮಾತ್ರ ಸ್ವಲ್ಪ ಸ್ಥಳವಿತ್ತು, ನಾನು, ನನ್ನ ನಾದಿನಿ, ನನ್ನ ಮಗಳು, ಒಂದು ಕೈಮಗು, ಇಷ್ಟು ಜನವೂ ಅಲ್ಲಿ ಹೋಗಿ ಸೇರಿಕೊಂಡೆವು. ಕೆಲವು ಕಾಲದವರೆಗೆ ಮನೆಯಲ್ಲಿದ್ದ ಸಾಮಾ ನುಗಳನ್ನೆಲ್ಲಾ ತಿಂದು ಮುಗಿಸಿದೆವು, ಕೊಟ್ಟಿಗೆಯಲ್ಲಿ ಎರಡು ಆಡು ಗಳು ಮಾತ್ರ ಬದುಕಿದ್ದವು. ಒಂದು ಗರ್ಭವಾಗಿತ್ತು, ಇನ್ನೊಂದು ಕರೆಯುತಿತ್ತು, ಅದರ ಹಾಲನ್ನು ಕರೆದು, ನಾವೆಲ್ಲರೂ ಹೊಟ್ಟೆಗೆ ಆಧಾರಮಾಡಿಕೊಳ್ಳು ತಿದ್ದೆವು. ಚಳಿಯನ್ನು ತಡೆಯಲಾರದೆ ನನ್ನ ಕೈ ಗಂಡುಮಗು ಸತ್ತು ಹೋಯಿತು, ಇಪ್ಪತ್ತು ದಿವಸದವರೆಗೆ ಮಾತ್ರ ಕೋಳಿ ಕೂಗಿಲ್ಲದೆ ಹಗಲು ರಾತ್ರೆ ಯಾವುದೂ ತಿಳಿಯಲಿಲ್ಲ. ಮನೆ ಯಲ್ಲಿದ್ದ ಹುಲ್ಲನ್ನೆ ಮೆಲ್ಲಗೆ ಕಿತ್ತು ಆಡುಗಳಿಗೆ ಹಾಕುತ್ತಾ ಬಂದೆವು. ಕತ್ತಲೆಯಲ್ಲಿ ಏನೂ ಕಾಣಿಸುತಿರಲಿಲ್ಲ, ಗಬ್ಬವಾಗಿದ್ದ ಆಡು ಮರೀ ಹಾಕುವುದಕ್ಕೆ ಇನ್ನು ಇಪ್ಪತ್ತು ದಿವಸ ಬೇಕಾಗಿತ್ತು, ಇದರಿಂದ ನಾವು ಅಲ್ಲಿದ್ದ ದಿವಸ ಸುಮಾರಾಗಿ ಗೊತ್ತಾಯಿತು. ಹಾಲು ಕರೆಯುವ ಹೊತ್ತಾದರೆ, ಆಡು ತಾನಾಗಿ ಬಂದು ಕೈಯನ್ನು ನೆಕ್ಕುತಿತ್ತು. ಆಗ ನಾವು ಹಾಲ ಕರೆದುಕೊಳ್ಳುತಿದ್ದೆವು. ತರುವಾಯ ನಮ್ಮನ್ನು ಮೇಲಕ್ಕೆ ಎತ್ತಿ ತಂದರು. ಈ ಪ್ರಕಾರ ಆ ಹೆಂಗಸು ಕೋಶಾಧಿಕಾರಿಯ ಮುಂದೆ ತಮ್ಮ ಕಥೆಯನ್ನೆ ಲ್ಲಾ ವಿಸ್ತಾರವಾಗಿ ಹೇಳಿದಳು, ಎಂಬುದಾಗಿ ರಾಮಜೋಯಿ ಸನು ಕಥೆಯನ್ನು ಮುಗಿಸಿದನು.