ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩] ಸುಮತಿ ಮದನಕುಮಾರರ ಚರಿತ್ರೆ ೧೭೩. ಸುಮತಿ-ನಾನು ಒಲ್ಲೆ. ನಮ್ಮ ತಂದೆತಾಯನ್ನೂ, ನನಗೆ ಎಷ್ಟೋ ಉಪಕಾರವನ್ನು ಮಾಡಿದ ನಿಮ್ಮನ್ನೂ, ಹೀಗೆ ನನಗೆ ಬೇಕಾದ : ವರನ್ನೆಲ್ಲಾ ಬಿಟ್ಟು, ನಾನು ಯಾಕೆ ಅಲ್ಲಿ ಹೋಗಲಿ ? ಮದನ ಷಹರುಗಳಿಗೆ ನೀನು ಹೋಗಿಯೇ ಇಲ್ಲವೆ ? ಸುಮತಿ-ಒಂದುಸಾರಿ ಹೋಗಿದ್ದೆ. ವಿಜಯನಗರಕ್ಕೆ ಕರೆದು ಕೊಂಡು ಹೋಗಿದ್ದರು. ಆ ಜನದ ಗುಂಪೊ, ಆ ಬಚ್ಚಲ ನಾತವೊ, ಆ ಸಂದುಗೊಂದೋ ಸಾಕು, ಸಾಕು ! ಒಂದೊಂದು ಕಡೆ ಗಾಳಿ ಬೆಳಕಿಗೆ ಸಹಿತ ಮಾರ್ಗವಿಲ್ಲ. ಪೇಟೀ ನೋಡುವುದಕ್ಕೆ ಹೋದೆ. ಅಲ್ಲಿ ಬೊಂಬೆಗೆ ಕೈಕಾಲುಗಳನ್ನೂ, ಮುಖವನ್ನೂ ಮಾಡಿ ಇರಿಸಿದೆಯೋ ಎನ್ನುವ ಹಾಗೆ, ದೊಡ್ಡ ದೊಡ್ಡ ಹೊಟ್ಟೆ ಯುಳ್ಳ ಜನರು ಭೂತದಹಾಗೆ ಕೂತಿರುತಿದ್ದರು. ಅವರು ಅತ್ತಿತ್ತ ತಿರುಗುವುದೇ ಕಷ್ಟವಾಗಿತ್ತು, ಅವರನ್ನು ನೋಡಿ ನನಗೆ ಬಹಳ ನಗು ಬಂತು. ನಾನು ಇಳಿದಿದ್ದ ಮನೆಯಲ್ಲಿ ಹೆಂಗಸು ಗಂಡಸರೆಲ್ಲರೂ, ಬೆಳಗಿನಿಂದ ಸಾಯಂಕಾಲದ ವರೆಗೂ ಸಿಸ್ತು ಮಾಡಿಕೊಳ್ಳುವುದರಲ್ಲಿಯೇ ಕಾಲವನ್ನು ಕಳೆಯುತ್ತಿದ್ದರು. ಹುಬ್ಬಿಗೂ ಗಂಧಕ್ಕೂ ಐದು ಆರು ವರಹದಮಟ್ಟಿಗೆ ವೆಚ್ಚ ಮಾಡು ತಿದ್ದರು. ಆದರೆ ಬಾಗಿಲಲ್ಲಿ ಬಂದು ನಿಂತುಕೊಂಡು-ಅಮ್ಮಾ, ಭಿಕ ಎಂದು ಕೂಗುತಿದ್ದ ಕುಂಟರಿಗೆ ಕುರುಡರಿಗೆ ಒಂದು ಹಿಡಿಯನ್ನಾದರೂ ಹಾಕುತಿರಲಿಲ್ಲ. ಮದನ-ಅದೇನೋ ನಿಜ, ಆದರೆ ನನ್ನಂಥವನು ಅಲ್ಲಿದ್ದರೆ, ಆ ಬಡಜನರಿಗೆ ಏನೂ ಕಡಮೆಮಾಡುತ್ತಿರಲಿಲ್ಲ. ನಾನು ಒಳ್ಳೆಯವನು, ಉದಾರಿ, ಎಂಬುವುದನ್ನು ನೀನು ಬಲ್ಲೆ ಯಷ್ಟೆ ? ದೊಡ್ಡ ಪದವಿಯಲ್ಲಿರ ತಕ್ಕವರು ಒಳ್ಳೆ ಒಡವೆಯನ್ನಿಟ್ಟು ಒಳ್ಳೆ ಬಟ್ಟೆಯನ್ನು ಟ್ಟು ಸಿಸ್ತು ಮಾಡಿಕೊಳ್ಳಬೇಕಾದ್ದು ಅಗತ್ಯ. ಸುಮತಿ-ಹಾಗೆ ಸಿಸ್ತು ಮಾಡಿಕೊಂಡದ್ದರಿಂದ ಪ್ರಯೋಜನ ವೇನು ? ಆ ಪೇಟೆಯಲ್ಲಿ ನಾನು ಹೋಗುತಿರುವಾಗ ನನಗೆ ಇಬ್ಬರು ಹುಡುಗರು ಸಿಕ್ಕಿದರು. ಅವರ ಆಭರಣವನ್ನೂ ಉಡುಪನ್ನೂ ನೋಡಿದರೆ, ನೀನು ಮೊದಲು ಇಲ್ಲಿಗೆ ಬಂದಾಗ ಹೇಗೆ ಇದ್ದೆಯೋ ಹಾಗೆ