ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ಜ ೧೩] ಸುಮತಿ ಮದನಕುಮಾರರ ಚರಿತ್ರೆ ಮುಖ್ಯವಾದ ಕಾರ್, ಒಳ್ಳೆ ಉಡುಪನ್ನು ಹಾಕಿಕೊಂಡು ಡಂಭ ವಾಗಿದ್ದವರನ್ನು ಮಾತನಾಡಿಸುವರು. ಇಲ್ಲದೇ ಇದ್ದವರು ಸ್ನೇಹಿತ ರಾದಾಗ್ಯೂ ಸರಿಯೆ, ಮಾತನಾಡಿಸುವುದಿಲ್ಲ. ಸುಮತಿ-ಒಳ್ಳೆ ಬಟ್ಟೆ ಗೂ ಸೈ ಹಕ್ಕೂ ಸಂಬಂಧವೇನು, ಜೋಯಿಸರೆ ? ಒಳ್ಳೆ ಬಟ್ಟೆ ಯನ್ನು ಹಾಕಿಕೊಂಡವರಿಗೆ ಹೆಚ್ಚು ಮರ್ಯಾದೆ ಯಾಕೆ ? ಈ ಮಾತನ್ನು ಕೇಳಿದ ಕೂಡಲೆ ನನಗೆ ಒಂದು ಕಥೆ ಜ್ಞಾಪಕ ಬರುವುದು, ಜೋಯಿಸರೆ. ಮದನ-ಆ ಕಥೆಯನ್ನು ಹೇಳು. ಜೋಯಿಸ-ಆ ಕಥೆ ನಾಳೆ ಆಗಲಿ. ತರುವಾಯ ಮದನ, ಸುಮತಿ, ಇಬ್ಬರೂ ಆಡುವುದಕ್ಕೆ ಹೋದರು, ಜೋಯಿಸರ ಹೊಲದ ಮಧ್ಯೆ ಚಿಕ್ಕದಾದ ಒಂದು ಮರದ ದಿಮ್ಮಿ ಬಿದ್ದಿತ್ತು, ಅದನ್ನು ಗುಡಿಸಲಿನ ಹತ್ತಿರಕ್ಕೆ ಉರುಳಿಸಿಕೊಂಡು ಬರ ಬೇಕೆಂದು ಯತ್ನಿಸಿದರು. ಇವರಿಬ್ಬರೂ ಸೇರಿ ಅದನ್ನು ಕೈಯಿಂದ ತಳ್ಳಿದರು. ಅದು ಉರುಳಲಿಲ್ಲ. ಆಗ ಸುಮತಿಯು ಎರಡು ಕಟ್ಟಿಗೆ ಯನ್ನು ತೆಗೆದುಕೊಂಡು ಬಂದು, ಒಂದನ್ನು ಮದನನಿಗೆ ಕೊಟ್ಟು ಅದರ ತುದಿಯಲ್ಲಿ ಮರವನ್ನು ವಿಾಟು ಎಂದು ಹೇಳಿದನು. ಇನ್ನೊಂದು ಕಟ್ಟಿಗೆಯಿಂದ ತಾನೂ ಅದನ್ನು ಮಾಟುತ್ತ ಬಂದನು, ಮರವು ಸುಲಭ ವಾಗಿ ಉರುಳಿಕೊಂಡು ಹೋಯಿತು, ಆದರೆ ಆಗ ಉರುಳದೇ ಇದ್ದ ಮರ ಈಗ ಉರುಳುವುದಕ್ಕೆ ಕಾರಣವೇನು ? ಎಂದು ಕೇಳಲು, ಸುಮ ತಿಯು-ಅದು ಈ ಕೋಲಿನ ತ್ರಾಣವೆಂದು ಹೇಳಿದನು. ಆ ಮಾತಿಗೆ ದೊರೆಮಗನು- ಈ ಕಟ್ಟಿಗೆಗೆ ಇಷ್ಟು ತ್ರಾಣವಿದೆಯೆ ? ಎಂದು ಕೊಳ್ಳು ತಾ, ಸುಮತಿಯ ಜೊತೆಯಲ್ಲಿ ಮರವನ್ನು ತಳ್ಳುತ್ತಾ ಹೋದನು. ಥಟ್ಟನೆ ಕಟ್ಟಿಗೆ ಎರಡೂ ಮುರಿಯಿತು, ಅದನ್ನು ನೋಡಿ ಮದನನು ಚಿಂತೆಯಿಲ್ಲ, ಕಟ್ಟಿಗೆ ತುದಿ ಸ್ವಲ್ಪ ಇದೆ, ಎಂದುಕೊಳ್ಳು ತಾ, ಮುರಿದು ಹೋದ ಮೊಳದುದ್ದ ಕಟ್ಟಿಗೆಯಲ್ಲಿ ದಿಮ್ಮಿಯನ್ನು ವಿಾಟದ, ಅದು ಉರುಳಲಿಲ್ಲ, ಯಾಕೆ ಉರುಳುವುದಿಲ್ಲವೆಂದು ಅವನು ಕೇಳಲು, ಸುಮತಿಯು-ಅದು ಈ ಸಣ್ಣ ಕೋಲಿಗೆ ಉರುಳುವುದಿಲ್ಲವೆಂದು