ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ೧4] ಸುಮತಿ ಮದನಕುಮಾರರ ಚರಿತ್ರೆ ಜೋಯಿಸ-ಒಂದು ಗುಡ್ಡೆ ಯಲ್ಲಿ ಹದಿನಾಲ್ಕು, ಇನ್ನೊಂದು ಗುಡ್ಡೆ ಯಲ್ಲಿ ಇಪ್ಪತ್ತೈದು, ಎರಡೂ ಸೇರಿ ಎಷ್ಟಾಯಿತು ? " ಅದಕ್ಕೆ ಮದನ ಉತ್ತರವನ್ನೂ ಹೇಳಲಾರದೇ ಹೋದ, ಜೋಯಿ ಸನು ಸುಮತಿಯ ಕಡೆಗೆ ತಿರುಗಲು, ಮುವ್ವತ್ತೊಂಭತ್ತಾಯಿತೆಂದು ಅವ ಹೇಳಿದ. ಜೋಯಿಸ-ಎರಡು ಗುಡ್ಡೆಯನ್ನು ಬೆರಸಿ ಬಿಡುತ್ತೇನೆ. ಈಗ ಕಾಳು ಎಷ್ಟಾ ಯಿತು, ಎಣಿಸು. ಮದನ- ಮುವ್ವತ್ತೊಂಭತ್ತು. ಜೋಯಿಸ-ಅದರಲ್ಲಿ ಹತ್ತೊಂಭತ್ತನ್ನು ನಾನು ತೆಗೆದು ಕೊಂಡರೆ ಎಷ್ಟು ಉಳಿಯಿತು. ಮದನ+ಎಣಿಸಬೇಕು. ಜೋಯಿಸ-ಎಣಿಸದೇ ಹೇಳಲಾರೆಯ ? ಸುಮತಿ, ನೀನು ಹೇಳು. ಸುಮತಿ-ಇಪ್ಪತ್ತು. ಜೋಯಿಸ-ಈ ವಿಧವಾದ ಲೆಕ್ಕಾಚಾರವೇ ಗಣಿತ, ಆದರೆ ಸುಲಭವಾಗಿ ಲೆಕ್ಕಾ ಮಾಡುವ ಮಾರ್ಗವಿದೆ, ಮಸಲ, ಈ ಚೀಲದಲ್ಲಿ ಎಷ್ಟು ಬತ್ತದ ಕಾಳು ಇದೆ ಎಂದು ಕೇಳಿದರೆ, ಎಂಟು ಹತ್ತು ದಿವಸ ಕೂತು ಲೆಕ್ಕಾ ಮಾಡಿದರೂ ಆಗುವುದಿಲ್ಲ. ಆದರೆ ಗಣಿತ ಬಂದಿದ್ದರೆ ಕಾಲುಗಳಿಗೆಯಲ್ಲಿ ಹೇಳಬಹುದು. - ಮದನ-ಇದೇನೋ ಅದ್ಭುತವಾಗಿದೆ. ನಂಬುವುದು ಕಷ್ಟ. ಜೋಯಿಸ-ಹಾಗಾದರೆ ಹೇಳುತೇನೆ, ಕೇಳು, ಈ ಚೀಲದಲ್ಲಿ ಐವತ್ತು ಸೇರು ಬತ್ತವಿದೆ, ಸೇರಿಗೆ ಹದಿನಾರು ಚಟಾಕು, ಆದ್ದರಿಂದ ಇದರಲ್ಲಿ ಎಂಟುನೂರು ಚಟಾಕು ಇದೆ, ಸೇರಿಗೆ ಎಂಭತ್ತು ರೂಪಾಯಿ ತೂಕದ ಪ್ರಕಾರ, ಚಟಾಕಿಗೆ ಐದು ರೂಪಾಯಿ ತೂಕವಾಯಿತು. ರೂಪಾಯಿ ತೂಕಕ್ಕೆ ಮೂವತ್ತು ಹಣತೂಕ ಅಥವಾ ನಾನೂರ ಎಂಭತ್ತು ವೀಸತೂಕ, ಒಂದು ಕಾಳು ಒಂದು ವೀಸ ತೂಕವಿದೆ. ಒಂದು ರೂಪಾಯಿ ತೂಕಕ್ಕೆ ನಾನೂರೆಂಭತ್ತು ಕಾಳಾಯಿತು, ಐದು