ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನ ಕುಮಾರರ ಚರಿತ್ರೆ ಇದನ್ನು ಕಂಡು ಸುಮತಿಯು ಆ ಹುಡುಗನಿಗೆ ಸಂಭವಿಸಿದ್ದ ಅಪಾಯ ವನ್ನು ತಿಳಿದುಕೊಂಡನು. ತಾನೂ ಚಿಕ್ಕ ಹುಡುಗನಾದಾಗ್ಯೂ ಸುಮ ತಿಯು ಧೈತ್ಯಶಾಲಿಯಾದ್ದರಿಂದ ಹೆದರಬೇಡವೆಂದು ಅವನಿಗೆ ಹೇಳಿ, ಕೂಡಲೇ ಬಂದು ಯುಕ್ತಿಯಿಂದಲೂ ಮನೋನಿಶ್ಚಯದಿಂದಲೂ ಆ ಹಾವನ್ನು ಕತ್ತಿನ ಹತ್ತಿರ ಹಿಡಿದುಕೊಂಡು ಬಲವಾಗಿ ಈಚೆಗೆ ಎಳೆದು, ಅದನ್ನು ಗರನೆ ತಿರುಗಿಸಿ ದೂರವಾಗಿ ಎಸೆದನು. ೨ ನೆ ಅಧ್ಯಾಯ ಇದು ಹೀಗಿರಲಾಗಿ, ಅತ್ತ ಮದನ ಕುಮಾರನ ತಾಯಿಯೂ ಅವಳ ಮನೆಯವರೆಲ್ಲರೂ ಸೇರಿ, ದಾದಿಯ ಕೂಗಿನಿಂದ ಗಾಬರಿಪಟ್ಟು ತಮ್ಮ ಮುದ್ದಿನ ಕಂದ ಇದ್ದ ಸ್ಥಳಕ್ಕೆ ಓಡಿಬಂದರು. ಆಗ ಮದನ ಕುಮಾರನು ಚೇತರಿಸಿಕೊಳ್ಳು ತಾ ತನಗೆ ಉಪಕಾರವನ್ನು ಮಾಡಿದ ಹುಡುಗನನ್ನು ಹತ್ತಿರ ಕೂರಿಸಿಕೊಂಡು ಕೂತಿದ್ದನು. ಅವನ ತಾಯಿಯು ಓಡಿಬಂದು ತನ್ನ ಕಂದನನ್ನು ಎತ್ತಿಕೊಂಡು ಸಾವಿರ ಸಾರಿ ಮುದ್ದಾಡಿ, ತರುವಾಯ, ಏನಾದರೂ ಗಾಯವಾಯಿತೆ ? ಎಂದು ಕೇಳಿ ದಳು. ಆ ಹುಡುಗನು-ಅಮ್ಮ, ಇಲ್ಲ, ಗಾಯವಾಗಲಿಲ್ಲ. ಅಷ್ಟರಲ್ಲಿಯೇ ಆ ಸಣ್ಣ ಹುಡುಗ ಬಂದು ಆ ಹಾಳಹಾವನ್ನು ಎಳೆದು ಹಾಕಿಬಿಟ್ಟ, ಇಲ್ಲದಿದ್ದರೆ ಅದು ನನ್ನನ್ನು ಕಚ್ಚು ತಿತ್ತು, ಎಂದನು. ಇಂಥಾ ಉಪ ಕಾರವನ್ನು ಮಾಡಿದವನು ನೀನು ಯಾರಪ್ಪಾ ? ಎಂದು ಆಕೆ ಕೇಳಿ ದಳು, ನಾನು ಸುಮತಿ ಎಂದು ಅವನು ಹೇಳಿದನು. ಕೂಡಲೇ ಆಕೆಮಗು, ನೀನು ಬಹು ಧೈರಶಾಲಿ, ಬಾ ನಮ್ಮ ಮನೆಗೆ, ನಿನಗೆ ತಿನ್ನು ವುದಕ್ಕೆ ಕೊಡುತ್ತೇನೆ, ಎಂದಳು. “ ಈ ಮಾತಿನಿಂದಲೇ ತಾವು ನನಗೆ ತಿ೦ಡೀಕೊಟ್ಟ ಹಾಗಾಯಿತು; `ಇಲ್ಲ, ನಾನು ಬರುವುದಿಲ್ಲ, ನಮ್ಮ ತಂದೆಗಳು ಕೂಗುತಾರೆ.” “ ನಿಮ್ಮ ತಂದೆ ಯಾರಯ್ಯ, ಮಗುವೆ ?”