ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ. ಇದಕ್ಕಾಗಿ ಬೇಕಾದ ಅಣಿಯನ್ನು ಅತಿ ಸಂಭ್ರಮದಿಂದ ಮಾಡಿದಳು. ಒಂದು ಶುಭಲಗ್ನ ವು ಗೊತ್ತಾಯಿತು. ಬಂಧುವರ್ಗಕ್ಕೆಲ್ಲಾ ಔತಣ ಗಳು ಹೋಗಿ, ಅವರು ಒಬ್ಬೊಬ್ಬರಾಗಿ ಬರುತ್ತಾ ಇದ್ದರು. ಇಂಥಾ ಉತ್ಸವಕಾಲದಲ್ಲಿ ರಾಜಕುಮಾರ ಇಲ್ಲದೇ ಇದ್ದರೆ ಸರಿಯಾಗಿದ್ದಿತೆ ? ಈ ಕಾಲದಲ್ಲಿಯೂ ಅತಿಶಯದ ಪುತ್ರನನ್ನು ಕರೆಸಿ ನೋಡದಿದ್ದರೆ ಇನ್ನು ಯಾವಾಗತಾನೆ ಕರೆಸಬೇಕು ? ಎಷ್ಟರಮಟ್ಟಿ ಗೆತಾನೆ ರಚನೆ ಯಾಯಿತು, ಚಂದ್ರ ಇಲ್ಲದ ಇರುಳಿನಹಾಗೆ ಇರದೆ ? ಆದ್ದರಿಂದ ಮಗನನ್ನು ಕರೆತರುವುದಕ್ಕೆ ಆಳುಗಳನ್ನೂ ಪಲ್ಲಕ್ಕಿಯನ್ನೂ ರಾಮ ಜೋಯಿಸನ ಅಗ್ರಹಾರಕ್ಕೆ ಕಳುಹಿಸಿದರು. ಈ ಪ್ರಸ್ತದ ಸಮಾಚಾರವೂ ಅದಕ್ಕಾಗಿ ರಾಜಕುಮಾರನನ್ನು ಕರೆಯುವುದಕ್ಕೆ ಬರುವುದೂ ಸಹಾ ಮುಂಚಿತವಾಗಿಯೇ ರಾಮಜೋ ಯಿಸನಿಗೆ ಗೊತ್ತಾಗಿತ್ತು. ವಿವೇಕದಲ್ಲಿ ಕಾಡಕಲ್ಲಿನ ಹಾಗೆ ಇದ್ದ ರಾಜ ಪುತ್ರನನ್ನು ಅನೇಕ ಉಪಾಯಗಳಿಂದ ಸ್ವಲ್ಪ ಮಟ್ಟಿಗೆ ಸರಿಮಾಡಿ ವಿದ್ಯ ವನ್ನು ಕಲಿಸಿದ್ದ ಜೋಯಿಸನು, ತಂದೇಮನೆಗೆ ಮದನನು ಹೋಗು ವುದರಿಂದುಂಟಾಗುವ ಕೇಡನ್ನು ಯೋಚಿಸಿಕೊಂಡು, ಅವನನ್ನು ಕಳು ಹಿಸುವುದಕ್ಕೆ ಇಷ್ಟವಿಲ್ಲದೇ ಇದ್ದನು, ಆದರೆ ಈ ಲೋಕದಲ್ಲಿ ಒಂದೊಂದು ವೇಳೆ ನಮ್ಮ ಇಷ್ಟಕ್ಕೆ ವಿರೋಧವಾಗಿಯೂ ನಡೆಯಬೇ ಕಾಗುವುದು. ಆದ್ದರಿಂದ ತಂದೇಮನೆಗೆ ಹೋಗಿಬರುತ್ತೇನೆಂದು ಆಶ ಯಿಂದ ಕೇಳಿಕೊಳ್ಳಲು ಬಂದ ಮದನನಿಗೆ, ಆಗಲಿ ಎಂದು ಮನಸ್ಸಿ ಲ್ಲದೆ ಅ ಪ್ಪಣೆಯನ್ನು ಕಾಡಬೇಕಾಯಿತು, ಆದರೆ ಮದನನಿಗೂ ಸುಮತಿಗೂ ವಿಶೇಷವಾಗಿ ಸ್ನೇಹ ಬೆಳೆದಿತ್ತಾದಕಾರಣ, ಅವನನ್ನು ತನ್ನ ಸಂಗಡ ಅರಮನೆಗೆ ಕಳುಹಿಸಬೇಕೆಂದು ಹಠ ಮಾಡಿದನು. ಇದಕ್ಕೂ ರಾಮಜೋಯಿಸ ಒಪ್ಪಿದನು, ಹೀಗೆ ಈ ಇಬ್ಬರು ಹುಡುಗರೂ ಬನ ವಾಸಿಗೆ ಬಂದು ತಲಪಿದರು. ಮಗನು ಬಂದದ್ದು ಮಾನಾಂಬಕಿಗೆ ಬಹು ಸಂತೋಷವಾಯಿತು. ದೊರೆಯ ನಂಟರೆಲ್ಲರೂ ಸಂಸಾರಸಮೇತವಾಗಿ ಪ್ರಸ್ತಕ್ಕೆ ಬಂದಿ ದ್ದರು. ಅಕ್ಷತೇ ಪ್ರಸ್ತವು ವಿಶೇಷವಾಗಿ ಅಟ್ಟಹಾಸದಿಂದ ಜರುಗಿತು.