ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಹಿಡಿದು ಆಗಾಗ್ಗೆ ಡಬ್ಬಿ ಯನ್ನು ತೆಗೆದು ನೆಸ್ಯದ ಚುಟಿಗಿಯನ್ನು ಸೇದುತಾ ಇದ್ದರು. ಈ ರೀತಿಯಲ್ಲಿದ್ದ ಹೆಂಗಸರ ಮಂಡಳಿಯೊಳಕ್ಕೆ, ರಾಜಪುತ್ರನು ತಕ್ಕ ಶೃಂಗಾರವನ್ನು ಮಾಡಿಕೊಂಡು ಬಂದನು, ಆ ರಾಜಾಂಗನೆಯ ರೆಲ್ಲರ ದೃಷ್ಟಿ ಯೂ ಇವನ ಕಡೆಗೆ ತಿರುಗಿತು. ಒಬ್ಬಳು ಅವನ ಕಣ್ಣು ನೋಡು, ಎಷ್ಟು ಅಗಲವಾಗಿದೆ ; ಎಂದಳು. ಇನ್ನೊ ಬ್ಬಳು- ಆ ಮೂಗೂ, ಆ ಹಲ್ಲುಬಾಯಿದೆರೆಯೂ ರಾಜಲಕ್ಷಣಗಳೇ ಸರಿ, ಎಂದಳು. ಇನ್ನೊ ಬ್ಬಳು- ಅವನ ನಡೆಗೆ ಎಷ್ಟು ಠೀವಿಯಾಗಿದೆ ಎಂದಳು. ಒಬ್ಬ ಅರ ಸಿಯು-ಹೆತ್ತರೆ ಇಂಥಾ ಮಗನನ್ನು ಹೆರಬೇಕು, ಎಂದು ನಿಟ್ಟುಸಿರ ಬಿಟ್ಟಳು, ಇನ್ನೊಬ್ಬ ರಾಜಸ್ತ್ರೀಯು-ಅದಕ್ಕೂ ಪುಣ್ಯ ವಿರಬೇಡವೆ ? ಪೂರೈ ಜನ್ಮದಲ್ಲಿ ಈಶ್ವರನ ಪೂಜೆ ಮಾಡಿರಬೇಕು ; ಎಂದಳು. ಅವನ ತಲೆಕೂದಲು ಮೊದಲುಮಾಡಿಕೊಂಡು ಅಂಗುಷ್ಟದ ವರೆಗೂ ಇವನ ಸೌಂದಠ್ಯವನ್ನು ಎಲ್ಲರೂ ಹೊಗಳುವುದಕ್ಕೆ ಮೊದಲು ಮಾಡಿದರು. ಒಬ್ಬ ಬಾಲೆಯು ತಟ್ಟನೆ ಎದ್ದು ಬಂದು ಅವನ ಕೆನ್ನೆಗೆ ಮುತ್ತು ಕೊಟ್ಟಳು. ಒಬ್ಬ ದಿಟ್ಟ ಗಾತಿಯು ಅವನನ್ನು ಎತ್ತಿಕೊಂಡು ಅಪ್ಪಾಜಿ, ನನ್ನನ್ನು ಮದುವೆಯಾಗು ತೀರ ? ಎಂದು ನಗುತಾ ಹಾಸ್ಯ ಮಾಡಿದಳು. ಅವಳ ಹತ್ತಿರ ನಿಂತಿದ್ದ ಚೆಲುವರಸಿ ಎಂಬುವಳು--ನಾನು ಒಲ್ಲೆ, ಚೆಲುವರಸಿಯನ್ನು ಮದುವೆಯಾಗುತೇನೆ, ಎಂದು ಹೇಳಿ ಪುಟ್ಟು ಸ್ವಾಮಿ, ಎಂಬದಾಗಿ ಹೇಳಿಕೊಟ್ಟಳು, ಇದನ್ನೆ ಲ್ಲಾ ಕೇಳಿ ಮದನನಿಗೆ ಮೈ ಉಬ್ಬಿ ಹೋಯಿತು. ಬಹು ಬಿಂಕದಿಂದ ತಾಯಿಯ ಸಮಿಾಪಕ್ಕೆ ಹೋಗಿ ಕೂತುಕೊಂಡನು. ಮದನನೂ ಸುಮತಿಯೂ ಯಾವಾಗಲೂ ಒಟ್ಟಿಗೆ ಇರುತಿದ್ದರು. ರಾಜಕುಮಾರನು ಎಲ್ಲಿ ಹೋದಾಗ್ಯೂ ತನ್ನ ಸಂಗಾತಿಯಾದ ಸುಮತಿ ಯನ್ನು ಬಿಟ್ಟು ಹೋಗುತಿರಲಿಲ್ಲ. ಅವನು ಯಾವಾಗಲೂ ಜೊತೆ ಯಲ್ಲಿಯೇ ಇರುತಿದ್ದನು, ಅವನನ್ನು ಅದೇ ಪ್ರಕಾರ ರಾಣಿವಾಸಕ್ಕೂ ಮದನನು ಕರೆದುಕೊಂಡು ಬಂದನು. ಅಯ್ಯೋ ! ಆ ಸ್ತ್ರೀ ಸಾನ್ನಿಧ್ಯದ ಮಂತ್ರ ಎಂಥಾದ್ದೊ ! ಮದನನು ಒಳಕ್ಕೆ ಹೊಕ್ಕ ಕೂಡಲೆ ಸುಮತಿ