ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯] ಸುಮತಿ ಮದನಕುಮಾರರ ಚರಿತ್ರ ہوو ಅದನ್ನು ಸೇದಬೇಕೆಂದು ಲಲಿ ತೆಗೆ ಬಲವಂತವಾಡಿ, ಬತ್ತಿಯನ್ನು ಒಂದು ಸಾರಿ ಸೇದಿಸಿದನು. ಆ ಕ್ಷಣವೇ ಅವಳಿಗೆ ತಲೆಸುತ್ತಿ ನಮನ ವಾಗುವ ಹಾಗಾಯಿತು. ಆ ವನದ ಒಂದು ಕಡೆ ಓಡಾಡುತಿದ್ದ ಸುಮ ತಿಯು ಬಂದುನೋಡಿ-ಏಕೆ ಹೀಗೆಮಾಡಿದೆ ಎಂದು ಮಂಗರಸನನ್ನು ಕೇಳಲು, ಅವನು ನೀನೇನು ಕೇಳುವುದು ಎಂದು, ಸುಮತಿಯನ್ನು ಹಿಡಿದು ಹೊಡೆಯುವುದಕ್ಕೆ ಪ್ರಾರಂಭಿಸಿದನು. ಮಂಗನು ತನ್ನ ಕೈಲಿದ್ದ ಕಲ್ಲಿನಿಂದ ಮುಖದ ಮೇಲೆ ಮೂರುನಾಲ್ಕು ಏಟ ಹೊಡೆದ ಕಾರಣ ಸುಮತಿಗೆ ಮುಖವೊಡೆದು ಮೈಕೈಯೆಲ್ಲಾ ರಕ್ತವಾಯಿತು. ಈ ವಿಪ `ರೀತವನ್ನು ಕೇಳಿ, ದೊರೆಯು ಅಲ್ಲಿಗೆ ಬಂದು ವಿಚಾರಿಸುವಲ್ಲಿ ಸುಮ ತಿಯು ತಾನೇ ಅಕಸ್ಮಾತ್ತಾಗಿ ತಗಲಿಸಿಕೊಂಡನೆಂದು ಮಂಗ ಮೊದ ಲಾದವರು ಹೇಳಿದರು, ಆದರೆ ಲಲಿತೆಯೂ ಸುಮತಿಯೂ ನಡೆ ದದ್ದನ್ನು ಹೇಳಿಬಿಟ್ಟರು. ಇದನ್ನು ಕೇಳಿ ದೊರೆಯು ಕೋಪಮಾಡಿ ಕೊಂಡು ಹೊರಟುಹೋಗಿ ಸುಮತಿಯ ಹಣೆಮೇಲಿನ ಗಾಯ ಮಾಯುವುದಕ್ಕೆ ತಕ್ಕ ಔಷಧವನ್ನು ಕೊಡಿಸಿದನು, ಕೆಲವು ಹುಡು ಗರು ಮಿಾನಾ೦ಬಕೀದೇವಿಗೆ ಈ ಜಗಳವನ್ನು ಹೇಳುತಾ, ಹೊಗೇಬತ್ತಿ ಯನ್ನು ಸೇದಬೇಕೆಂದು, ಹುಡುಗರಿಗೆಲ್ಲಾ ಸುಮತಿಯೇ ಹೇಳಿ ಕೊಟ್ಟನೆಂತಲೂ, ಎಲ್ಲರನ್ನೂ ಹಿಡಿದು ಸುಮತಿಯೇ ಹೊಡೆದನೆಂತಲೂ ಹೇಳಿದರು. ಅಕ್ಕನ ಸವಿಾಪದಲ್ಲಿಯೇ ಇದ್ದ ಕಮಲಾಂಬಕೀದೇವಿಯು ಕೇಳಿ-ಅಗೊ ನಾನು ಹೇಳಲಿಲ್ಲವೆ ? ಈ ಹಾಳ ಹಾರವರ ಜೊತೆಗೆ ನಮ್ಮ ಹುಡುಗರು ಸೇರಿದರೆ ಹೀಗೆ ಕೆಟ್ಟು ಹೋಗುವರು, ನಮ್ಮ ಅರ ಮನೆಗಳಿಗೆ ಇಂಥಾವರು ಬರಲೇಕೂಡದು, ಅಕ್ಕೆ ಯ್ಯ, ಎಂದಳು, ಕೂಡಲೆ ದೊರೆಯು ಉದ್ಯಾನವನದಿಂದ ಅಲ್ಲಿಗೆ ಬಂದು, ಸುಮತಿ ಯಿಂದ ಯಾವ ತದ್ರೂ ಇಲ್ಲವೆಂದು ಹೇಳುವತನಕ, ಆ ಹುಡುಗನನ್ನು ಬೈಯುತಿದ್ದ ಹೆಂಗಸರ ಹರಟೆಗೆ ಕೊನೆಮಿತಿಯೇ ಇರಲಿಲ್ಲ. - ಈ ದೊರೆ ಮಕ್ಕಳ ಚಲ್ಯಗಳನ್ನು ಕಂಡು ಸುಮತಿಗೆ ಬಹು ಅಸಹ್ಯ ಹಿಡಿಯಿತು. ಆದರೂ ಯಾವ ಮಾತನ್ನೂ ಆಡದೆ ಸುಮ್ಮನೆ ಆದನು. ಬೆಳಗಾದಮೇಲೆ ರಾಜ ಪುತ್ರರೆಲ್ಲರೂ ಸೇರಿ, ಕಾಡು ಸುತ್ತುವು